ಮಹಿಳಾ ವಿಶ್ವಕಪ್ ಹಾಕಿ: ಸೆಮಿ ಫೈನಲ್ ಸ್ಥಾನಕ್ಕಾಗಿ ಐರ್ಲೆಂಡ್ ವಿರುದ್ಧ ಭಾರತ ಸೆಣೆಸಾಟ

news18
Updated:August 2, 2018, 2:32 PM IST
ಮಹಿಳಾ ವಿಶ್ವಕಪ್ ಹಾಕಿ: ಸೆಮಿ ಫೈನಲ್ ಸ್ಥಾನಕ್ಕಾಗಿ ಐರ್ಲೆಂಡ್ ವಿರುದ್ಧ ಭಾರತ ಸೆಣೆಸಾಟ
news18
Updated: August 2, 2018, 2:32 PM IST
ನ್ಯೂಸ್ 18 ಕನ್ನಡ

ಲಂಡನ್ (ಆ. 02): ರಾಣಿ ರಾಮ್​​ಪಾಲ್ ನೇತೃತ್ವದ ಭಾರತದ ಮಹಿಳಾ ಹಾಕಿ ತಂಡ ಇಂದು ಐರ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಹಣಾಹಣಿಗೆ ಸಜ್ಜಾಗಿದೆ. ಭಾರತಕ್ಕಿಂದ್ದು ಸೇಡಿನ ಪಂದ್ಯವಾಗಿದ್ದು, ಇದರಲ್ಲಿ ಗೆದ್ದರೆ 44 ವರ್ಷಗಳ ಬಳಿಕ ವಿಶ್ವಕಪ್​​ನಲ್ಲಿ ಸೆಮಿಫೈನಲ್​ಗೆ ಲಗ್ಗೆ ಇಟ್ಟ ಸಾಧನೆ ಮಾಡಲಿದೆ.

ಲೀಗ್ ಹಂತದಲ್ಲಿ ಐರ್ಲೆಂಡ್ ವಿರುದ್ಧ 0-1 ಅಂತರದಿಂದ ಸೋತಿದ್ದ ಭಾರತದ ವನಿತೆಯರು, ಮಂಗಳವಾರ ನಡೆದ ಕ್ರಾಸ್​​​​ಓವರ್ ಪ್ಲೇ ಆಫ್​ ಪಂದ್ಯದಲ್ಲಿ ಇಟಲಿಯನ್ನು 3-0 ಗೋಲುಗಳಿಂದ ಮಣಿಸಿ ಜಯ ಕಂಡಿತ್ತು. ಈ ವರೆಗೆ ಭಾರತ-ಐರ್ಲೆಂಡ್ ತಂಡ ಒಟ್ಟು 8 ಬಾರಿ ಮುಖಾಮುಖಿ ಆಗಿದ್ದು, ಭಾರತ 2 ರಲ್ಲಿ ಗೆಲುವು ಕಂಡರೆ, ಐರ್ಲೆಂಡ್ 5 ಪಂದ್ಯದಲ್ಲಿ ಜಯ ಸಾಧಿಸಿದೆ. 1 ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಇಂದಿನ ಪಂದ್ಯದಲ್ಲಿ ಭಾರತದ ವನಿತೆಯರು ಜಯ ಸಾಧಿಸಿದ್ದೇ ಆದಲ್ಲಿ ಎರಡನೇ ಬಾರಿ ವಿಶ್ವಕಪ್ ಸೆಮಿಫೈನಲ್​​​​  ಪ್ರವೇಶ ಪಡೆದ ಸಾಧನೆ ಮಾಡಲಿದೆ. ಇತ್ತ ಬಲಿಷ್ಠ ತಂಡಗಳಿಗೆ ಮಣ್ಣುಮುಕ್ಕಿಸಿರುವ ಐರ್ಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಕಂಡರೆ, ಭಾರತ ಹಾಗೂ ಅಮೆರಿಕಾ ವಿರುದ್ಧ ಗೆದ್ದು ಬೀಗಿತ್ತು.

ಹೀಗಾಗಿ ಉಭಯ ತಂಡಗಳಿಗೆ ಇಂದಿನ ಕ್ವಾರ್ಟರ್ ಫೈನಲ್ ಪಂದ್ಯ ಮುಖ್ಯವಾಗಿದ್ದು, ಸೆಮಿ ಫೈನಲ್​​​​ ಪ್ರವೇಶಿಸುವ ತಂಡ ಯಾವುದಾಗಲಿದೆ ಎಂಬುದು ಕಾದು ನೋಡಬೇಕಿದೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ