ಫೀಫಾ ವಿಶ್ವಕಪ್ ಕ್ವಾಲಿಫಯರ್: ಐದನೇ ಪಂದ್ಯದಲ್ಲೂ ಭಾರತಕ್ಕೆ ದಕ್ಕದ ಗೆಲುವು; ಓಮನ್ ಎದುರು ಸೋಲಿನ ಆಘಾತ

ಖತಾರ್, ಓಮನ್, ಆಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳಿರುವ ಇ ಗುಂಪಿನಲ್ಲಿ ಭಾರತ 5 ಪಂದ್ಯಗಳಿಂದ 3 ಅಂಕಗಳನ್ನ ಪಡೆದಿದ್ದು ನಾಲ್ಕನೇ ಸ್ಥಾನದಲ್ಲಿದೆ. ಕತಾರ್ ತಂಡ ಅಗ್ರಸ್ಥಾನದಲ್ಲಿದ್ದರೆ, ಓಮನ್ ಎರಡನೇ ಸ್ಥಾನದಲ್ಲಿದೆ.

  • News18
  • Last Updated :
  • Share this:
ಓಮನ್(ನ. 19): ಫೀಫಾ ವಿಶ್ವಕಪ್​ಗೆ ಅರ್ಹತೆ ಗಿಟ್ಟಿಸಲು ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ಫುಟ್ಬಾಲ್ ತಂಡದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಎರಡನೇ ಹಂತದ ಎಎಫ್​ಸಿ ಅರ್ಹತಾ ಟೂರ್ನಿಯ ಇ ಗುಂಪಿನಲ್ಲಿ ಭಾರತ ತನ್ನ 5ನೇ ಪಂದ್ಯದಲ್ಲಿ ಸೋಲನುಭವಿಸಿದೆ. ಮಸ್ಕತ್​ನ ಸುಲ್ತಾನ್ ಖಾಬೂಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ಆತಿಥೇಯ ಓಮನ್ ವಿರುದ್ಧ ನಡೆದ ಪಂದ್ಯದಲ್ಲಿ ಪ್ರವಾಸೀ ಭಾರತ ತಂಡ 0-1 ಗೋಲಿನಿಂದ ಶರಣಾಯಿತು. ಈ ಫಲಿತಾಂಶದೊಂದಿಗೆ 2022ರ ವಿಶ್ವಕಪ್​ಗೆ ಅರ್ಹತೆ ಪಡೆಯುವ ದಾರಿಗಳು ಭಾರತದ ಪಾಲಿಗೆ ಬಹುತೇಕ ಮುಚ್ಚಿಹೋಗಿವೆ.

ಈ ಪಂದ್ಯದಲ್ಲಿ ಪ್ರಬಲ ಓಮನ್ ತಂಡವೇ ಮೇಲುಗೈ ಸಾಧಿಸಿತು. 33ನೇ ನಿಮಿಷದಲ್ಲಿ ಅಲ್ ಖಾಲ್ದಿ ಸಹಾಯದಿಂದ ಮೊಹ್ಸೇನ್ ಅವರು ಗೋಲು ಗಳಿಸಿ ಓಮನ್​ಗೆ ಮುನ್ನಡೆ ತಂದುಕೊಟ್ಟರು. ಭಾರತ ಕೂಡ ಗೋಲು ಗಳಿಸಲು ಹರಸಾಹಸ ನಡೆಸಿತಾದರೂ ಫಲ ಸಿಕ್ಕಲಿಲ್ಲ. ಅಂತಿಮವಾಗಿ ಒಂದು ಗೋಲಿನಿಂದ ಶರಣಾಯಿತು. ಈ ಸೋಲಿನೊಂದಿಗೆ ಭಾರತ ಓಮನ್ ಎದುರು ಸತತ ಎರಡು ಸೋಲು ಕಂಡಂತಾಯಿತು. ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಓಮನ್ ಎದುರು ಭಾರತ 1-2 ಗೋಲುಗಳಿಂದ ಸೋತಿತ್ತು.

ಇದನ್ನೂ ಓದಿ: ಅರ್ಧಶತಕ ಬಾರಿಸಿದ ಬೆನ್ನಲ್ಲೆ ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ!

ಖತಾರ್, ಓಮನ್, ಆಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳಿರುವ ಇ ಗುಂಪಿನಲ್ಲಿ ಭಾರತ 5 ಪಂದ್ಯಗಳಿಂದ 3 ಅಂಕಗಳನ್ನ ಪಡೆದಿದ್ದು ನಾಲ್ಕನೇ ಸ್ಥಾನದಲ್ಲಿದೆ. ಕತಾರ್ ತಂಡ ಅಗ್ರಸ್ಥಾನದಲ್ಲಿದ್ದರೆ, ಓಮನ್ ಎರಡನೇ ಸ್ಥಾನದಲ್ಲಿದೆ.

ಭಾರತಕ್ಕೆ ಇನ್ನು ಕೇವಲ ಮೂರು ಪಂದ್ಯ ಮಾತ್ರ ಬಾಕಿ ಉಳಿದಿದೆ. ಎಲ್ಲವನ್ನೂ ಗೆದ್ದರೂ ಮೂರನೇ ಸುತ್ತಿಗೆ ಪ್ರವೇಶ ಸಿಗುವ ಖಾತ್ರಿ ಇಲ್ಲವಾಗಿದೆ. ಮುಂದಿನ ಮಾರ್ಚ್ 26ಕ್ಕೆ ಭಾರತ ತಂಡ ಪ್ರಬಲ ಕತಾರ್ ತಂಡವನ್ನು ಎರಡನೇ ಬಾರಿ ಇದಿರುಗೊಳ್ಳಲಿದೆ. ಅದಾದ ಬಳಿಕ ಜೂನ್ 4 ಮತ್ತು 9ರಂದು ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ವಿರುದ್ಧ ಭಾರತ ಆಡಲಿದೆ. ಫೀಫಾ ವಿಶ್ವಕಪ್​ಗೆ ಅರ್ಹತೆ ಗಿಟ್ಟಿಸುವ ದಾರಿ ಮುಚ್ಚಿಹೋದರೂ ಏಷ್ಯಾ ಕಪ್ ಟೂರ್ನಿಗೆ ಕ್ವಾಲಿಫೈ ಆಗುವ ಅವಕಾಶ ಭಾರತಕ್ಕೆ ಇನ್ನೂ ಜೀವಂತ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: