ಅಂಡರ್-19 ಯೂಥ್ ಟೆಸ್ಟ್​: ಶ್ರೀಲಂಕಾ ವಿರುದ್ಧ ಸರಣಿ ಕೈವಶ ಮಾಡಿಕೊಂಡ ಭಾರತ ಅಂಡರ್-19

news18
Updated:July 27, 2018, 8:11 PM IST
ಅಂಡರ್-19 ಯೂಥ್ ಟೆಸ್ಟ್​: ಶ್ರೀಲಂಕಾ ವಿರುದ್ಧ ಸರಣಿ ಕೈವಶ ಮಾಡಿಕೊಂಡ ಭಾರತ ಅಂಡರ್-19
news18
Updated: July 27, 2018, 8:11 PM IST
ನ್ಯೂಸ್ 18 ಕನ್ನಡ

ಹ್ಯಾಂಬಂಟೊಟ (ಜುಲೈ. 27): ಶ್ರೀಲಂಕಾದಲ್ಲಿ ನಡೆದ ಅಂಡರ್-19 ಎರಡನೇ ಯೂಥ್ ಟೆಸ್ಟ್​​ನಲ್ಲಿ ಶ್ರೀಲಂಕಾ ಅಂಡರ್-19 ವಿರುದ್ಧ ಭಾರತ ಇನ್ನಿಂಗ್ಸ್​ ಹಾಗೂ 147 ರನ್​ಗಳ ಜಯ ಸಾಧಿಸಿ ಸರಣಿ ಕೈ ವಶ ಮಾಡಿಕೊಂಡಿದೆ. ಸಿದ್ಧಾರ್ಥ್​ ದೇಸಾಯ್ ಅವರ ಮಾರಕ ಬೌಲಿಂಗ್ ದಾಳಿಗೆ ಶ್ರೀಲಂಕಾ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ದಾರಿ ಹಿಡಿದು, ಭಾರತ 2-0 ಅಂತರದ ಜಯ ಸಾಧಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಪವನ್ ಷಾ ಅವರ 282 ರನ್​ಗಳ ಕೊಡುಗೆಯ ಫಲವಾಗಿ ಭಾರತ ಅಂಡರ್-19 ತಂಡ 613 ರನ್​ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಶ್ರೀ ಲಂಕಾ 316 ರನ್​ಗೆ ಆಲೌಟ್ ಆಯಿತು. ಬಳಿಕ ಎರಡನೇ ಇನ್ನಿಂಗ್ಸ್​ ಆರಂಭಿಸಿ ಶ್ರೀಲಂಕಾಕ್ಕೆ ಯಾವುದೇ ಬ್ಯಾಟ್ಸ್​ಮನ್​ಗಳು ಕ್ರೀಸ್​ ಕಚ್ಚಿ ಆಡಲಿಲ್ಲ. ಫೆರ್ನಾಂಡೋ 28 ಹಾಗೂ ಮೆಂಡೀಸ್ 26 ರನ್ ಪೇರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಒಬ್ಬರಹಿಂದೆ ಒಬ್ಬರಂತೆ ನಿರ್ಗಮಿಸಿದರು. ಅಂತಿಮವಾಗಿ ಶ್ರೀಲಂಕಾ ಕೇವಲ 150 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ಸಿದ್ಧಾರ್ಥ್​​​ ದೇಸಾಯ್ 4 ವಿಕೆಟ್ ಕಿತ್ತು ಮಿಂಚಿದರೆ, ಮಂಗ್ವಾನಿ ಹಾಗೂ ಬಡೋನಿ 2 ವಿಕೆಟ್ ಪಡೆದರು. ಅಂತೆಯೆ ಜಂಗ್ರಾ ಹಾಗೂ ಅರ್ಜುರ್ ತೆಂಡೂಲ್ಕರ್ ತಲಾ 1 ವಿಕೆಟ್ ತೆಗೆದರು.

ಈ ಮೂಲಕ ಶ್ರೀಲಂಕಾ ವಿರುದ್ಧದ 2 ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಎರಡನ್ನು ಗೆದ್ದಿರುವ ಭಾರತ ಅಂಡರ್-19 ತಂಡ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇನ್ನು ಏಕದಿನ ಸರಣಿ ಆರಂಭವಾಗಲಿದ್ದು ಜುಲೈ 30 ರಂದು ಮೊದಲ ಪಂದ್ಯ ನಡೆಯಲಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...