• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Team India: ಆಸ್ಟ್ರೇಲಿಯಾ ವಿರುದ್ಧದ ಏಕದಿನ-ಟೆಸ್ಟ್​ ಸರಣಿಗೆ ಭಾರತ ತಂಡ ಪ್ರಕಟ,  ಮೊದಲ ಪಂದ್ಯದಿಂದ ರೋಹಿತ್ ಔಟ್​!

Team India: ಆಸ್ಟ್ರೇಲಿಯಾ ವಿರುದ್ಧದ ಏಕದಿನ-ಟೆಸ್ಟ್​ ಸರಣಿಗೆ ಭಾರತ ತಂಡ ಪ್ರಕಟ,  ಮೊದಲ ಪಂದ್ಯದಿಂದ ರೋಹಿತ್ ಔಟ್​!

ಟೀಂ ಇಂಡಿಯಾ

ಟೀಂ ಇಂಡಿಯಾ

Team India: ಇಂದೋರ್ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ಹಾಗೂ ಫೆಬ್ರವರಿ 19 ರಂದು ಆಸ್ಟ್ರೇಲಿಯಾ ವಿರುದ್ಧ ಮುಂಬರುವ 3 ಪಂದ್ಯಗಳ ODI ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

  • Share this:

ಇಂದೋರ್ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ಹಾಗೂ ಫೆಬ್ರವರಿ 19 ರಂದು ಆಸ್ಟ್ರೇಲಿಯಾ ವಿರುದ್ಧ ಮುಂಬರುವ 3 ಪಂದ್ಯಗಳ ODI ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ ಮುಂದಿನ 2 ಟೆಸ್ಟ್​ ಪಂದ್ಯಗಳಿಗೂ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ತಂಡದಲ್ಲಿ ಯಾವ ಬದಲಾವಣೆ ಆಗಿಲ್ಲ. ಆದರೆ ಏಕದಿನ ಸರಣಿಗೆ ಕೆಲ ಬದಲಾವಣೆ ಮಾಡಲಾಗಿದ್ದು, ಅದರಂತೆ sರಿಸುಮಾರು 10 ವರ್ಷಗಳ ನಂತರ ಜಯದೇವ್ ಉನದ್ಕಟ್ ಏಕದಿನ ತಂಡಕ್ಕೆ ಮರಳಿದ್ದಾರೆ. ಅಲ್ಲದೇ ಭಾರತ ತಂಡವನ್ನು ಇಲ್ಲಿಯೂ ರೋಹಿತ್ ಮುನ್ನಡೆಸಲಿದ್ದು, ಆದರೆ ವ್ಯಯಕ್ತಿಕ ಕಾರಣದಿಂದಾಗಿ ರೋಹಿತ್ ಮೊದಲ ಪಂದ್ಯದಿಂದ ದೂರವಿರಲಿದ್ದಾರೆ. ಈ ವೇಳೆ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧದ 3 ಮತ್ತು 4 ಟೆಸ್ಟ್‌ಗೆ ಭಾರತದ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನದ್ಕತ್.



2 ಟೆಸ್ಟ್​ ಪಂದ್ಯದ ವೇಳಾಪಟ್ಟಿ:


1 1 - 5 ಮಾರ್ಚ್ 3 ಟೆಸ್ಟ್ ಇಂದೋರ್
2 9 - 13 ಮಾರ್ಚ್ 4 ನೇ ಟೆಸ್ಟ್ ಅಹಮದಾಬಾದ್


ಆಸ್ಟ್ರೇಲಿಯಾ ವಿರುದ್ಧದ ಭಾರತ ಏಕದಿನ ತಂಡ:


ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (WK), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಾಲ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಜಯದೇವ್ ಉನದ್ಕತ್.



ಮೊದಲ ಪಂದ್ಯಕ್ಕೆ ರೋಹಿತ್ ಅಲಭ್ಯ:


ಇನ್ನು, ಮಾರ್ಚ್​ 19ರಿಂದ ಆರಂಭವಾಗಲಿರುವ ಭಾರ್ತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಆದರೆ ಮೊದಲ ಪಂದ್ಯಕ್ಕೆ ಮಾತ್ರ ರೋಹಿತ್ ಶರ್ಮಾ ಅವರನ್ನು ಹೊರಗಿಡಲಾಗಿದೆ. ಅವರಿಗೆ ಪರ್ಸನಲ್​ ಕಾರಣ ಇರುವುದರಿಂದ ಅವರು ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಅಲ್ಲದೇ ಏಖದಿನ ಕ್ರಿಕೆಟ್​ಗೆ ಹಾರ್ದಿಕ್ ಪಾಂಡ್ಯ ಕಂಬ್ಯಾಕ್​ ಮಾಡಿದ್ದಾರೆ.


ಇದನ್ನೂ ಓದಿ: IND vs AUS: ಔಟ್​ ಆದ್ರೂ ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೋಹಿತ್, ಪೂಜಾರಾಗಾಗಿ ತನ್ನ ವಿಕೆಟ್​ ನೀಡಿದ ಹಿಟ್​ಮ್ಯಾನ್


ಏಕದಿನ ಸರಣಿ ವೇಳಾಪಟ್ಟಿ:


17-ಮಾರ್ಚ್ - 1ನೇ ODI ಮುಂಬೈ
19-ಮಾರ್ಚ್ - 2ನೇ ODI ವೈಜಾಗ್
22-ಮಾರ್ಚ್ - 3ನೇ ODI ಚೆನ್ನೈ


ಸದ್ಯ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಇರುವ ಭಾರತ ತಂಡ 4 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು