• Home
  • »
  • News
  • »
  • sports
  • »
  • IND vs BAN 2022: ಭಾರತ-ಬಾಂಗ್ಲಾದೇಶ್ ಕದನ, ಸರಣಿ ಯಾವಾಗ ಆರಂಭ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

IND vs BAN 2022: ಭಾರತ-ಬಾಂಗ್ಲಾದೇಶ್ ಕದನ, ಸರಣಿ ಯಾವಾಗ ಆರಂಭ? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

IND vs BAN 2022

IND vs BAN 2022

IND vs BAN 2022: ಟಿ20 ವಿಶ್ವಕಪ್ ನಂತರ ಭಾರತವು ದ್ವಿಪಕ್ಷೀಯ ಸರಣಿಗಳಲ್ಲಿ ನಿರತವಾಗಿದೆ. ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಅಲ್ಲಿನ ಏಕದಿನ ಸರಣಿ ಬಳಿಕ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ.

  • Share this:

ಟಿ20 ವಿಶ್ವಕಪ್ ನಂತರ ಭಾರತವು ದ್ವಿಪಕ್ಷೀಯ ಸರಣಿಗಳಲ್ಲಿ ನಿರತವಾಗಿದೆ. ಸದ್ಯ ನ್ಯೂಜಿಲೆಂಡ್ (IND vs NZ) ಪ್ರವಾಸದಲ್ಲಿರುವ ಭಾರತ ತಂಡ ಕಿವೀಸ್​ ವಿರುದ್ಧದ ಏಕದಿನ ಸರಣಿ ಬಳಿಕ ಬಾಂಗ್ಲಾದೇಶ (IND vs BAN) ಪ್ರವಾಸ ಕೈಗೊಳ್ಳಲಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ (ODI World Cup) ಸಿದ್ಧತೆಯ ಭಾಗವಾಗಿ ಟೀಂ ಇಂಡಿಯಾ (Team India) ಸರಣಿಗಳನ್ನು ಆಡಲಿದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಡ ನಡೆಯಲಿದೆ. ಈ ಕ್ರಮದಲ್ಲಿ ಭಾರತ ಇದೀಗ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಮಾತ್ರ ಆದ್ಯತೆ ನೀಡಲಿದೆ. ಈ ಕ್ರಮದಲ್ಲಿ ಬಾಂಗ್ಲಾದೇಶದೊಂದಿಗೆ ಏಕದಿನ ಹಾಗೂ ಟೆಸ್ಟ್ ಸರಣಿಗಳನ್ನು ಆಡಲಿದೆ. ಪ್ರವಾಸವು ಡಿಸೆಂಬರ್ 4 ರಂದು ಪ್ರಾರಂಭವಾಗಿ ಡಿಸೆಂಬರ್ 26 ರಂದು ಕೊನೆಗೊಳ್ಳುತ್ತದೆ.


ಹಿರಿಯ ಆಟಗಾರರು ಕಂಬ್ಯಾಕ್:


ಹೌದು, ಕಿವೀಸ್​ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಕೆ ಆಟಗಾರರು ಮತ್ತೆ ತಂಡಕ್ಕೆ ಮರಳಲಿದ್ದಾರೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಶಮಿ ಮತ್ತು ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೆಲ ಸಮಯದಿಂದ ಕಳಪೆ ಫಾರ್ಮ್‌ನಲ್ಲಿರುವ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್‌ಗೆ ಈ ಪ್ರವಾಸ ಅತ್ಯಂತ ನಿರ್ಣಾಯಕವಾಗಿದೆ. ಇದರಲ್ಲಿ ವಿಫಲರಾದರೆ ಮುಂಬರುವ ದಿನಗಳಲ್ಲಿ ಇವರಿಬ್ಬರ ಆಯ್ಕೆ ಕಷ್ಟವಾಗಲಿದೆ.


IND vs BAN ವೇಳಾಪಟ್ಟಿ:


ಮೊದಲ ODI: ಡಿಸೆಂಬರ್ 4, ಢಾಕಾ - ಮಧ್ಯಾಹ್ನ 12.30ಕ್ಕೆ
ಎರಡನೇ ODI: ಡಿಸೆಂಬರ್ 7, ಢಾಕಾ - ಮಧ್ಯಾಹ್ನ 12.30ಕ್ಕೆ
ಮೂರನೇ ODI: ಡಿಸೆಂಬರ್ 10, ಢಾಕಾ - ಮಧ್ಯಾಹ್ನ 12.30ಕ್ಕೆ


ಮೊದಲ ಟೆಸ್ಟ್: ಡಿಸೆಂಬರ್ 14 ರಿಂದ 18ರ ವರೆಗೆ - ಚಟ್ಟೋಗ್ರಾಮ್, ಬೆಳಗ್ಗೆ 9.30ಕ್ಕೆ
ಎರಡನೇ ಟೆಸ್ಟ್: ಡಿಸೆಂಬರ್ 22 ರಿಂದ 26ರ ವರೆಗೆ - ಢಾಕಾ, ಬೆಳಗ್ಗೆ 9.30ಕ್ಕೆ


ಇದನ್ನೂ ಓದಿ: IND vs BAN Test: ಬಾಂಗ್ಲಾದೇಶ್ ಟೆಸ್ಟ್ ಸರಣಿಯಿಂದಲೂ ಜಡೇಜಾ ಔಟ್​, ತಂಡಕ್ಕೆ ಹೊಸ ಆಟಗಾರನ ಎಂಟ್ರಿ


ನೇರ ಪ್ರಸಾರ ಯಾವ ಚಾನಲ್​ನಲ್ಲಿ?:


ಈ ಪಂದ್ಯಗಳನ್ನು ಸೋನಿ ನೆಟ್‌ವರ್ಕ್ ನೇರ ಪ್ರಸಾರ ಮಾಡಲಿದೆ. ಡಿಜಿಟಲ್‌ನಲ್ಲಿ ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೀವು ಈ ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು. ಇವುಗಳ ಜೊತೆಗೆ ಡಿಡಿ ಸ್ಪೋರ್ಟ್ಸ್ ಕೂಡ ಈ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ.


ಟೀಮ್ ಇಂಡಿಯಾ ತಂಡ (ಏಕದಿನ ಸರಣಿಗೆ):


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ಇಶಾನ್ ಕಿಶನ್, ರಿಷಭ್ ಪಂತ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಸಿರಾಜ್, ಶಾರ್ದೂಲ್ ಠಾಕೂರ್, ಯಾಸ್ ದಯಾಲ್, ಶಾಬಾಜ್ ಅಹ್ಮದ್, ಶಮಿ, ದೀಪಕ್ ಚಹಾರ್.ಏಕದಿನ ಸರಣಿಯಿಂದ ಜಡೇಜಾ ಔಟ್​:


ಇನ್ನು, ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿಲ್ಲ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಇದ್ದಾರೆ. ನವೆಂಬರ್ 25 ರಿಂದ ಆಕ್ಲೆಂಡ್‌ನಲ್ಲಿ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ODI ಸರಣಿಗಾಗಿ ಕುಲದೀಪ್ ಸೇನ್ ಮತ್ತು ಶಹಬಾಜ್ ಅಹ್ಮದ್ ಅವರನ್ನು ಆರಂಭದಲ್ಲಿ ತಂಡದಲ್ಲಿ ಹೆಸರಿಸಲಾಯಿತು. ಆದರೆ ಈಗ ಈ ಇಬ್ಬರೂ ಆಟಗಾರರು ಬಾಂಗ್ಲಾದೇಶಕ್ಕೆ ತೆರಳುವ ತಂಡದ ಭಾಗವಾಗಲಿದ್ದಾರೆ.

Published by:shrikrishna bhat
First published: