ಬೆಂಗಳೂರಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ: ಬಲಿಷ್ಠ ಭಾರತಕ್ಕೆ ಆಫ್ಘಾನಿಸ್ತಾನದ ಸವಾಲು


Updated:June 14, 2018, 7:03 AM IST
ಬೆಂಗಳೂರಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ: ಬಲಿಷ್ಠ ಭಾರತಕ್ಕೆ ಆಫ್ಘಾನಿಸ್ತಾನದ ಸವಾಲು

Updated: June 14, 2018, 7:03 AM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಜೂ.14):  ಭಾರತ-ಅಫ್ಘಾನಿಸ್ತಾನ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂ ದ ಬೆಂಗಳೂರಿನಲ್ಲಿ ನಡೆಯಲಿರುವ ಏಕೈಕ ಟೆಸ್ಟ್​ ಪಂದ್ಯ ಹೊಸ ಇತಿಹಾಸವನ್ನೇ ಸೃಷ್ಟಿಸಲಿದೆ. ವಿಶ್ವದ ನಂಬರ್​​​​ 1 ತಂಡ ಟೀಮ್ ಇಂಡಿಯಾ ಒಂದೆಡೆಯಾದ್ರೆ, ಈಗತಾನೇ ಮೊದಲ ಟೆಸ್ಟ್​ ಹೆಜ್ಜೆ ಇಡಲು ಸಜ್ಜಾಗಿರುವ ಅಫ್ಘಾನಿಸ್ತಾನ ಮತ್ತೊಂದೆಡೆ.

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್​ ಇಂಡಿಯಾ ಬಲಾಢ್ಯವಾಗಿದೆ. ರಹಾನೆ ಪಡೆ ಟೆಸ್ಟ್​​ನಲ್ಲಿ ನಂಬರ್​ 1 ಸ್ಥಾನದಲ್ಲಿದೆ. ಇನ್ನು ಅಫ್ಘಾನ್​​ ಇದೇ ಮೊದಲ ಬಾರಿಗೆ ವೈಟ್​ ಜೆರ್ಸಿಯಲ್ಲಿ ಕಂಗೊಳಿಸಲಿದ್ದು, ಟೆಸ್ಟ್​​​ ಫಾರ್ಮೆಟ್​​ನಲ್ಲೂ ಮಿಂಚಲು ಪ್ಲಾನ್ ಮಾಡಿಕೊಂಡಿದೆ. ಅಂದಹಾಗೆ ಈ ಪಂದ್ಯದಲ್ಲಿ ಜಯ ಸಾಧಿಸಿ, ಟೆಸ್ಟ್​​ ಪಾದಾರ್ಪಣೆ ಅವಿಸ್ಮರಣೀಯವಾಗಿಸುವ ಲೆಕ್ಕಾಚಾರ ಆಫ್ಘಾನ್​ ತಂಡದ್ದಾಗಿದೆ.

ಹೌದು.. ಅಜಿಂಕ್ಯ ರಹಾನೆ ಪಡೆಯ ಬ್ಯಾಟಿಂಗ್​ ಬಲಾಢ್ಯವಾಗಿದೆ. ಕೆಳಕ್ರಮಾಂಕದವರೆಗೂ ರನ್​​ಗಳನ್ನು ಕಲೆ ಹಾಕಬಲ್ಲ ಆಟಗಾರರು ಇದ್ದಾರೆ. ಭಾರತ ತಂಡದ ಪರ ಯಾರು ಆರಂಭಿಕರಾಗಿ ಕಣಕ್ಕೆ ಇಳಿಯುತ್ತಾರೆ ಎಂಬುದೇ ಸದ್ಯಕ್ಕೆ ಪ್ರಶ್ನೆಯಾಗಿ ಉಳಿದಿದೆ. ತವರಿನಲ್ಲಿ ಆಡುತ್ತಿರುವುದರಿಂದ ರಾಹುಲ್​​​ಗೆ ಸ್ಥಾನ ಸಿಗುವ ಅವಕಾಶ ಹೆಚ್ಚಾಗಿದೆ. ಸದ್ಯದ ಫಾರ್ಮ್​​ ಅನ್ನು ಗಮನದಲ್ಲಿಟ್ಟುಕೊಂಡು ನೋಡೋದಾದರೆ ಶಿಖರ್​ ಧವನ್​​ಗೆ ಅವಕಾಶ ಸಿಗುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಒಂದು ವೇಳೆ ಮುರಳಿ ವಿಜಯ್​​ಗೆ ಸ್ಥಾನ ಸಿಕ್ಕಲ್ಲಿ, ರಾಹುಲ್​ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಹೆಚ್ಚಿದೆ.

ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್​ ಪೂಜಾರ, ಆಫ್ಘಾನ್​ ಬೌಲರ್​​ಗಳನ್ನು ಕಾಡಬಲ್ಲರು. ನಾಯಕ ಅಜಿಂಕ್ಯಾ ರಹಾನೆ, ದಿನೇಶ್​ ಕಾರ್ತಿಕ್​ ತಮ್ಮ ಅನುಭವವನ್ನು ಬಳಸಿಕೊಂಡು ಆಡಿದ್ದಲ್ಲಿ ದೊಡ್ಡ ಮೊತ್ತ ಫಿಕ್ಸ್​.. ಆಲ್​ರೌಂಡರ್​ ರೂಪದಲ್ಲಿ ಕಾಣಿಸಿಕೊಳ್ಳುವ ರವಿಚಂದ್ರನ್​ ಅಶ್ವಿನ್​ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್​​ನಲ್ಲೂ ತಂಡಕ್ಕೆ ನೆರವಾಗಬಲ್ಲ ಆಟಗಾರರು.

ಅಫ್ಘನ್ ತಂಡವನ್ನ ಹಗುರವಾಗಿ ಪರಿಗಣಿಸಿಲ್ಲ..!: ಹೌದು, ಅಫ್ಘಾನಿಸ್ತಾನ ತಂಡವನ್ನ ಟೀಮ್ ಇಂಡಿಯಾ ಹಗುರವಾಗಿ ಪರಿಗಣಿಸಿಲ್ಲ. ಹೀಗಂತ ಟೀಮ್ ಇಂಡಿಯಾ ನಾಯಕ ಅಜಿಂಕ್ಯಾ ರಹಾನೆ ಹೇಳಿದ್ದಾರೆ. ಟೆಸ್ಟ್​​ ಪಂದ್ಯವನ್ನು ಇದೇ ಮೊದಲ ಬಾರಿಗೆ ಆಡುತ್ತಿರುವ ಅಫ್ಘಾನಿಸ್ತಾನ ತಂಡದಲ್ಲಿ ಸ್ಟಾರ್​​​ ಬೌಲರ್​​ಗಳಿ ಇದ್ದಾರೆ. ಐಪಿಎಲ್​​ನಲ್ಲಿ ಆಡಿ ಭೇಷ್​ ಎನಿಸಿಕೊಂಡಿರುವ ಸ್ಟಾರ್​​ ಬೌಲರ್​ ರಶೀದ್​ ಖಾನ್​ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಕಿಂಗ್ಸ್​ ಇಲೆವನ್​ ಪಂಜಾಬ್​ ತಂಡದ ಪರ ಬೌಲ್​ ಮಾಡಿದ್ದ ಮುಜಿಬ್​ ರಹಮಾನ್​​ ಎದುರಾಳಿಗಳಿಗೆ ಕಾಡಬಲ್ಲರು. ಇನ್ನು ಬ್ಯಾಟಿಂಗ್​ ವಿಭಾಗದಲ್ಲಿ ಆತಿಥೇಯ ತಂಡಕ್ಕೆ ತಿರುಗೇಟು ನೀಡಬಲ್ಲರು. ಒಟ್ಟಾರೆ ಭಾರತ-ಅಫ್ಘಾನಿಸ್ತಾದ ನಡುವೆ ಏಕೈಕ ಟೆಸ್ಟ್ ಪಂದ್ಯ ನಡೆಯುತ್ತಿದ್ದರೂ ಹಲವಾರು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.

 
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...