ಭಾರತ-ಶ್ರೀಲಂಕಾ ಅಂಡರ್-19 ಟೆಸ್ಟ್: ತೈದೆ-ಪವನ್ ಷಾ ಶತಕ: ಬೃಹತ್ ಮೊತ್ತದತ್ತ ಭಾರತ
news18
Updated:July 24, 2018, 5:58 PM IST
news18
Updated: July 24, 2018, 5:58 PM IST
ನ್ಯೂಸ್ 18 ಕನ್ನಡ
ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂಡರ್-19 ಎರಡನೇ ಯೂಥ್ ಟೆಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಉತ್ತಮ ಮೊತ್ತದ ಸೂಚನೆ ನೀಡಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಅಥರ್ವ ತೈದೆ ಹಾಗೂ ಪವನ್ ಷಾ ಅವರ ಶತಕದ ನೆರವಿನಿಂದ 428 ರನ್ಗೆ 4 ವಿಕೆಟ್ ಕಳೆದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಅಂಡರ್-19 ತಂಡಕ್ಕೆ ನಾಯಕ ಅನುಜ್ ರಜ್ಪೂತ್ ಕೇವಲ 11 ರನ್ಗೆ ಔಟ್ ಆಗಿ ಆರಂಭಿಕ ಆಘಾತ ನೀಡಿದರು. ಬಳಿಕ ಒಂದಾದ ತೈದೆ ಹಾಗೂ ಪವನ್ ಷಾ ದೊಡ್ಡ ಇನ್ನಿಂಗ್ಸ್ ಕಟ್ಟಲು ಮುಂದಾದರು. ಎಚ್ಚರಿಕೆ ಆಟವಾಡಿದ ಈ ಜೋಡಿ 263 ರನ್ಗಳ ಕಾಣಿಕೆ ನೀಡಿದ್ದಲ್ಲದೆ, ಇಬ್ಬರೂ ಶತಕದ ಸಂಭ್ರಮ ಹಂಚಿಕೊಂಡರು. ಬಿರುಸಿನ ಆಟವಾಡಿದ ತೈದೆ ದ್ವಿಶತಕದ ಅಂಚಿನಲ್ಲಿ ಎಡವಿದರು. 172 ಎಸೆತಗಳಲ್ಲಿ 20 ಬೌಂಡರಿ ಹಾಗೂ 3 ಸಿಕ್ಸ್ನೊಂದಿಗೆ 177 ರನ್ ಸಿಡಿಸಿ ತೈದೆ ಔಟ್ ಆದರು. ಬಳಿಕ ಬಂದ ದೇವದತ್ ಪಡಿಕ್ಕಲ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ 6 ರನ್ಗೆ ನಿರ್ಗಮಿಸಿದರೆ, ಆರ್ಯನ್ ಜುಯಾಲ್ 41 ರನ್ಗೆ ಪೆವಿಲಿಯನ್ ಸೇರಿಕೊಂಡರು. ಸದ್ಯ ಪವನ್ ಷಾ 177 ರನ್ಗಳಿಸಿ ದ್ವಿಶತಕದ ಸನಿಹದಲ್ಲಿ ಅಜೇಯರಾಗಿದ್ದು, ನೇಹಲ್ ವಡೇರಾ 5 ರನ್ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಶ್ರೀಲಂಕಾ ಪರ ಸೇನರತ್ನೆ ಹಾಗೂ ವಿಜಯಕಾಂತ್ ತಲಾ 1 ವಿಕೆಟ್ ಕಿತ್ತರು. ಈ ಮೂಲಕ ಭಾರತ ಅಂಡರ್-19 ತಂಡ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್ಗೆ 4 ವಿಕೆಟ್ ಕಳೆದುಕೊಂಡು 428 ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

Loading...