ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಭಾರತ: ದಿನದಾಟದ ಅಂತ್ಯಕ್ಕೆ ವಿಂಡೀಸ್ 94/6

news18
Updated:October 5, 2018, 5:30 PM IST
ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಭಾರತ: ದಿನದಾಟದ ಅಂತ್ಯಕ್ಕೆ ವಿಂಡೀಸ್ 94/6
  • Advertorial
  • Last Updated: October 5, 2018, 5:30 PM IST
  • Share this:
ನ್ಯೂಸ್ 18 ಕನ್ನಡ

ರಾಜ್​​ಕೋಟ್​​​ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಭಾರತ 649 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡರೆ, ಮೊದಲ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್​ ಇಂಡೀಸ್ 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿದೆ. ಈ ಮೂಲಕ ಕೆರಿಬಿಯನ್ನರು ಇನ್ನೂ 555 ರನ್​​ಗಳ ಹಿನ್ನಡೆಯಲ್ಲಿದೆ.

ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ 50 ರನ್ ಆಗುವ ಮುನ್ನವೇ ತನ್ನ 5 ವಿಕೆಟ್ ಕಳೆದುಕೊಂಡಿತು. ಆರಂಭಿಕರಾದ ಬ್ರಾಥ್​ವೈಟ್ ಕೇವಲ 2 ಹಾಗೂ ಪೋವೆಲ್ 1 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದರೆ, ಶಾಯ್ ಹೋಪ್ ಹಾಗೂ ಹೆಟ್​ಮೆರ್ 10 ರನ್​​ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಸುನಿಲ್ ಅಂಬ್ರಿಸ್ 12, ಶೇನ್ ಡೌರಿಷ್ ಕೇವಲ 10 ರನ್​ ಗಳಿಸಿ ಇನ್ನಿಂಗ್ಸ್​ ಮುಗಿಸಿದರು. ಈ ಮೂಲಕ 2ನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ 6 ವಿಕೆಟ್ ನಷ್ಟಕ್ಕೆ 94 ರನ್​ ಗಳಿಸಿದೆ. ರೊಸ್ಟನ್ ಚೇಸ್ 27 ಹಾಗೂ ಕೀಮೊ ಪೌಲ್ 13 ರನ್​​ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಮೊಹಮ್ಮದ್ ಶಮಿ 2 ವಿಕೆಟ್ ಕಿತ್ತಿದ್ದರೆ, ಅಶ್ವಿನ್, ಜಡೇಜಾ ಹಾಗೂ ಕುಲ್ದೀಪ್ ತಲಾ 1 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: ಪೃಥ್ವಿ ಶಾಗೆ ಕಾಂಡೋಮ್ ಕಂಪೆನಿ ವಿಶ್

ಇದಕ್ಕೂ ಮೊದಲು ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 364 ರನ್ ಕಲೆಹಾಕಿದ್ದ ಭಾರತ, 2ನೇ ದಿನದಾಟದಲ್ಲಿ ಭರ್ಜರಿ ಬ್ಯಾಟಿಂಗ್ ಮುಂದುವರಿಸಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ 5 ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದರು. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 24ನೇ ಶತಕ ಸಿಡಿಸಿದರೆ, ರಿಷಭ್ ಪಂತ್ 92 ರನ್​​ಗೆ ಔಟಾಗುವ ಮೂಲಕ ಶತಕ ವಂಚಿತರಾದರು. ಇನ್ನು ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ ತವರಿನ ಅಂಗಳದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಜಡ್ಡು ಸೆಂಚುರಿ ಆಗುತ್ತಿದ್ದಂತೆ ಕೊಹ್ಲಿ ಡಿಕ್ಲೇರ್ ಮಾಡಿಕೊಂಡರು. ವಿಂಡೀಸ್ ಪರ ದೇವೇಂದ್ರ ಬಿಶು 4 ವಿಕೆಟ್ ಕಿತ್ತು ಮಿಂಚಿದರೆ, ಲೆವಿಸ್ 2 ವಿಕೆಟ್ ಪಡೆದರು.
First published:October 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ