ಭಾರತ-ಇಂಗ್ಲೆಂಡ್ ಟೆಸ್ಟ್​: ಜಿದ್ದಾಜಿದ್ದಿಯ ಫೈಟ್​ನಲ್ಲಿ ಅಬ್ಬರಿಸುತ್ತಾ ಟೀಂ ಇಂಡಿಯಾ ಫಾಸ್ಟ್​​ ಬೌಲಿಂಗ್​..?

news18
Updated:July 28, 2018, 8:07 PM IST
ಭಾರತ-ಇಂಗ್ಲೆಂಡ್ ಟೆಸ್ಟ್​: ಜಿದ್ದಾಜಿದ್ದಿಯ ಫೈಟ್​ನಲ್ಲಿ ಅಬ್ಬರಿಸುತ್ತಾ ಟೀಂ ಇಂಡಿಯಾ ಫಾಸ್ಟ್​​ ಬೌಲಿಂಗ್​..?
news18
Updated: July 28, 2018, 8:07 PM IST
ನ್ಯೂಸ್ 18 ಕನ್ನಡ

ನಿನ್ನೆಯಷ್ಟೆ ಇಂಗ್ಲೆಂಡ್ ಕೌಂಟಿ ತಂಡವಾದ ಸೆನೆಕ್ಸ್​ ವಿರುದ್ಧ ಅಭ್ಯಾಸ ಪಂದ್ಯ ಮುಗಿಸುರುವ ಭಾರತ ತಂಡ ಆಗಸ್ಟ್​ 1 ರಿಂದ ಆರಂಭವಾಗುವ ಟೆಸ್ಟ್​ ಬಗ್ಗೆ ಯೋಜನೆ ರೂಪಿಸಿಕೊಂಡಿದೆ. ಮೂರು ದಿನದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು ನೀರಸ ಪ್ರದರ್ಶನ ತೋರಿದರಾದರು, ಬೌಲರ್​ಗಳ ಆಟ ಗಮನಾರ್ಹವಾಗಿತ್ತು.

ಉಮೇಶ್ ಯಾದವ್: ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಉಮೇಶ್ ಯಾದವ್ 18 ಓವರ್​​​ ಬೌಲ್ ಮಾಡಿದ್ದು 35 ರನ್​ ನೀಡಿ 4 ವಿಕೆಟ್ ಕಬಳಿಸಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಈ ಹಿಂದೆ ಸೌತ್ ಆಫ್ರಿಕ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಉಮೇಶ್ ಯಾದವ್ ಅವರನ್ನು ಬಿಸಿಸಿಐ ಕೈ ಬಿಟ್ಟು ಜಸ್​ಪ್ರೀತ್ ಬುಮ್ರಾ ಅವರನ್ನ ಆಯ್ಕೆ ಮಾಡಿತ್ತು. ಬಳಿಕ ಐಪಿಎಲ್​​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪರ ಆಡಿದ ಯಾದವ್ ತಮ್ಮ ವೇಗದ ಲಯ ಕಂಡುಕೊಂಡರು. ಒಟ್ಟು 37 ಟೆಸ್ಟ್​ ಪಂದ್ಯವನ್ನು ಆಡಿರುವ ಉಮೇಶ್ ಯಾದವ್ 103 ವಿಕೆಟ್ ಕಬಳಿಸಿದ್ದಾರೆ. 93 ರನ್ ನೀಡಿ 5 ವಿಕೆಟ್ ಕಿತ್ತಿರುವುದು ಶ್ರೇಷ್ಠ ಸಾಧನೆಯಾಗಿದೆ.

ಮೊಹಮ್ಮದ್ ಶಮಿ: ಭಾರತ ಈ ವರ್ಷದ ಆರಂಭ ಜೊಹನ್ಸ್​​ಬರ್ಗ್​​ನಂತಹ ಕಠಿಣ ಪಿಚ್​ನಲ್ಲಿ ಆಡಿದ್ದು, ಇದರಲ್ಲಿ ಮೊಹಮ್ಮದ್ ಶಮಿ ಅವರು ಮ್ಯಾಚ್ ವಿನ್ನಿಂಗ್ ಬೌಲಿಂಗ್ ಪದರ್ಶಿಸಿದ್ದರು. ಕೇವಲ 28 ರನ್ ನೀಡಿ ಸೌತ್ ಆಫ್ರಿಕಾದ 5 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಶಮಿ ಅವರು ವೈಯಕ್ತಿಕ ಜೀವನದಲ್ಲಿ ಕೆಲ ಸಮಸ್ಯೆ ಎದುರಿಸಬೇಕಾಗಿ ಬಂದು ಕ್ರಿಕೆಟ್​ನಿಂದ ಕೊಂಚ ದೂರ ಉಳಿಯಬೇಕಾಯಿತು. ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ. ಒಟ್ಟು 30 ಟೆಸ್ಟ್​ ಪಂದ್ಯಗಳನ್ನು ಆಡಿರುವ ಶಮಿ 110 ವಿಕೆಟ್ ಪಡೆದಿದ್ದಾರೆ. 5 ವಿಕೆಟ್ ಮೂರು ಬಾರಿ ಕಬಳಿಸಿದ್ದು, 28 ರನ್​ ನೀಡಿ 5 ವಿಕೆಟ್ ಕಿತ್ತಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ.

ಇಶಾಂತ್ ಶರ್ಮಾ: ಕೆಲ ವರ್ಷಗಳ ಹಿಂದೆ ಇಶಾಂತ್ ಶರ್ಮಾ ಹಾಗೂ ಜಹೀರ್ ಖಾನ್ ಜೋಡಿ ಬೌಲಿಂಗ್ ಮಾಡಲು ಇಳಿದರೆಂದರೆ ಎದುರಾಳಿಯಲ್ಲಿ ನಡುಕ ಶುರುವಾಗುತ್ತಿತ್ತು. ಟೆಸ್ಟ್​ ಪಂದ್ಯಕ್ಕೆ ಹೇಳಿಮಾಡಿಸಿದ ಬೌಲರ್ ಆಗಿರುವ ಇಶಾಂತ್ ಶರ್ಮಾ, 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಲಾರ್ಡ್ಸ್​​ನಲ್ಲಿ ನಡೆದ ಈ ಪಂದ್ಯದಲ್ಲಿ ಇಶಾಂತ್ 74 ರನ್​​ಗೆ 7 ವಿಕೆಟ್ ಕಬಳಿಸಿದ್ದರು. ಇದರಿಂದಲೇ 28 ವರ್ಷಗಳ ಬಳಿಕ ಇಂಗ್ಲೆಂಡ್​ನ ಲಾರ್ಡ್ಸ್​​​ ಮೈದಾನದಲ್ಲಿ ಭಾರತ ಗೆಲುವಿನ ನಗೆ ಬೀರಿತ್ತು. ಇಶಾಂತ್ ಶರ್ಮಾ ಒಟ್ಟು 82 ಟೆಸ್ಟ್ ಪಂದ್ಯವನ್ನಾಡಿದ್ದು 238 ವಿಕೆಟ್ ಕಬಳಿಸಿದ್ದಾರೆ. 7 ಬಾರಿ 5 ವಿಕೆಟ್ ಕಿತ್ತು 74 ರನ್​ ನೀಡಿ 7 ವಿಕೆಟ್ ಪಡೆದಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ.

ಹಾರ್ದಿಕ್ ಪಾಂಡ್ಯ: ಹಾರ್ದಿಕ್ ಪಾಂಡ್ಯ ಅವರು ಟೆಸ್ಟ್​ ಪಂದ್ಯದಲ್ಲಿ ತಮ್ಮ ನೈಜ್ಯ ಪ್ರದರ್ಶನವನ್ನು ತೋರಿಲ್ಲ. ಆಡಿದ್ದು 7 ಟೆಸ್ಟ್​ ಪಂದ್ಯವಾದರು ಪಾಂಡ್ಯ ಮೇಲೆ ಟೀಂ ಇಂಡಿಯಾ ಹೆಚ್ಚಿನ ನಂಬಿಕೆ ಹೊಂದಿದೆ. ಪಾಂಡ್ಯ ಒಟ್ಟು 7 ವಿಕೆಟ್ ಪಡೆದಿದ್ದು 27 ರನ್​ ನೀಡಿ 2 ವಿಕೆಟ್ ಕಿತ್ತಿರುವುದು ಶ್ರೇಷ್ಠ ಸಾಧನೆಯಾಗಿದೆ.

ಶಾರ್ದೂಲ್ ಠಾಕೂರ್: ದೇಶಿ ಕ್ರಿಕೆಟ್​​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ 26 ವರ್ಷ ಪ್ರಾಯದ ಶಾರ್ದೂಲ್ ಠಾಕೂರ್ ಐಪಿಎಲ್​​ನಲ್ಲೂ ಮಿಂಚಿ ತನ್ನ ಸಾಮರ್ಥ್ಯ ತೋರಿಸಿದ್ದಾರೆ. ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್ ಆಡುತ್ತಿರುವ ಠಾಕೂರ್ ಮೇಲೆ ಹೆಚ್ಚಿನ ನಂಬಿಕೆ ಇದೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 55 ಪಂದ್ಯವಾಡಿರುವ ಠಾಕೂರ್ 188 ವಿಕೆಟ್ ಪಡೆದಿದ್ದಾರೆ. ಒಟ್ಟು 12 ಬಾರಿ 5 ವಿಕೆಟ್ ಕಬಳಿಸಿದ್ದು, 30 ರನ್ ನೀಡಿ 6 ವಿಕೆಟ್ ಕಿತ್ತಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ.
Loading...

ಒಟ್ಟಾರೆ ಆಗಸ್ಟ್ 1 ರಿಂದ ಆರಂಭವಾಗುವ ಭಾರತ-ಇಂಗ್ಲೆಂಡ್ ಟೆಸ್ಟ್​ ಸರಣಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದ್ದು, ಜಿದ್ದಾಜಿದ್ದಿಯ ಫೈಟ್ ಎಂದೇ ಬಿಂಬಿತವಾಗಿದೆ. ಈ ಮಧ್ಯೆ ಆಂಗ್ಲರ ನಾಡಲ್ಲಿ ಭಾರತೀಯ ಬೌಲರ್​​ಗಳ ಪ್ರದರ್ಶನ ಯಾವರೀತಿ ಇರಲಿದೆ ಎಂಬುದು ಕಾದುನೋಡಬೇಕಿದೆ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ