KL Rahul: ರಾಷ್ಟ್ರಗೀತೆಗೆ ಗೌರವ ಕೊಟ್ಟ ಕನ್ನಡಿಗ ಕೆಎಲ್​ ರಾಹುಲ್​, ಇದಕ್ಕೆ ಇವ್ರು ಸಖತ್ ಇಷ್ಟ ಆಗೋದು

ಭಾರತ ಮತ್ತು ಜಿಂಬಾಬ್ವೆ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ (KL Rahul) ಅವರು ನಡೆದುಕೊಂಡ ರೀತಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಜಿಂಬಾಬ್ವೆ (Zimbabwe ) ತಂಡವು  40.3 ಓವರ್​ಗಳಿಗೆ 10 ವಿಕೆಟ್​ಗಳನ್ನೂ ಕಳೆದುಕೊಂಡು 189 ರನ್​ ಗಳನ್ನು ಗಳಿಸುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು 30.5 ಓವರ್ ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 192 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಆದರೆ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ (KL Rahul)  ಅವರು ನಡೆದುಕೊಂಡ ರೀತಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ರಾಷ್ಟ್ರಗೀತೆಗೆ ಗೌರವ ಕೊಟ್ಟ ಕನ್ನಡಿಗ​ ರಾಹುಲ್:

ಹೌದು, ಕ್ರಿಕೆಟ್​ ಪಂದ್ಯ ಆರಂಭವಾಗುವ ಮುನ್ನ 2 ದೇಶಗಳ ರಾಷ್ಟ್ರಗೀತೆ ಹಾಡುವುದು ಮೊದಲಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಅದೇ ರೀತಿ ನಿನ್ನೆ ನಡೆದ ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವಿನ ಪಂದ್ಯದ ಮೊದಲು ರಾಷ್ಟ್ರಗೀತೆಯನ್ನು ಹಾಡಲಾಯಿತು. ಮೊದಲು ಚ್ಯೂಯಿಂಗ್ ಗಮ್ ಜಗಿಯುತ್ತಿದ್ದ ರಾಹುಲ್​, ಇನ್ನೇನು ರಾಷ್ಟ್ರಗೀತೆ ಆರಂಭವಾಗಲಿದೆ ಎಂಬುದನ್ನು ತಿಳಿದು ಚೂಯಿಂಗ್ ಗಮ್ ಅನ್ನು ಕಿತ್ತೆಸೆಯುವುದರ ಮೂಲಕ ರಾಷ್ಟ್ರಗೀತೆಗೆ ಗೌರವವನ್ನು ನೀಡಿದರು. ಈ ವೇಳೆ ಅವರ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಆ ವೇಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕನ್ನಡಿಗನ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಭಾರತ:

ಜಿಂಬಾಬ್ವೆ ನೀಡಿದ 189 ರನ್ ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು 30.5 ಓವರ್ ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 192 ರನ್​ ಗಳಿಸುವ ಮೂಲಕ ಜಯ ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತದ ಪರ ಶಿಖರ್ ಧವನ್ 113 ಎಸೆತದಲ್ಲಿ 9 ಬೌಂಡರಿಗಳ ನೆರವಿನಿಂದ 81 ರನ್ ಮತ್ತು ಶುಭಮನ್ ಗಿಲ್​ 72 ಎಸೆತದಲ್ಲಿ 10 ಫೋರ್​ ಮತ್ತು 1 ಸಿಕ್ಸ್ ಮೂಲಕ 82 ರನ್ ಸಿಡಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ಮಾಡಿದರು.

ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್


ಗಾಯದ ಸಮಸ್ಯೆಯಿಂದ ಅನೇಕ ದಿನಗಳ ನಂತರ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ದೀಪಕ್ ಚಹಾರ್​ ಇಂದು ಭರ್ಜರಿಯಾಗಿ ಬೌಲಿಂಗ್ ಮಾಡಿದರು. ಚಹಾರ್​ 7 ಓವರ್ ಮಾಡಿ 27 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಚಹಾರ್​ ಭರ್ಜರಿಯಾಗಿ ಕಂಬ್ಯಾಕ್ ಮಾಡಿರುವುದಾಗಿ ತೋರಿಸಿದ್ದಾರೆ. ಉಳಿದಂತೆ ಪ್ರಸಿದ್ಧ ಕೃಷ್ಣ ಮತ್ತು ಅಕ್ಷರ್ ಪಟೇಲ್ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದು ಅಬ್ಬರಿಸಿದರು.

ಇದನ್ನೂ ಓದಿ: Yuzvendra Chahal: ವೈವಾಹಿಕ ಜೀವನದಲ್ಲಿ ಬಿರುಕು,​ ಊಹಾಪೋಹಗಳಿಗೆ ತೆರೆ ಎಳೆದ ಚಹಾಲ್

IND vs ZIM ತಂಡಗಳು:

ಭಾರತ ತಂಡ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್, ಶಹಬಾಜ್ ಅಹ್ಮದ್.

ಇದನ್ನೂ ಓದಿ: India vs Zimbabwe 1st ODI: ಅಬ್ಬರಿಸಿದ ಧವನ್ - ಗಿಲ್, ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ

ಜಿಂಬಾಬ್ವೆ ತಂಡ: ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಾಂಗಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನೊಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾರ್ವಾ, ರಿಚರ್ಡ್‌ ನ್ಗಾರ್ವಾ, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ.
Published by:shrikrishna bhat
First published: