• Home
  • »
  • News
  • »
  • sports
  • »
  • IND vs NZ: ಒಂದು ತಿಂಗಳಲ್ಲಿ 2 ಮಹತ್ವದ ಸರಣಿ, ನ್ಯೂಜಿಲ್ಯಾಂಡ್​-ಆಸ್ಟ್ರೇಲಿಯಾ ಸಿರೀಸ್​ ಸಂಪೂರ್ಣ ವೇಳಾಪಟ್ಟಿ

IND vs NZ: ಒಂದು ತಿಂಗಳಲ್ಲಿ 2 ಮಹತ್ವದ ಸರಣಿ, ನ್ಯೂಜಿಲ್ಯಾಂಡ್​-ಆಸ್ಟ್ರೇಲಿಯಾ ಸಿರೀಸ್​ ಸಂಪೂರ್ಣ ವೇಳಾಪಟ್ಟಿ

ಟೀಂ ಇಂಡಿಯಾ

ಟೀಂ ಇಂಡಿಯಾ

IND vs NZ: ಟೀಂ ಇಂಡಿಯಾ ಮೊದಲು ನ್ಯೂಜಿಲೆಂಡ್ ಮತ್ತು ನಂತರ ಆಸ್ಟ್ರೇಲಿಯಾವನ್ನು ಆತಿಥ್ಯ ವಹಿಸಲಿದೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ODI ಸರಣಿ ಮುಗಿದ ಬೆನ್ನಲ್ಲೇ ಈ ಸರಣಿಗಳು ಆರಂಭವಾಗಲಿದೆ.

  • Share this:

ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಹೊಸ ವರ್ಷವನ್ನು ಆರಂಭಿಸಿದ ಭಾರತ ತಂಡ (Team India) ಇದೀಗ ಎರಡು ದೊಡ್ಡ ತಂಡಗಳ ವಿರುದ್ಧ ಆಡಲು ಸಿದ್ಧವಾಗಿದೆ. ಟೀಂ ಇಂಡಿಯಾ ಮೊದಲು ನ್ಯೂಜಿಲೆಂಡ್ (IND vs NZ) ಮತ್ತು ನಂತರ ಆಸ್ಟ್ರೇಲಿಯಾವನ್ನು (IND vs AUS) ಆತಿಥ್ಯ ವಹಿಸಲಿದೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ODI ಸರಣಿಯ ನಂತರ ಭಾರತವು T20 ನಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ ಮತ್ತು ಆಸ್ಟ್ರೇಲಿಯಾ ತಂಡವು ಫೆಬ್ರವರಿ-ಮಾರ್ಚ್​ನಲ್ಲಿ ಭಾರತಕ್ಕೆ ಪ್ರವಾಸ ಮಾಡಲಿದೆ. ಮುಂದಿನ ಕೆಲವು ತಿಂಗಳುಗಳು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಂಜನೆ ದೊರಕಲಿದೆ. ನ್ಯೂಜಿಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ಸರಣಿಯನ್ನು ಆಡಿದ ನಂತರ ಭಾರತ ತಂಡವು ಆಸ್ಟ್ರೇಲಿಯಾದೊಂದಿಗೆ ಟೆಸ್ಟ್ (Test) ಸರಣಿಯನ್ನು ಆಡಲಿದೆ. ಮಾಹಿತಿಯ ಪ್ರಕಾರ, ಬಿಸಿಸಿಐ ಈ ಎರಡೂ ಸರಣಿಗಳಿಗೆ ಸದ್ಯದಲ್ಲಿಯೇ ತಂಡವನ್ನು ಪ್ರಕಟಿಸಬಹುದು. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ತಂಡವನ್ನು ಘೋಷಿಸಲಿದ್ದಾರೆ.


ಭಾರತ ತಂಡಕ್ಕೆ ಸಾಲು ಸಾಲು ಸರಣಿ:


ಟೀಂ ಇಂಡಿಯಾ ಜನವರಿ 18 ರಿಂದ ಫೆಬ್ರವರಿ 1ರ ವರೆಗೆ ನ್ಯೂಜಿಲೆಂಡ್ ವಿರುದ್ಧ ಮೊದಲ ಮೂರು ಏಕದಿನ ಪಂದ್ಯಗಳನ್ನು ಮತ್ತು ಅಷ್ಟೇ ಸಂಖ್ಯೆಯ ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಇದರ ಬೆನ್ನಲ್ಲೇ ಭಾರತ ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಈ ಪಂದ್ಯಗಳು ಫೆಬ್ರವರಿ 9 ರಿಂದ ಮಾರ್ಚ್ 22 ರವರೆಗೆ ನಡೆಯಲಿವೆ. ಟೆಸ್ಟ್ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ನಡೆಯಲಿದೆ.


ಭಾರತ-ನ್ಯೂಜಿಲೆಂಡ್ ODI ಸರಣಿ ವೇಳಾಪಟ್ಟಿ


ಮೊದಲ ಏಕದಿನ, ಜನವರಿ 18, ಮಧ್ಯಾಹ್ನ 1.30, ಹೈದರಾಬಾದ್
ಎರಡನೇ ಏಕದಿನ, ಜನವರಿ 21, ಮಧ್ಯಾಹ್ನ 1.30, ರಾಯ್‌ಪುರ
ಮೂರನೇ ಏಕದಿನ, ಜನವರಿ 24, ಮಧ್ಯಾಹ್ನ 1.30, ಇಂದೋರ್


ಭಾರತ-ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ


1ನೇ ಟಿ20, ಜನವರಿ 27, ರಾತ್ರಿ 7.00, ರಾಂಚಿ
2ನೇ ಟಿ20, ಜನವರಿ 29, ರಾತ್ರಿ 7.00, ಲಕ್ನೋ
3ನೇ ಟಿ20, ಫೆಬ್ರವರಿ 1, ರಾತ್ರಿ 7.00, ಅಹಮದಾಬಾದ್


ಇದನ್ನೂ ಓದಿ: IND vs NZ: ನ್ಯೂಜಿಲೆಂಡ್ ಸರಣಿಯಿಂದ ಟೀಂ ಇಂಡಿಯಾದ 3 ಸ್ಟಾರ್​ ಪ್ಲೇಯರ್​​ ಔಟ್​? ಯಾರಿಗೆ ಸಿಗಲಿದೆ ಚಾನ್ಸ್?


ಭಾರತ ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ


ಮೊದಲ ಟೆಸ್ಟ್, ಫೆಬ್ರವರಿ 9 ರಿಂದ 13, 9.30 ನಾಗ್ಪುರ
ಎರಡನೇ ಟೆಸ್ಟ್, ಫೆಬ್ರವರಿ 17 ರಿಂದ 21, 9.30 ದೆಹಲಿ
ಮೂರನೇ ಟೆಸ್ಟ್, ಮಾರ್ಚ್ 1 ರಿಂದ 5, 9.30 ಧರ್ಮಶಾಲಾ
ನಾಲ್ಕನೇ ಟೆಸ್ಟ್, ಮಾರ್ಚ್ 9 ರಿಂದ 13, 9.30 , ಅಹಮದಾಬಾದ್ , ಅಹಮದಾಬಾದ್




ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ವೇಳಾಪಟ್ಟಿ


1ನೇ ಏಕದಿನ, ಮಾರ್ಚ್ 17, ಮಧ್ಯಾಹ್ನ 1.30, ಮುಂಬೈ
2ನೇ ಏಕದಿನ, ಮಾರ್ಚ್ 19, ಮಧ್ಯಾಹ್ನ 1.30, ವಿಶಾಖಪಟ್ಟಣಂ
3ನೇ ಏಕದಿನ, ಮಾರ್ಚ್ 22, ಮಧ್ಯಾಹ್ನ 1.30, ಚೆನ್ನೈ


ಟೀಂ ಇಂಡಿಯಾ ಸರಣಿಗೆ ನ್ಯೂಜಿಲ್ಯಾಂಡ್​ ತಂಡ:


ಮಿಚೆಲ್ ಸ್ಯಾಂಟ್ನರ್ (ಸಿ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೇನ್ ಕ್ಲೀವರ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್.


ಕಿವೀಸ್​ ತಂಡದಲ್ಲಿ ಹಿರಿಯರಿಗೆ ವಿಶ್ರಾಂತಿ:


ಇದಕ್ಕೂ ಮುನ್ನ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿತ್ತು. ಆ ತಂಡದಲ್ಲೂ ಟಿಮ್ ಸೌಥಿ ಹಾಗೂ ಕೇನ್ ವಿಲಿಯಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ನ್ಯೂಜಿಲೆಂಡ್ ತಂಡ ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿದ್ದು, ಟೆಸ್ಟ್ ಸರಣಿಯ ನಂತರ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಶುಕ್ರವಾರ ನಡೆಯಲಿದೆ. ಸೌದಿ ಮತ್ತು ವಿಲಿಯಮ್ಸನ್ ಪಾಕಿಸ್ತಾನದಿಂದ ನೇರವಾಗಿ ನ್ಯೂಜಿಲೆಂಡ್‌ಗೆ ಮರಳಲಿದ್ದಾರೆ. ಟಾಮ್ ಲ್ಯಾಥಮ್‌ಗೆ ಏಕದಿನ ಸರಣಿಯಲ್ಲಿ ಕಿವೀಸ್ ತಂಡದ ನಾಯಕತ್ವ ನೀಡಲಾಗಿದೆ. ಟ್ರೆಂಟ್ ಬೌಲ್ಟ್‌ಗೆ ಟಿ20 ಮತ್ತು ಏಕದಿನ ಎರಡೂ ತಂಡಗಳಲ್ಲಿ ಸ್ಥಾನ ನೀಡಲಾಗಿಲ್ಲ. ಮುಂಬರುವ ದಿನಗಳಲ್ಲಿ ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು​ ತವರಿನಲ್ಲಿ ಎದುರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಪ್ರವಾಸದಲ್ಲಿ ಈ ಮೂವರು ಹಿರಿಯ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು