ಹರ್ಮನ್​​​​​​ ಶತಕದ ದಾಖಲೆ: ಟಿ-20 ವಿಶ್ವಕಪ್​​​ನಲ್ಲಿ ಭಾರತ ಭರ್ಜರಿ ಶುಭಾರಂಭ

ನಾಯಕಿ ಹರ್ಮನ್​​​ಪ್ರೀತ್ ಕೇವಲ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸ್​ನೊಂದಿಗೆ 103 ರನ್​ಗಳ​ ನೆರವಿನಿಂದ ಭಾರತದ ವನಿತೆಯರು 34 ರನ್​​ಗಳ ಜಯದೊಂದಿಗೆ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

ಹರ್ಮನ್​​ಪ್ರೀತ್ ಕೌರ್

ಹರ್ಮನ್​​ಪ್ರೀತ್ ಕೌರ್

  • News18
  • Last Updated :
  • Share this:
ನ್ಯೂಸ್ 18 ಕನ್ನಡ

ಮಹಿಳಾ ಟಿ-20 ವಿಶ್ವಕಪ್​​​ನಲ್ಲಿ ಭಾರತದ ವನಿತೆಯರು ಭರ್ಜರಿ ಆರಂಭ ಪಡೆದುಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ನಾಯಕಿ ಹರ್ಮನ್​​​ಪ್ರೀತ್ ಕೌರ್ ಅವರ ಶತಕದ ನೆರವಿನಿಂದ 34 ರನ್​​ಗಳ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತದ ವನಿತೆಯರು ನಿಗದಿತ 20 ಓವರ್​​ನಲ್ಲಿ 194 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕಿ ಹರ್ಮನ್​​​ಪ್ರೀತ್ ಕೇವಲ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸ್​ನೊಂದಿಗೆ 103 ರನ್​ ಸಿಡಿಸಿ ಕೊನೆಯ ಓವರ್​ನಲ್ಲಿ ಔಟ್ ಆದರು. ಈ ಮೂಲಕ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​​ನಲ್ಲಿ ಶತಕ ಸಿಡಿಸಿದ ಭಾರತ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಕೌರ್ ಪಾತ್ರರಾದರು. ಅಂತೆಯೆ ಜೆಮಿಮಾ ರೋಡ್ರಿಗಾಸ್ 59 ರನ್ ಬಾರಿಸಿ ತಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು. ಪರಿಣಾಮ 5 ವಿಕೆಟ್ ಕಳೆದುಕೊಂಡು ಭಾರತ ಎದುರಾಳಿಗೆ 195 ರನ್​ಗಳ ಟಾರ್ಗೆಟ್ ನೀಡಿತು. ನ್ಯೂಜಿಲೆಂಡ್ ಪರ ಲೀ ಟಾಹುಹು 2 ವಿಕೆಟ್ ಕಿತ್ತು ಮಿಂಚಿದರು.

ಇದನ್ನೂ ಓದಿ: ಟೀಂ ಇಂಡಿಯಾ ನಾಯಕನ ಪರ ಬ್ಯಾಟ್​ ಬೀಸಿದ ಮೊಹಮ್ಮದ್ ಕೈಫ್

ಈ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದುಕೊಂಡಿತಾದರು ಬಳಿಕ ದಿಢೀರ್ ಕುಸಿತ ಕಂಡಿತು. ತಂಡದ ಪರ ಸುಝೀ ಬೇಟ್ಸ್​ 67 ಹಾಗೂ ಕೇಟೀ ಮಾರ್ಟಿನ್ 39 ರನ್ ಗಳಿಸಿದ್ದೆ ಹೆಚ್ಚು. ಇದರೊಂದಿಗೆ ನ್ಯೂಜಿಲೆಂಡ್ ವನಿತೆಯರು 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 160 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ ಹೇಮಲತಾ ಹಾಗೂ ಪೂನಮ್ ಯಾದವ್ ತಲಾ 3 ವಿಕೆಟ್ ಕಿತ್ತು ಮಿಂಚಿದರು.

ಈ ಮೂಲಕ ಭಾರತ 34 ರನ್​​ಗಳ ಭರ್ಜರಿ ಗೆಲುವು ಸಾಧಿಸಿದೆ. ಜೊತೆಗೆ ಐಸಿಸಿ ಮಹಿಳಾ ಟಿ-20 ವಿಶ್ವಕಪ್​​​ನಲ್ಲಿ ದಾಖಲಾದ ಗರಿಷ್ಠ ಮೊತ್ತ ಎನ್ನುವ ದಾಖಲೆ ಬರೆಯಿತು. ಮುಂದಿನ ಪಂದ್ಯ ಭಾರತ ಬದ್ಧವೈರಿ ಪಾಕಿಸ್ತಾನ ವಿರುದ್ಧ ನ. 11 ರಂದು ಆಡಲಿದೆ.
First published: