ಅಂಡರ್-19 ಏಕದಿನ; ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ; ಸರಣಿ ಸಮಬಲ

news18
Updated:August 7, 2018, 6:36 PM IST
ಅಂಡರ್-19  ಏಕದಿನ; ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ; ಸರಣಿ ಸಮಬಲ
news18
Updated: August 7, 2018, 6:36 PM IST
ನ್ಯೂಸ್ 18 ಕನ್ನಡ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಬಾರತ ಹಾಗೂ ಶ್ರೀಲಂಕಾ ಅಂಡರ್-19 ತಂಡಗಳ ನಡುವಣ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಅಂಡರ್-19 ತಂಡ 135 ರನ್​ಗಳ ಭರ್ಜರಿ ಜಯ ಕಂಡಿದೆ. ಭಾರತ ನೀಡಿದ್ದ 279 ರನ್​ಗಳ ಗುರಿ ಬೆನ್ನಟ್ಟಿದ ಲಂಕಾ ತಂಡ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 143 ರನ್​ಗೆ ಸರ್ವಪತನ ಕಂಡಿತು. ಶ್ರೀ ಲಂಕಾ ಪರ ಪರನವಿತನಾ 45 ಹಾಗೂ ನಾಯಕ ಧನಂಜಯ್ 36 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರ ಸ್ಕೋರ್ 20ರ ಗಡಿ ದಾಟಲಿಲ್ಲ. ಭಾರತ ಪರ ಬದೊನಿ ಹಾಗೂ ತ್ಯಾಗಿ ತಲಾ 3 ವಿಕೆಟ್ ಪಡೆದರೆ, ಆಕಾಶ್ ಪಾಂಡೆ, ಸಿದ್ಧಾರ್ಥ್​ ದೇಸಾಯಿ ಹಾಗೂ ಅಥರ್ವ ತೈದೆ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಅಂಡರ್-19 ತಂಡ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು ದೇವದತ್ ಪಡಿಕ್ಕಲ್ ಅವರ 71 ರನ್, ನಾಯಕ ಆರ್ಯನ್ ಜುಯಲ್ 60 ಹಾಗೂ ಯಶ್ ರಾಥೋಡ್ 56 ರನ್​ಗಳ ನೆರವಿನಿಂದ 50 ಓವರ್​​ನಲ್ಲಿ 6 ವಿಕೆಟ್ ಕಳೆದುಕೊಂಡು 278 ರನ್ ಕಲೆಹಾಕಿತು. ಲಂಕಾ ಪರ ಲಕ್ಷಣ್ ಹಾಗೂ ಮೆಂಡಿಸ್ 2 ವಿಕೆಟ್ ಕಿತ್ತರೆ, ವಿಜಯ್​ಕುಮಾರ ಹಾಗೂ ದುಲ್ಶನ್ ತಲಾ 1 ವಿಕೆಟ್ ಪಡೆದರು.

ಸದ್ಯ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಎರಡೆರಡು ಪಂದ್ಯ ಗೆದ್ದು ಸಮಬಲ ಸಾಧಿಸಿದ್ದು, ಆಗಸ್ಟ್​ 10 ರಂದು ನಡೆಯಲಿರುವ ಅಂತಿಮ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ