ಅಂಡರ್-19 ಏಷ್ಯಾ ಕಪ್: ಬಾಂಗ್ಲಾರನ್ನ ಬಗ್ಗು ಬಡಿದು ಫೈನಲ್​​​ಗೆ ಲಗ್ಗೆ ಇಟ್ಟ ಭಾರತ

news18
Updated:October 4, 2018, 7:10 PM IST
ಅಂಡರ್-19 ಏಷ್ಯಾ ಕಪ್: ಬಾಂಗ್ಲಾರನ್ನ ಬಗ್ಗು ಬಡಿದು ಫೈನಲ್​​​ಗೆ ಲಗ್ಗೆ ಇಟ್ಟ ಭಾರತ
(ಪ್ರಾತಿನಿಧಿಕ ಚಿತ್ರ)
  • Advertorial
  • Last Updated: October 4, 2018, 7:10 PM IST
  • Share this:
ನ್ಯೂಸ್ 18 ಕನ್ನಡ

ಅಂಡರ್-19 ಏಷ್ಯಾ ಕಪ್​​ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಇಂದು ನಡೆದ ಬಾಂಗ್ಲಾದೇಶ ವಿರುದ್ಧದ ಸೆಮಿ ಫೈನಲ್ ಕಾದಾಟದಲ್ಲಿ ಭಾರತ ಅಂಡರ್-19 ತಂಡ 2 ರನ್​​ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಅಂಡರ್-19 ಏಷ್ಯಾ ಕಪ್​​ನಲ್ಲಿ ಭಾರತ ತಂಡ ಫೈನಲ್​​​ಗೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸೆಮೀಸ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ತಂಡದ ಪರ ಯಶಸ್ವಿ ಜೈಸ್ವಾಲ್ 37 ರನ್ ಗಳಿಸಿದರೆ, ಸಮೀರ್ ಚೌಧರಿ 36 ಹಾಗೂ ಅನುಜ್ ರಾವತ್ 35 ರನ್ ಮತ್ತು ಆಯುಶ್ ಬಾದೋನಿ 28 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​​​​ಗಳ ಸ್ಕೋರ್ 10ರ ಗಡಿ ದಾಟಲಿಲ್ಲ. ಪರಿಣಾಮ ಭಾರತ 49.3 ಓವರ್​​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 172 ರನ್ ಕಲೆಹಾಕಿತು.

173 ರನ್​ಗಳ ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾಕ್ಕೆ ಉತ್ತಮ ಆರಂಭ ಸಿಕ್ಕಿಲ್ಲವಾದರು, 6ನೇ ವಿಕೆಟ್​ಗೆ ಶಮಿಮ್ ಹೊಸೈನ್ ಹಾಗೂ ಅಕ್ಬರ್ ಅಲಿ 74 ರನ್​ಗಳ ಜೊತೆಯಾಟ ನೀಡಿ  ತಂಡಕ್ಕೆ ಗೆಲುವಿನ ಹಾದಿ ಸುಗಮವಾಗಿಸಿದರು. 45 ರನ್ ಬಾರಿಸಿದ್ದಾಗ ಅಕ್ಬರ್ ಔಟ್ ಆದರೆ, ಹೊಸೈನ್ 59 ರನ್​ಗೆ ನಿರ್ಗಮಿಸಿದರು. ಆದರೆ ಬಳಿಕ ಬಂದ ಬ್ಯಾಟ್ಸ್​​ಮನ್​​ಗಳು ರನ್​​​ ಕಲೆಹಾಕುವಲ್ಲಿ ವಿಫಲರಾದರು. ಬಳಿಕ ಒಬ್ಬರಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದ ಬಾಂಗ್ಲಾ ಬ್ಯಾಟ್ಸ್​ಮನ್​​ಗಳು ಅಂತಿಮವಾಗಿ 46.2 ಓವರ್​​ನಲ್ಲಿ 170 ರನ್ ಗಳಿಸಿದ್ದಾಗ ಆಲೌಟ್ ಆಯಿತು. ಭಾರತ ಪರ ಮೋಹಿತ್ ಹಾಗೂ ಸಿದ್ಧಾರ್ಥ್​​ ದೇಶಾಯ್ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ಹರ್ಷ್ ತ್ಯಾಗಿ 2 ವಿಕೆಟ್ ಪಡೆದರು.

ಈ ಮೂಲಕ ಸೆಮೀಸ್​ನ ರೋಚಕ ಕದನಲ್ಲಿ ಭಾರತ ಅಂಡರ್-19 ತಂಡ 2 ರನ್​​ಗಳ ಜಯದೊಂದಿಗೆ ಫೈನಲ್ ಹಂತಕ್ಕೆ ತಲುಪಿದೆ. ಅಕ್ಟೋಬರ್ 07ಕ್ಕೆ ಶ್ರೀಲಂಕಾ ಅಥವಾ ಅಫ್ಘಾನಿಸ್ತಾನ ವಿರುದ್ಧ ಫೈನಲ್​ನಲ್ಲಿ ಸೆಣೆಸಾಟ ನಡೆಸಲಿದೆ.

First published:October 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ