ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾದ 3 ವಿಕೆಟ್ ಕಿತ್ತು ದಾಖಲೆ ಬರೆದ ಕುರ್ರನ್

news18
Updated:August 2, 2018, 9:09 PM IST
ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾದ 3 ವಿಕೆಟ್ ಕಿತ್ತು ದಾಖಲೆ ಬರೆದ ಕುರ್ರನ್
news18
Updated: August 2, 2018, 9:09 PM IST
ನ್ಯೂಸ್ 18 ಕನ್ನಡ

ಬರ್ಮಿಂಗ್‌ಹ್ಯಾಮ್‌​​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಈಗಾಗಲೇ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ಮಧ್ಯೆ ಇಂಗ್ಲೆಂಡ್​ನ ಬೌಲರ್ ಸ್ಯಾಮ್ ಕುರ್ರನ್ ಟೀಂ ಇಂಡಿಯಾದ 3 ಪ್ರಮುಖ ವಿಕೆಟ್ ಕಿತ್ತು ನೂತನ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ಟೆಸ್ಟ್​ ಕ್ರಿಕೆಟ್ ತಂಡದಲ್ಲಿ 6 ಓವರ್​​ನಲ್ಲಿ 3 ವಿಕೆಟ್ ಪಡೆದ ಯುವ ಆಟಗಾರರ ಸಾಲಿನಲ್ಲಿ ಕುರ್ರನ್ ಮೊದಲಿಗರಾಗಿದ್ದಾರೆ.

20 ರನ್​ ಗಳಿಸಿದ್ದಾಗ ಎಲ್​ಬಿಡಬ್ಲ್ಯು ಮಾಡಿ ಮುರಳಿ ವಿಜಯ್ ಅವರನ್ನು ಪೆವಿಲಿಯನ್​ಗೆ ಅಟ್ಟಿದ ಕುರ್ರನ್, ಬಳಿಕ 26 ರನ್​ ಬಾರಿಸಿದ್ದ ಧವನ್ ಅವರನ್ನು ಔಟ್ ಮಾಡದರು. ಇನ್ನು ಕೆ. ಎಲ್. ರಾಹುಲ್ ಅವರನ್ನು ಕೇವಲ 4 ರನ್​ಗೆ ಬೌಲ್ಡ್ ಮಾಡಿ 3 ವಿಕೆಟ್ ಕಿತ್ತ ಯುವ ಆಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಸ್ಯಾಮ್ ಕುರ್ರನ್ ಅವರು 6 ಓವರ್​​ಗೆ 23 ರನ್​ ನೀಡಿ 3 ವಿಕೆಟ್ ಕಿತ್ತು ಇಂಗ್ಲೆಂಡ್ ತಂಡದಲ್ಲಿ ಮೂರು ವಿಕೆಟ್ ಪಡೆದ ಯುವ ಆಟಗಾರರ ಪಟ್ಟಿಯಲ್ಲಿ ಈಗ ಮೊದಲಿಗರಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಜೇಮ್ಸ್​ ಆಂಡರ್ಸನ್ ಇದ್ದು 16 ಪಂದ್ಯದಲ್ಲಿ 73 ರನ್​ ನೀಡಿ 5 ವಿಕೆಟ್ ಪಡೆದಿದ್ದಾರೆ.ಆಲ್ರೌಂಡರ್ ಆಗಿರುವ ಕುರ್ರನ್ ಅವರು ಎರಡು ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ್ದು, ಒಟ್ಟು 5 ವಿಕೆಟ್ ಕಿತ್ತಿದ್ದಾರೆ. ಅಂತೆಯೆ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ 42 ಪಂದ್ಯವನ್ನಾಡಿದ್ದು 119 ವಿಕೆಟ್ ಕಬಳಿಸಿದ್ದಾರೆ. 58 ರನ್​ ನೀಡಿ 7 ವಿಕೆಟ್ ಪಡೆದಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...