ಇಂದಿನಿಂದ ಭಾರತ-ಇಂಗ್ಲೆಂಡ್ 3ನೇ ಟೆಸ್ಟ್: ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

news18
Updated:August 18, 2018, 7:53 AM IST
ಇಂದಿನಿಂದ ಭಾರತ-ಇಂಗ್ಲೆಂಡ್ 3ನೇ ಟೆಸ್ಟ್: ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ
news18
Updated: August 18, 2018, 7:53 AM IST
ನ್ಯೂಸ್ 18 ಕನ್ನಡ

ನ್ಯಾಟಿಂಗ್​ಹ್ಯಾಮ್​​ (ಆ. 18): ಭಾರತ-ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್​ ಇಂದಿನಿಂದ ನ್ಯಾಟಿಂಗ್​​​ಹ್ಯಾಮ್​​ನ ಟ್ರೆಂಟ್​​ ಬ್ರಿಡ್ಜ್​​​ ಅಂಗಳದಲ್ಲಿ ಆರಂಭವಾಗಲಿದ್ದು, ಗೌರವ ಉಳಿಸಿಕೊಳ್ಳಲು ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾಗಿದೆ. ಮೊದಲ ಟೆಸ್ಟ್​​ ಪಂದ್ಯದಲ್ಲಿ 31 ರನ್​​ಗಳ ಸೋಲು ಕಂಡಿದ್ದ ಭಾರತ, ಲಾರ್ಡ್ಸ್​​ನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ 159 ರನ್​ಗಳ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಇಂದಿನಿಂದ ಆರಂಭವಾಗುವ 3ನೇ ಟೆಸ್ಟ್ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಟೀಂ ಇಂಡಿಯಾಕ್ಕೆ ತಲೆನೋವಾಗಿರುವುದು ಬ್ಯಾಟಿಂಗ್ ವೈಫಲ್ಯ. ಅದರಲ್ಲೂ ಪ್ರಮುಖವಾಗಿ ಆರಂಭಿಕರು ದೊಡ್ಡ ತಲೆನೋವಾಗಿ ಬಿಟ್ಟಿದ್ದಾರೆ. ಶಿಖರ್ ಧವನ್, ಮುರಳಿ ವಿಜಯ್ ಉತ್ತಮ ಆರಂಭ ಒದಗಿಸದೇ ಇರುವುದು ತಂಡಕ್ಕೆ ಭಾರೀ ಹಿನ್ನಡೆಯನ್ನು ಉಂಟುಮಾಡಿದೆ. ಹೀಗಾಗಿ ಈ ಪಂದ್ಯದಲ್ಲಾದರು ಆರಂಭಿಕರಿಬ್ಬರು ಟೊಂಕ ಕಟ್ಟಿ ನಿಲ್ಲಬೇಕಿದೆ. ಟೀಂ ಇಂಡಿಯಾ ಸಂಪೂರ್ಣವಾಗಿ ನಾಯಕ ವಿರಾಟ್ ಕೊಹ್ಲಿ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದರ ಬದಲು ಉಪನಾಯಕ ಅಜಿಂಕ್ಯಾ ರಹಾನೆ ಹಾಗೂ ಉಳಿದ ಬ್ಯಾಟ್ಸ್​​ಮನ್​​ಗಳು ತಮ್ಮ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ಚೇತೇಶ್ವರ್ ಪೂಜಾರಗೆ ಎರಡನೇ ಪಂದ್ಯದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಪೂಜಾರ ಬ್ಯಾಟ್​​ನಿಂದ ಹೇಳಿಕೊಳ್ಳುವಂತಹ ಸ್ಕೋರ್ ಬಂದಿಲ್ಲ. ಹೀಗಾಗಿ ಆಡುವ 11ರಲ್ಲಿ ಪೂಜಾರಗೆ ಸ್ಥಾನ ಇದೆಯಾ ನೋಡಬೇಕಿದೆ. ಇದರ ಜೊತೆಗೆ ಕಳಪೆ ಫಾರ್ಮ್​​ನಲ್ಲಿರುವ ದಿನೇಶ್ ಕಾರ್ತಿಕ್ ಬದಲು ಯುವ ಆಟಗಾರ ರಿಷಭ್ ಪಂತ್​ಗೆ ಸ್ಥಾನ ಸಿಗುವ ಲಕ್ಷಣಗಳಿವೆ. ಈಗಾಗಲೇ ಅಭ್ಯಾಸದಲ್ಲಿ ತೊಡಗಿಕೊಂಡಿರುವ ಪಂತ್ ಇಂದಿನ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಇನ್ನು ಬೌಲಿಂಗ್​ನಲ್ಲಿ ಜಸ್​​ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದು, ಕುಲ್ದೀಪ್ ಯಾದವ್ ಸ್ಥಾನ ಬುಮ್ರಾ ತುಂಬುವ ಸಂಭವವಿದೆ. ಅದು ಬಿಟ್ಟರೆ ಕಳೆದ ಪಂದ್ಯದಲ್ಲಿನ ಬೌಲರ್​ಗಳೇ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಯಲಿದ್ದಾರೆ.

ಇತ್ತ ಇಂಗ್ಲೆಂಡ್ ತಂಡದಲ್ಲೂ ಬದಲಾವಣೆಯ ಗಾಳಿ ಬೀಸಿದ್ದು, ನ್ಯಾಯಾಲಯ ಪ್ರಕರಣದಿಂದ ದೋಷಮುಕ್ತಗೊಂಡಿರುವ ಬೆನ್ ಸ್ಟೋಕ್ಸ್ ಅವರು ತಂಡದಲ್ಲಿ ಆಡುವುದು ಖಚಿತವಾಗಿದೆ. ಸ್ಯಾಮ್ ಕುರ್ರನ್ ಬದಲು ಸ್ಟೋಕ್ಸ್ ತಂಡದಲ್ಲಿ ಸ್ಥಾನ ಗಿಟ್ಟಿಸಿಗೊಂಡಿದ್ದಾರೆ. ಜೊತೆಗೆ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್​ಗೆ ಆಡುವ 11ರ ಬಳಗವನ್ನು ಪ್ರಕಟಿಸಿದೆ.

ಇಂಗ್ಲೆಂಡ್ ತಂಡ:

ಜೋ ರೂಟ್ (ನಾಯಕ), ಅಲೆಸ್ಟರ್ ಕುಕ್, ಕೆಟನ್ ಜೆನ್ನಿಂಗ್ಸ್​, ಒಲ್ಲಿ ಪೋಪ್, ಜಾನಿ ಬೈರ್ಸ್ಟೋ, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್​, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಸ್ಟುವರ್ಟ್​ ಬ್ರಾಡ್, ಜೇಮ್ಸ್ ಆಂಡರ್ಸನ್
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...