ಭಾರತ-ಇಂಗ್ಲೆಂಡ್ ಟೆಸ್ಟ್: ಕಳಪೆ ಫಾರ್ಮ್​​ನಲ್ಲಿದ್ದರು ಕನ್ನಡಿಗ ರಾಹುಲ್​ಗೆ ಅವಕಾಶ ಸಿಕ್ಕಿದ್ದೇಗೆ..?

news18
Updated:September 29, 2018, 7:54 PM IST
ಭಾರತ-ಇಂಗ್ಲೆಂಡ್ ಟೆಸ್ಟ್: ಕಳಪೆ ಫಾರ್ಮ್​​ನಲ್ಲಿದ್ದರು ಕನ್ನಡಿಗ ರಾಹುಲ್​ಗೆ ಅವಕಾಶ ಸಿಕ್ಕಿದ್ದೇಗೆ..?
news18
Updated: September 29, 2018, 7:54 PM IST
ನ್ಯೂಸ್ 18 ಕನ್ನಡ

ಆಂಗ್ಲರ ನಾಡಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಭಾರತ ತಂಡ 3ನೇ ಹಾಗೂ 4ನೇ ಟೆಸ್ಟ್​​ಗೆ ಫಾರ್ಮ್​​ನಲ್ಲಿ ಇಲ್ಲದ ಆಟಗಾರರನ್ನು ತಂಡದಿಂದ ಕೈ ಬಿಟ್ಟಿದೆ. ಆದರೆ ಬ್ಯಾಟಿಂಗ್​​ನಲ್ಲಿ ಕಳಪೆ ಪ್ರದರ್ಶನ ತೋರಿದರೂ ಕೆ.ಎಲ್ ರಾಹುಲ್ ಅವರು ಮುಂದಿನ ಟೆಸ್ಟ್​ಗೆ ಆಯ್ಕೆಯಾಗಿದ್ದಾರೆ. ಅನುಭವಿ ಮುರಳಿ ವಿಜಯ್ ಸ್ಥಾನ ಕಳೆದುಕೊಂಡು ಮನೆ ಸೇರಿದ್ದಾರೆ. ಇದಕ್ಕೆ ಕಾರಣ ಫಾರ್ಮ್ ವೈಫಲ್ಯ. ಅತ್ತ ರಾಹುಲ್ ಕೂಡ ಅಂತಹ ಹೇಳಿಕೊಳ್ಳುವ ಪ್ರದರ್ಶನವೇನು ನೀಡಿಲ್ಲ. ಆದರು ಮುಂದಿನ 2ಟೆಸ್ಟ್ ಆಯ್ಕೆಯಾಗಿದ್ದಾರೆ. ಅದಕ್ಕೆ ಕಾರಣ ಅವರು ಹಿಡಿದ 7 ಅದ್ಭುತ ಕ್ಯಾಚ್​ಗಳು.

ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೂ ಮೂರನೇ ಟೆಸ್ಟ್ ಮಹತ್ವದಾಗಿತ್ತು. ಈ ಪಂದ್ಯದಲ್ಲಿ ಆರ್ಭಟಿಸಬೇಕಾದ ಅನಿವಾರ್ಯತೆ ರಾಹುಲ್ ಮೇಲಿತ್ತು. ಆದರೆ ರಾಹುಲ್ ಮೂರನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್ನಲ್ಲಿ 23 ಹಾಗೂ 2ನೇ ಇನ್ನಿಂಗ್ಸ್​ನಲ್ಲಿ 36 ರನ್ ಬಾರಿಸಿದ್ದರಷ್ಟೆ. ಈ ಪ್ರದರ್ಶನ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಕಾಗಿರಲಿಲ್ಲ. ಅಲ್ಲದೆ  ತಾನು ಬಾರಿಸಿದ ಇಷ್ಟು ರನ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಸಾಕಾಗದು ಎಂದು ಸ್ವತಃ ರಾಹುಲ್ ಅವರಿಗೂ ತಿಳಿದಿತ್ತು. ಹೀಗಾಗೆ ರಾಹುಲ್ ಫೀಲ್ಡಿಂಗ್​​ನಲ್ಲಿ ಪೂರ್ಣ ಅಂಕ ಗಳಿಸುವತ್ತ ಚಿತ್ತ ನೆಟ್ಟರು. ತಮಗೆ ಬರುವ ಕ್ಯಾಚ್​​​ಗಳನ್ನು ಬಿಡಲೇ ಬಾರದು ಎಂದು ಕಣಕ್ಕೆ ಇಳಿದರು. ಇದರ ಪರಿಣಾಮವೇ ರಾಹುಲ್ ನಾಟಿಂಗ್ ಹ್ಯಾಮ್​​ನಲ್ಲಿ ಸಿಕ್ಕ ಕ್ಯಾಚ್​​ಳನ್ನು ಪಡೆದು ಅಬ್ಬರಿಸಿದರು.

ಹೀಗೆ ಬ್ಯಾಟಿಂಗ್​​ನಲ್ಲಿ ಕೈ ಹಿಡಿಯದ ಅದೃಷ್ಠ, ರಾಹುಲ್​ಗೆ ಫೀಲ್ಡಿಂಗ್​​​ನಲ್ಲಿ ಕೈ ಹಿಡಿದಿದೆ. 7 ಸ್ಲಿಪ್ ಕ್ಯಾಚ್​ಗಳನ್ನು ಅನಾಯಾಸವಾಗಿ ಪಡೆದು ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ.

- ಗಿರೀಶ್ ಜೆಎಸ್
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626