ವಿಶ್ವಕಪ್​​ನಲ್ಲಿ ಭಾರತ-ಪಾಕ್ ಪಂದ್ಯದ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ: ಐಸಿಸಿ

ವಿಶ್ವಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ದುಬೈನಲ್ಲಿ ಫೆ. 27ಕ್ಕೆ ಸಭೆ ನಡೆಯಲಿದ್ದು, ಇದರಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

Vinay Bhat | news18
Updated:February 20, 2019, 2:55 PM IST
ವಿಶ್ವಕಪ್​​ನಲ್ಲಿ ಭಾರತ-ಪಾಕ್ ಪಂದ್ಯದ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ: ಐಸಿಸಿ
ಸಾಂದರ್ಭಿಕ ಚಿತ್ರ
Vinay Bhat | news18
Updated: February 20, 2019, 2:55 PM IST
ದುಬೈ: ಪುಲ್ವಾಮ ಉಗ್ರರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಈಗಾಗಲೇ ಪಾಕಿಸ್ತಾನಕ್ಕೆ ಮೇಲಿಂದ ಮೇಲೆ ಶಾಕ್ ನೀಡುತ್ತಿದೆ. ಹೀಗಿರುವಾಗ ವಿಶ್ವಕಪ್​​ನಲ್ಲಿ ಭಾರತ ಪಾಕಿಸ್ತಾನ ಜೊತೆಗೆ ಕ್ರಿಕೆಟ್ ಪಂದ್ಯವನ್ನು ಆಡಬಾರದು ಎಂಬ ಒತ್ತಡವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಈ ಮಧ್ಯೆ ಐಸಿಸಿ ಇನ್ನೂ ಕೂಡ ಯಾವುದೇ  ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇದಕ್ಕಾಗಿಯೆ ಐಸಿಸಿ ಮುಂದಿನ ವಾರ ಫೆಬ್ರವರಿ 27 ರಿಂದ ಮಾರ್ಚ್​ 2 ರ ವರೆಗೆ ಮಹತ್ವದ ಸಭೆ ನಡೆಸಲಿದ್ದು, ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

'ವಿಶ್ವಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ದುಬೈನಲ್ಲಿ ಫೆ. 27ಕ್ಕೆ ಸಭೆ ನಡೆಯಲಿದ್ದು, ಇದರಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ' ಎಂದು ಐಸಿಸಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: IPL History: ಉದ್ಘಾಟನಾ ಪಂದ್ಯದಲ್ಲಿ ಆಡಿದ ಹಾಗೂ ಗೆದ್ದ ತಂಡಗಳು ಯಾವುವು ಗೊತ್ತಾ?

ಫೆ. 14ರಂದು ನಡೆದ ಪುಲ್ವಾಮ ಉಗ್ರ ದಾಳಿಯ ಹೊಣೆಯನ್ನು ಪಾಕ್ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯು ಹೊತ್ತುಕೊಂಡಿದೆ. 40-42 ಸಿಆರ್​ಪಿಎಫ್ ಯೋಧರು ಈ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು. ಅದಾದ ನಂತರ ಸರಕಾರದಿಂದ ಮುಕ್ತ ಕಾರ್ಯಾಚರಣೆಯ ಸ್ವಾತಂತ್ರ್ಯ ಪಡೆದ ಭಾರತೀಯ ಸೈನಿಕರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಜೈಷ್ ಉಗ್ರರ ಸಂಹಾರ ಮಾಡಿದರು. 16 ಗಂಟೆಗಳ ಸುದೀರ್ಘ ಕಾಲ ನಡೆದ ಎನ್​ಕೌಂಟರ್​ನಲ್ಲಿ ಕೆಲ ಭಾರತೀಯ ಯೋಧರೂ ಬಲಿಯಾದರು.

First published:February 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ