ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಪಾಕ್ ಸ್ಟಾರ್ ಆಟಗಾರ ಹೇಳಿದ್ದೇನು..?

news18
Updated:September 9, 2018, 3:27 PM IST
ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ಪಾಕ್ ಸ್ಟಾರ್ ಆಟಗಾರ ಹೇಳಿದ್ದೇನು..?
news18
Updated: September 9, 2018, 3:27 PM IST
ನ್ಯೂಸ್ 18 ಕನ್ನಡ

2018ರ ಏಷ್ಯಾ ಕಪ್​ಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಇದೇ ತಿಂಗಳ 15ರಿಂದ ಆರಂಭವಾಗಲಿದೆ. ಅದರಲ್ಲು ಭಾರತ ಹಾಗೂ ಪಾಕಿಸ್ತಾನ ನಡುವೆ ಸೆ. 19ರಂದು ನಡೆಯಲಿರುವ ಪಂದ್ಯಕ್ಕೆ ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಶೊಯೆಬ್ ಮಲ್ಲಿಕ್ ಭಾರತ ಮತ್ತು ಪಾಕಿಸ್ತಾನ ತಂಡಗಳು ಹೆಚ್ಚು ಪಂದ್ಯಗಳನ್ನು ಆಡಬೇಕು ಎಂದಿದ್ದಾರೆ.

ಭಾರತ-ಪಾಕಿಸ್ತಾನ ತಂಡಗಳು ಇನ್ನೂ ಹೆಚ್ಚು ಹೆಚ್ಚು ಪಂದ್ಯವನ್ನು ಆಡಬೇಕು. ಆಗ ಉಭಯ ದೇಶಗಳ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯವಾಗುತ್ತದೆ. ಇಂಡೋ-ಪಾಕ್ ಕದನ ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಂದ್ಯ ವೀಕ್ಷಿಸುತ್ತಾರೆ. ಇದು ಯುವ ಆಟಗಾರರಿಗೆ ಉತ್ತಮ ಅವಕಾಶವಾಗಿದ್ದು, ಎರಡೂ ತಂಡಗಳು ತಮ್ಮ ಆಟದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದಿದ್ದಾರೆ.  ಇದೇ ವೇಳೆ 2019ರ ವಿಶ್ವಕಪ್​​ ನನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯ ಎಂದು ಮಲ್ಲಿಕ್ ಹೇಳಿದರು.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...