3ನೇ ಟೆಸ್ಟ್​​: 3ನೇ ದಿನದಾಟಕ್ಕೆ ಭಾರತ 54/5: 346 ರನ್​ಗಳ ಮುನ್ನಡೆ

ನಿಧಾನಗತಿಯ ಇನ್ನಿಂಗ್ಸ್​ ಕಟ್ಟಲು ಹೊರಟ ಪ್ಯಾಟ್ ಕಮಿನ್ಸ್​(17) ಹಾಗೂ ನಾಯಕ ಟಿಮ್ ಪೇಯ್ನ್(22) ಕೂಡ ಬೇಗನೆ ಔಟ್ ಆಗಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ.

Vinay Bhat | news18
Updated:December 28, 2018, 12:46 PM IST
3ನೇ ಟೆಸ್ಟ್​​: 3ನೇ ದಿನದಾಟಕ್ಕೆ ಭಾರತ 54/5: 346 ರನ್​ಗಳ ಮುನ್ನಡೆ
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
  • News18
  • Last Updated: December 28, 2018, 12:46 PM IST
  • Share this:
ಮೆಲ್ಬೋರ್ನ್​​​​: ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 151 ರನ್ಗೆ ಆಲೌಟ್ ಮಾಡಿ 292 ರನ್​ಗಳ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ದಿನದಾಟಕ್ಕೆ 54 ರನ್​ಗೆ 5 ವಿಕೆಟ್ ಕಳೆದುಕೊಂಡಿದೆ.

ಓಪನರ್ಗಳಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಹಾಗೂ ಹನುಮ ವಿಹಾರಿ ಪೈಕಿ, ವಿಹಾರಿ 13 ರನ್ಗೆ ಔಟ್ ಆದರು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ನೆರವಾಗಿದ್ದ ಟೆಸ್ಟ್ಸ್ಪೆಷಲಿಸ್ಟ್ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದು ತಂಡಕ್ಕೆ ಭಾರೀ ದೊಡ್ಡ ಹೊಡೆತ ಬಿದ್ದಿತು.

ಕುಸಿದ ಟೀಂ ಇಂಡಿಯಾವನ್ನು ಮೇಲಕ್ಕೆತ್ತಲು ಅಗರ್ವಾಲ್​​ ಶ್ರಮ ಪಟ್ಟರಾದರು ಇವರಿಗೆ ಅಜಿಂಕ್ಯ ರಹಾನೆ(1) ಹಾಗೂ ರೋಹಿತ್ ಶರ್ಮಾ(5) ಸಾತ್ ನೀಡುವಲ್ಲಿ ಸೋತರು.

ಇದನ್ನೂ ಓದಿ: (VIDEO): ಬುಮ್ರಾ ಯಾರ್ಕರ್ ದಾಳಿಗೆ ಆಸೀಸ್ ಉಡೀಸ್: 39 ವರ್ಷಗಳ ದಾಖಲೆ ನೆಲಸಮ

ಸದ್ಯ ಅಗರ್ವಾಲ್ 28 ಹಾಗೂ ರಿಷಭ್ ಪಂತ್ 6 ರನ್​ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ದಿನದಾಟಕ್ಕೆ ಭಾರತ 346 ರನ್​ಗಳ ಮುನ್ನಡೆಯೊಂದಿಗೆ 54 ರನ್​ಗೆ 5 ವಿಕೆಟ್ ಕಳೆದುಕೊಂಡಿದೆ. ಆಸೀಸ್ ಪರ ಪ್ಯಾಟ್ ಕಮಿನ್ಸ್​ 4 ಹಾಗೂ ಜೋಷ್ ಹ್ಯಾಜ್ಲೆವುಡ್ 1 ವಿಕೆಟ್ ಪಡೆದಿದ್ದಾರೆ.

ಇದಕ್ಕೂ ಮೊದಲು ನಿನ್ನೆ ಎರಡನೇ ದಿನದಾಟಕ್ಕೆ ವಿಕೆಟ್ ನಷ್ಟವಿಲ್ಲದೆ 8 ರನ್​ ಗಳಿಸಿದ್ದ ಆಸೀಸ್ ಇಂದು ದಿನದಾಟದ ಆರಂಭದಲ್ಲೇ ಆ್ಯರೋನ್ ಫಿಂಚ್(8) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೆ ಬುಮ್ರಾ ಮಾರ್ಕಸ್ ಹ್ಯಾರಿಸ್​ಗೆ(22) ಔಟ್ ಆದರು. ಅಂತೆಯೆ ಬುಮ್ರಾ ಬೆಂಕಿಯ ಚೆಂಡಿಗೆ ಶಾನ್ ಮಾರ್ಶ್(19), ಟ್ರಾವಿಸ್ ಹೆಡ್(20), ಟಿಮ್ ಪೇಯ್ನ್​​(22,) ನೇಥನ್ ಲ್ಯಾನ್(0), ಹ್ಯಾಜ್ಲೇವೂಡ್(0) ಪೆವಿಲಿಯನ್ ಹಾದಿ ಹಿಡಿದರು.

ಇತ್ತ ರವೀಂದ್ರ ಜಡೇಜಾ ಸ್ಪಿನ್ ಮೋಡಿಗೆ ಉಸ್ಮನ್ ಖ್ವಾಜಾ(21) ಹಾಗೂ ಮಿಚೆಲ್ ಮಾರ್ಶ್(19) ನಿರ್ಗಮಿಸಿದರು. ನಿಧಾನಗತಿಯ ಇನ್ನಿಂಗ್ಸ್​ ಕಟ್ಟಲು ಹೊರಟ ಪ್ಯಾಟ್ ಕಮಿನ್ಸ್​(17) ಕೂಡ ಬೇಗನೆ ಔಟ್ ಆಗಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ. ಭಾರತ ಪರ ಜಸ್​ಪ್ರೀತ್ ಬುಮ್ರಾ 6 ವಿಕೆಟ್ ಕಿತ್ತಿರೆ, ಜಡೇಜಾ 2 ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ತಲಾ 1 ವಿಕೆಟ್ ಪಡೆದರು.ಇದನ್ನೂ ಓದಿ: 'ನೀನು ಸಿಕ್ಸ್​ ಸಿಡಿಸಿದರೆ ನನ್ನ ಬೆಂಬಲ ಮುಂಬೈ ತಂಡಕ್ಕೆ': ರೋಹಿತ್​ರನ್ನು ಕೆಣಕಿದ ಆಸೀಸ್ ನಾಯಕ

ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಪೂಜಾರ ಅವರ ಶತಕ, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್ ಹಾಗೂ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 443 ರನ್​ಗೆ ಡಿಕ್ಲೇರ್ ಮಾಡಿಕೊಂಡಿತ್ತು.

First published:December 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ