ಶನಿವಾರ ನಡೆದ ಅಂಧರ ಟಿ20 ವಿಶ್ವಕಪ್ನಲ್ಲಿ (T20 World Cup 2022) ಭಾರತ ತಂಡ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶವು ತನ್ನ ಆಟಗಾರರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ (Narendra Modi) ಟ್ವೀಟ್ ಮಾಡಿ, 'ಭಾರತವು ತನ್ನ ಆಟಗಾರರ ಬಗ್ಗೆ ಹೆಮ್ಮೆಪಡುತ್ತದೆ. ಅಂಧರ ಟಿ20 ವಿಶ್ವಕಪ್ ಗೆದ್ದಿದ್ದೇವೆ, ತುಂಬಾ ಖುಷಿಯಾಗಿದೆ. ನಮ್ಮ ತಂಡಕ್ಕೆ ಅಭಿನಂದನೆಗಳು ಮತ್ತು ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇವೆ‘ ಎಂದು ಬರೆದುಕೊಂಡಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M.Chinnaswamy Stadium) ನಡೆದ ಅಂಧರ ಟಿ20 ವಿಶ್ವಕಪ್ನಲ್ಲಿ ಸುನೀಲ್ ರಮೇಶ್ ಮತ್ತು ನಾಯಕ ಅಜಯ್ ಕುಮಾರ್ ರೆಡ್ಡಿ ಅವರ ಅದ್ಭುತ ಶತಕಗಳ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶವನ್ನು 120 ರನ್ಗಳಿಂದ ಸೋಲಿಸಿ ಸತತ ಮೂರನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು.
3ನೇ ಬಾರಿ ವಿಶ್ವಕಪ್ ಗೆದ್ದ ಭಾರತ:
ಕರ್ನಾಟಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ವಿಜೇತ ತಂಡಕ್ಕೆ ಟ್ರೋಫಿಯನ್ನು ವಿತರಿಸಿದರು. ಭಾರತ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಇನ್ ಫಾರ್ಮ್ ಬ್ಯಾಟ್ಸ್ ಮನ್ ಸುನಿಲ್ ರಮೇಶ್ ಉಪನಾಯಕ ಡಿ ವೆಂಕಟೇಶ್ವರ ರಾವ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರು.
ಅಜೇಯ 248 ರನ್ಗಳ ಜೊತೆಯಾಟ:
ಇನ್ನು, ಈ ಪಂದ್ಯದಲ್ಲಿ ಭಾರತದ ಇಬ್ಬರು ಬ್ಯಾಟ್ಸ್ಮನ್ಗಳು ಶತಕ ಸಿಡಿಸಿದ್ದರು. ಸುನಿಲ್ ರಮೇಶ್ 63 ಎಸೆತಗಳಲ್ಲಿ 136 ರನ್ ಗಳಿಸಿದರು.ನಾಯಕ ಅಜಯ್ ರೆಡ್ಡಿ 50 ಎಸೆತಗಳಲ್ಲಿ 100 ರನ್ ಗಳಿಸಿದರು. ಭಾರತ 20 ಓವರ್ಗಳಲ್ಲಿ 2 ವಿಕೆಟ್ಗೆ 277 ರನ್ ಗಳಿಸಿತು. ಉತ್ತರವಾಗಿ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 3 ವಿಕೆಟ್ಗೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ಸತತ 3ನೇ ಬಾರಿ ವಿಶ್ವಕಪ್ ಗೆದ್ದಿತು.
India is proud of our athletes. Delighted that we have won the T-20 World Cup for the Blind. Congratulations to our team and best wishes to them for their future endeavours. https://t.co/W3eQMo3LRn
— Narendra Modi (@narendramodi) December 17, 2022
ವಿಜಯವನ್ನು 2022 ರ ಅತಿದೊಡ್ಡ ವಿಜಯ ಎಂದೂ ಕರೆಯಲಾಗುತ್ತಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಹಿರಿಯ ಪುರುಷರ ತಂಡ ಮತ್ತು ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, 19 ವರ್ಷದೊಳಗಿನವರ ತಂಡವು ಖಂಡಿತವಾಗಿಯೂ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತದ ಅಂಧರ ತಂಡವೂ ಎರಡು ಬಾರಿ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಒಟ್ಟಾರೆ ಇದು ಅವರ 5ನೇ ಪ್ರಶಸ್ತಿಯಾಗಿದೆ. ಬಾಂಗ್ಲಾದೇಶ ಪಂದ್ಯದಲ್ಲಿ 7 ಬೌಲರ್ಗಳನ್ನು ಪ್ರಯತ್ನಿಸಿದರು, ಆದರೆ ಒಬ್ಬರಿಗೆ ಮಾತ್ರ ವಿಕೆಟ್ ಸಿಕ್ಕಿತು. 6 ಬೌಲರ್ಗಳು ವಿಕೆಟ್ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಬಾಂಗ್ಲಾದೇಶ ತಂಡಕ್ಕೆ ಆರಂಭದಿಂದಲೂ ವೇಗವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: IND vs BAN: ಅಪರೂಪದ ದಾಖಲೆ ಬರೆದ ಶುಭಮನ್ ಗಿಲ್, ಈ ಸಾಧನೆ ಮಾಡಿದ ವರ್ಷದ ಮೊದಲ ಭಾರತೀಯ ಆಟಗಾರ
ನಮ್ಮನ್ನು ಕರುಣೆಯಿಂದ ನೋಡಬೇಡಿ:
ಫೈನಲ್ ಗೆದ್ದ ನಂತರ ತಂಡದ ನಾಯಕ ಮಾತನಾಡಿದ್ದು, ‘ನಮ್ಮನ್ನು ಕರುಣೆಯಿಂದ ನೋಡಬೇಡಿ, ಇತರ ಆಟಗಾರರಂತೆ ನಮ್ಮನ್ನು ನೋಡಿಕೊಳ್ಳಿ. ನಾವು ಭಾರತದ ಕೀರ್ತಿಯನ್ನು ಹೆಚ್ಚಿಸಬಹುದು, ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ನಮಗೂ ಅವಕಾಶವನ್ನು ನೀಡಬಹುದು. ನಮ್ಮೆಲ್ಲರನ್ನೂ ಇತರ ಆಟಗಾರರಂತೆ ನೋಡಿಕೊಳ್ಳಿ. ನಮ್ಮನ್ನು ಅಂಗವಿಕಲರಂತೆ ನಡೆಸಿಕೊಳ್ಳಬಾರದು. ಪ್ರಪಂಚದ ಉಳಿದ ಆಟಗಾರರಂತೆ ನಮ್ಮನ್ನು ನಿಖರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ