ಅಂಡರ್-19 ಕ್ರಿಕೆಟ್; ಮೊದಲ ದಿನ ಲಂಕಾ ವಿರುದ್ಧ ಭಾರತದ ಮೇಲುಗೈ; ಸಚಿನ್ ಪುತ್ರನಿಗೆ ಚೊಚ್ಚಲ ವಿಕೆಟ್ ಸಂಭ್ರಮ


Updated:July 17, 2018, 7:43 PM IST
ಅಂಡರ್-19 ಕ್ರಿಕೆಟ್; ಮೊದಲ ದಿನ ಲಂಕಾ ವಿರುದ್ಧ ಭಾರತದ ಮೇಲುಗೈ; ಸಚಿನ್ ಪುತ್ರನಿಗೆ ಚೊಚ್ಚಲ ವಿಕೆಟ್ ಸಂಭ್ರಮ
(ಪ್ರಾತಿನಿಧಿಕ ಚಿತ್ರ)

Updated: July 17, 2018, 7:43 PM IST
- ನ್ಯೂಸ್18 ಕನ್ನಡ

ಕೊಲಂಬೋ(ಜು. 17): ಭಾರತ ಮತ್ತು ಶ್ರೀಲಂಕಾ ಅಂಡರ್-19 ತಂಡಗಳ ನಡುವೆ ಇಂದು ಆರಂಭಗೊಂಡ ನಾಲ್ಕು ದಿನಗಳ ಪಂದ್ಯದಲ್ಲಿ ಭಾರತೀಯರಿಗೆ ಮೊದಲ ದಿನದ ಮೇಲುಗೈ ಸಿಕ್ಕಿದೆ. ಲಂಕನ್ನರನ್ನು ಮೊದಲ ಇನ್ನಿಂಗ್ಸಲ್ಲಿ 244 ರನ್ನಿಗೆ ಆಲೌಟ್ ಮಾಡಿದ ಭಾರತೀಯರು ಮೊದಲ ದಿನಾಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ. ಟೀಮ್ ಇಂಡಿಯಾ ನಾಯಕ ಅನುಜ್ ರಾವತ್ 59 ಎಸೆತದಲ್ಲಿ 63 ರನ್ ಗಳಿಸಿ ಭಾರತದ ಇನ್ನಿಂಗ್ಸ್​ಗೆ ಬುನಾದಿ ಹಾಕಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕನ್ನರಿಗೆ 2 ಮತ್ತು 5 ನೇ ವಿಕೆಟ್​ ಬಿಟ್ಟರೆ ಉತ್ತಮ ಜೊತೆಯಾಟ ಬರಲಿಲ್ಲ. ಪಸಿಂದು ಸೂರಿಯಬಂಡಾರ ಅವರೊಬ್ಬರು ಮಾತ್ರ ಅರ್ಧಶತಕ ಭಾರಿಸಿದ್ದು. ನಾಯಕ ನಿಪುನ್ ದನಂಜಯ, ವಿಕೆಟ್​​ಕೀಪರ್ ನಿಶಾನ್ ಮಧುಶ್ಕ ಮತ್ತು ಎಸ್. ಮೆಂಡಿಸ್ ಅವರು ತಲಾ 39 ರನ್ ಗಳಿಸಿದರು. ಅದರ ಫಲವಾಗಿ ಆತಿಥೇಯ ಶ್ರೀಲಂಕನ್ನರು 244 ರನ್ ಗಳಿಸಲು ಶಕ್ಯರಾದರು.

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ಎರಡನೇ ಓವರ್​ನಲ್ಲೇ ವಿಕೆಟ್ ಗಳಿಸಿ, ಅಂಡರ್-19 ತಂಡಕ್ಕೆ ತಮ್ಮ ಆಯ್ಕೆಯನ್ನು ಸಮರ್ಥಿಸಿದರು. ತಮ್ಮ ವೇಗದ ಬೌಲಿಂಗ್ ಮೂಲಕ ಲಂಕಾ ಬ್ಯಾಟುಗಾರರನ್ನು ಕಂಗೆಡಿಸಿದರು. ಆದರೆ, ಒಂದಕ್ಕಿಂತ ಹೆಚ್ಚು ವಿಕೆಟ್ ಅವರಿಗೆ ಲಭ್ಯವಾಗಲಿಲ್ಲ. ಇನ್ನು, ಹರೀಶ್ ತ್ಯಾಗಿ ಮತ್ತು ಆಯುಷ್ ಬದೋನಿ ಅವರ ಸ್ಪಿನ್ ಗಾಳಕ್ಕೆ ಲಂಕನ್ನರು ತರಗೆಲೆಗಳಂತೆ ಉದುರಿದರು. ಇಬ್ಬರೂ ತಲಾ 4 ವಿಕೆಟ್ ಪಡೆದು ಗಮನ ಸೆಳೆದರು. ಬದೋನಿ ಅವರಂತೂ ತಮ್ಮ 4 ವಿಕೆಟ್ ಬದಲಿಗೆ ಎದುರಾಳಿಗಳಿಗೆ ಕೊಟ್ಟಿದ್ದು ಕೇವಲ 24 ರನ್ ಮಾತ್ರ.

ನಾಳೆ ಎರಡನೇ ದಿನದಂದು ಅನೇಕ ಕಣ್ಣು ಅರ್ಜುನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ಮೇಲೆ ನೆಟ್ಟಿರಲಿದೆ. ಆಲ್​ರೌಂಡರ್ ಆಗಿರುವ ಅರ್ಜುನ್ ಅವರಿಗೆ ಇಂದು ಬೌಲಿಂಗ್​ನಲ್ಲಿ ಹೆಚ್ಚು ಅವಕಾಶ ಸಿಗದೇ ಹೋದರೂ ನಾಳೆ ಬ್ಯಾಟಿಂಗ್​ನಲ್ಲಿ ಮಿಂಚುವ ಚಾನ್ಸ್ ಇದೆ.

ಸ್ಕೋರು ವಿವರ:

ಶ್ರೀಲಂಕಾ ಅಂಡರ್-19 ತಂಡ 70.3 ಓವರ್ 244/10
Loading...

(ಪಸಿಂದು ಸೂರಿಯಬಂಡಾರ 69, ಎಸ್.ಮೆಂಡಿಸ್ 39, ನಿಶಾನ್ ಮದುಷ್ಕಾ 39, ನಿಪುಣ್ ದನಂಜಯ 39, ಎನ್. ಫರ್ನಾಂಡೋ 22 ರನ್ – ಆಯುಷ್ ಬಡೋನಿ 24/4, ಹರೀಶ್ ತ್ಯಾಗಿ 92/4)

ಭಾರತ ಅಂಡರ್-19 ತಂಡ 16.4 ಓವರ್ 92/1
(ಅನುಜ್ ರಾವತ್ 63, ಅಥರ್ವ ಟೈಡೆ ಅಜೇಯ 26 ರನ್)
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ