ಭಾರತ-ಶ್ರೀಲಂಕಾ ಅಂಡರ್-19: ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡ ಭಾರತ

news18
Updated:July 30, 2018, 5:43 PM IST
ಭಾರತ-ಶ್ರೀಲಂಕಾ ಅಂಡರ್-19: ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡ ಭಾರತ
news18
Updated: July 30, 2018, 5:43 PM IST
ನ್ಯೂಸ್ 18 ಕನ್ನಡ

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಅಂಡರ್-19 ತಂಡ ಈಗಾಗಲೇ ಟೆಸ್ಟ್​ ಪಂದ್ಯದಲ್ಲಿ ಗೆದ್ದು ಸರಣಿ ಕೈವಶ ಮಾಡಿದ್ದು, ಈಗ ಏಕದಿನ ಪಂದ್ಯದಲ್ಲು ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದೆ.

ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಅಂಡರ್-19 ತಂಡ 38.4 ಓವರ್​​​​​ನಲ್ಲಿ ಕೇವಲ 143 ರನ್​​ಗೆ ಆಲೌಟ್ ಆಯಿತು. ನಿಪುಣ್ ಮಾಲಿಂಗ 38 ಹಾಗೂ ನಾಯಕ ನಿಪುಣ್ ಧನಂಜಯ್ 33 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 20ರ ಗಡಿ ದಾಟಲಿಲ್ಲ. ಭಾರತ ಅಂಡರ್-19 ಪರ ಮಾರಕ ದಾಳಿ ನಡೆಸಿದ ಅಜಯ್ ದೇವ್ ಗೌಡ್ 3 ವಿಕೆಟ್ ಪಡೆದು ಮಿಂಚಿದರೆ, ಜಂಗ್ರಾ, ಮಂಗ್ವಾನಿ ಹಾಗೂ ಬಡೋನಿ ತಲಾ 2 ವಿಕೆಟ್ ಕಿತ್ತರು. ಸಿದ್ಧಾರ್ಥ್ ದೇಸಾಯ್ 1 ವಿಕೆಟ್ ಪಡೆದರು.

144 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಟೆಸ್ಟ್​ ಪಂದ್ಯದಲ್ಲಿ ಮಿಂಚಿದ್ದ ಪವನ್ ಷಾ ಆರಂಬದಲ್ಲೇ ಕೇವಲ 12 ರನ್​ಗೆ ನಿರ್ಗಮಿಸದರೆ, ಜೈಸ್ವಾಲ್ 15, ಜುಯಾಲ್ 20 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಅನುಜ್ ರಾವತ್ ಅವರ ಅರ್ಧಶತಕ ಹಾಗೂ ಅಮೀರ್ ಚೌಧ್ರೀ ಅವರ ಅಜೇಯ 31 ರನ್​ಗಳ ನೆರವಿನಿಂದ ಭಾರತ ಅಂಡರ್-19 ತಂಡ 37.1 ಓವರ್​​ನಲ್ಲಿ 4 ವಿಕೆಟ್ ಕಳೆದುಕೊಂಡು 144 ರನ್ ಬಾರಿಸಿ ಗೆಲುವು ಸಾಧಿಸಿತು. ಶ್ರೀಲಂಕಾ ಪರ ಲಕ್ಷಿತ್ ಮಾನಸಿಂಗ್ 2 ವಿಕೆಟ್ ಪಡೆದರೆ, ಅವಿಷ್ಕಾ ಹಾಗೂ ಮೆಂಡೀಸ್ ತಲಾ 1 ವಿಕೆಟ್ ಪಡೆದರು.

ಈ ಮೂಲಕ ಭಾರತ ಅಂಡರ್-19 ತಂಡ 6 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದ್ದು, 5 ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು 1-0ಯ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯ ಆಗಸ್ಟ್​ 2ರಂದು ಕೊಲಂಬೊದಲ್ಲಿ ನಡೆಯಲಿದೆ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ