ಅಶ್ವಿನ್-ಜಡೇಜಾ ದಾಳಿಗೆ ಅಫ್ಘಾನಿಸ್ತಾನ ತತ್ತರ: ಐತಿಹಾಸಿಕ ಟೆಸ್ಟ್​​ನಲ್ಲಿ ಭಾರತಕ್ಕೆ ಒಲಿದ ಜಯ

news18
Updated:June 15, 2018, 6:00 PM IST
ಅಶ್ವಿನ್-ಜಡೇಜಾ ದಾಳಿಗೆ ಅಫ್ಘಾನಿಸ್ತಾನ ತತ್ತರ: ಐತಿಹಾಸಿಕ ಟೆಸ್ಟ್​​ನಲ್ಲಿ ಭಾರತಕ್ಕೆ ಒಲಿದ ಜಯ
news18
Updated: June 15, 2018, 6:00 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಜೂ. 15): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ಹೀನಾಯ ಸೋಲುಂಡಿದೆ. ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಆಫ್ಘಾನಿಸ್ತಾನ ತಂಡ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಇನ್ನಿಂಗ್ಸ್ ಹಾಗೂ  262 ರನ್​ಗಳ ಸೋಲನುಭವಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಗಳಿಸಿದ್ದ 474 ರನ್​ಗಳಿಗೆ ಪ್ರತಿಯಾಗಿ ಆಫ್ಘಾನಿಸ್ತಾನ ತಂಡ ಎರಡೂ ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 109 ಮತ್ತು 103 ರನ್​ಗಳಿಗೆ ಆಲೌಟ್ ಆಯಿತು. ಟೆಸ್ಟ್ ಕ್ರಿಕೆಟ್​ನಲ್ಲಿ ಆಫ್ಘನ್ನರ ಅನುಭವದ ಕೊರತೆ ಪ್ರತೀ ಹಂತದಲ್ಲೂ ಎದ್ದು ಕಾಣುತ್ತಿತ್ತು. ರಶೀದ್ ಖಾನ್, ಮುಜೀದ್ ಸ್ಪಿನ್ ಮ್ಯಾಜಿಕ್ ಇಲ್ಲಿ ಕೆಲಸಕ್ಕೆ ಬರಲಿಲ್ಲ. ಬಲಿಷ್ಠ ಭಾರತದೆದುರು ಆಫ್ಘಾನಿಸ್ತಾನ ಸೊಲ್ಲೆತ್ತದೆ ಸೋಲೊಪ್ಪಿಕೊಂಡಿತು.

ನಿನ್ನೆ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿದ್ದ ಭಾರತ ತಂಡ ಇವತ್ತು ಬ್ಯಾಟಿಂಗ್ ಮುಂದುವರೆಸಿತು. ಎರಡನೇ ದಿನದ ಆಟದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯಾ 71 ರನ್ ಸಿಡಿಸಿ ತಂಡದ ಸ್ಕೋರ್​ ಅನ್ನು 400ರ ಗಡಿ ದಾಟಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ 474 ರನ್​ಗೆ ಆಲೌಟ್ ಆಯಿತು.

ಬಳಿಕ ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ ತಂಡ 50 ರನ್ ಆಗುವ ಹೊತ್ತಿಗೆ ತನ್ನ ಪ್ರಮುಖ 6 ವಿಕೆಟ್ ಕಳೆದುಕೊಂಡು ದುಸ್ತಿತಿಗೆ ತಲುಪಿತು. ಆರ್​. ಅಶ್ವಿನ್ ಅವರ ಸ್ಪಿನ್ ದಾಳಿಗೆ ಅಫ್ಘಾನಿಸ್ತಾನ ಬ್ಯಾಟ್ಸ್​ಮನ್​ಗಳ ಬಳಿ ಉತ್ತರವೇ ಇರಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ 109 ರನ್​ಗೆ ಆಲೌಟ್ ಆಗುವುದರೊಂದಿಗೆ 256 ರನ್​ಗಳ ಹಿನ್ನಡೆ ಅನುಭವಿಸಿ ಫಾಲೋಆನ್​ಗೆ ಸಿಲುಕಿತು.

ಫಾಲೋಆನ್​ನಲ್ಲಿ ಕೂಡ ಆಫ್ಘಾನಿಸ್ಥಾನ ಬ್ಯಾಟ್ಸ್​ಮನ್​ಗಳು ಮತ್ತದೆ ಪೆವಿಲಿಯನ್ ಕಡೆ ಮುಖಮಾಡಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಹಶ್ಮತುಲ್ಲಾ ಶಾಹಿದಿ ಅಜೇಯ 36 ಹಾಗೂ ಅಸ್ಗರ್ ಸ್ಟಾನಿಕ್​​​​ಘೈ 25 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 20ರ ಗಡಿ ದಾಟಲಿಲ್ಲ. ಜಡೇಜಾ ಅವರ ಸ್ಪಿನ್ ಮೋಡಿಗೆ ತರೆಗೆಲೆಗಳಂತೆ ಉರುಳಿದ ಆಫ್ಘನ್ ಬ್ಯಾಟಿಂಗ್ ಪಡೆ 103 ರನ್​ಗೆ ಆಲೌಟ್ ಆಗುವ ಮೂಲಕ ಟೆಸ್ಟ್​ ಪಾದಾರ್ಪಣೆಯಲ್ಲೇ ಹೀನಾಯ ಸೋಲುಂಡಿತು. ಮೊದಲನೇ ಇನ್ನಿಂಗ್ಸ್​​ನಲ್ಲಿ ಅಶ್ವಿನ್  4 ವಿಕೆಟ್ ಪಡೆದು ಮಿಂಚಿದರೆ, ಎರಡನೇ ಇನ್ನಿಂಗ್ಸ್​ನಲ್ಲಿ ಜಡೇಜಾ 4 ವಿಕೆಟ್ ಕಿತ್ತು ಭಾರತದ ಗೆಲುವಿಗೆ ಕಾರಣರಾದರು. ಜೊತೆಗೆ ಉಮೇಶ್ ಯಾದವ್ 3, ಇಶಾಂತ್ ಶರ್ಮಾ 2 ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
Loading...

ಭಾರತ: 474

(ಶಿಖರ್ ಧವನ್ 107, ಮುರಳಿ ವಿಜಯ್ 105, ಹಾರ್ದಿಕ್ ಪಾಂಡ್ಯ 71, ಯಮಿನ್ ಅಹ್ಮದ್​​​​ಜೈ 51/3, ವಫದಾರ್ 100/1, ರಶೀದ್ ಖಾನ್ 154/2)

ಅಫ್ಘಾನಿಸ್ತಾನ: 109(ಮೊದಲನೇ ಇನ್ನಿಂಗ್ಸ್​​)

(ಮಹ್ಮದ್ ನಬಿ 24, ಮುಜೀದ್ ಉರ್ ರೆಹಮಾನ್ 15, ಆರ್​. ಅಶ್ವಿನ್ 27/4, ಜಡೇಜಾ 18/2)

ಅಫ್ಘಾನಿಸ್ತಾನ: 103(ಎರಡನೇ ಇನ್ನಿಂಗ್ಸ್​​)

(ಹಶ್ಮತುಲ್ಲಾ ಶಾಹಿದಿ ಅಜೇಯ 36, ಅಸ್ಗರ್ ಸ್ಟಾನಿಕ್​​​​ಘೈ 25, ರವೀಂದ್ರ ಜಡೇಜಾ 17/4, ಉಮೇಶ್ ಯಾದವ್ 26/3, ಇಶಾಂತ್ ಶರ್ಮಾ 17/2)
First published:June 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...