ಏಷ್ಯನ್ ಗೇಮ್ಸ್​ 2018ರಲ್ಲಿ ಇತಿಹಾಸ ನಿರ್ಮಿಸಿದ ಭಾರತ

news18
Updated:August 30, 2018, 3:16 PM IST
ಏಷ್ಯನ್ ಗೇಮ್ಸ್​ 2018ರಲ್ಲಿ ಇತಿಹಾಸ ನಿರ್ಮಿಸಿದ ಭಾರತ
news18
Updated: August 30, 2018, 3:16 PM IST
ನ್ಯೂಸ್ 18 ಕನ್ನಡ

ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಅದ್ಭುತ ಪ್ರದರ್ಶನ ತೋರುತ್ತಿದ್ದು ಈಗಾಗಲೇ ಪದಕದ ಸಂಖ್ಯೆ 50ರ ಗಡಿದಾಟಿದೆ. ಇದರಲ್ಲಿ 11 ಚಿನ್ನ ಗೆದ್ದಿದ್ದರೆ, 20 ಬೆಳ್ಳಿ ಹಾಗೂ 23 ಕಂಚು ಪಡೆದು ಒಟ್ಟು 54 ಪದಕ ಭಾರತದ ಖಾತೆಯಲ್ಲಿದೆ. ಈ ಮೂಲಕ ಭಾರತ ಏಷ್ಯನ್ ಗೇಮ್ಸ್​ನಲ್ಲಿ ನೂತನ ದಾಖಲೆ ಬರೆದಿದೆ.

ಏಷ್ಯನ್ ಗೇಮ್ಸ್​ನಲ್ಲಿ ಭಾರತ ಅತ್ಯಧಿಕ ಬೆಳ್ಳಿ ತನ್ನದಾಗಿಸಿಕೊಂಡ ಸಾಧನೆ ಈ ಬಾರಿ ಮಾಡಿದೆ. ಈ ಹಿಂದೆ 1982ರಲ್ಲಿ ಭಾರತ 19 ಬೆಳ್ಳಿ ತನ್ನ ಖಾತೆಗೆ ಸೇರಿಸಿತ್ತು. ಸದ್ಯ ಈ ದಾಖಲೆಯನ್ನು 2018ರ ಏಷ್ಯನ್ ಗೇಮ್ಸ್​​ನಲ್ಲಿ ಭಾರತ ಮುರಿದಿದ್ದು 20 ಬೆಳ್ಳಿ ಪದಕ ತನ್ನದಾಗಿಸಿ ಇತಿಹಾಸ ನಿರ್ಮಿಸಿದೆ.

ಇನ್ನು ಈ ಬಾರಿ 11 ಚಿನ್ನ ಬಾಜಿಕೊಂಡಿರುವ ಭಾರತ 16 ಗೋಲ್ಡ್ ಪಡೆದುಕೊಂಡರೆ ಏಷ್ಯನ್ ಗೇಮ್ಸ್​​ನಲ್ಲಿ ಭಾರತ ದೇಶ ಗರಿಷ್ಠ ಚಿನ್ನ ಪಡೆದುಕೊಂಡಂತಾಗುತ್ತದೆ. ಈ ಹಿಂದೆ ಭಾರತ 1951ರಲ್ಲಿ 15 ಚಿನ್ನದ ಪದಕ ಪಡೆದು ಸಾಧನೆ ಮಾಡಿತ್ತು. ಕಂಚಿನ ವಿಚಾರಕ್ಕೆ ಬಂದರೆ ಸದ್ಯ 23 ಪದಕ ಭಾರತದ ಖಾತೆಯಲ್ಲಿದೆ. ಆದರೆ ಕಳೆದ ಬಾರಿ 2014ರಲ್ಲಿ 36 ಕಂಚಿನ ಪದಕ ಪಡೆದುಕೊಂಡಿದ್ದು, ಇದನ್ನು ದಾಟಲು ಭಾರತದಿಂದ ಕಷ್ಟ. ಒಟ್ಟಾರೆಯಾಗಿ ಏಷ್ಯನ್ ಗೇಮ್ಸ್​ನಲ್ಲಿ 2010ರಲ್ಲಿ 65 ಪದಕ ಬಾಜಿಕೊಂಡಿದ್ದು ಭಾರತದ ಈ ವರೆಗಿನ ಇತಿಹಾಸವಾಗಿದೆ. ಸದ್ಯ 54 ಪದಕ ಪಡೆದು ಮುನ್ನುಗ್ಗುತ್ತಿರುವ ಭಾರತ ಈ ದಾಖಲೆಯನ್ನೂ ಅಳಿಸಿ ನೂತನ ದಾಖಲೆ ಬರೆಯುತ್ತಾ ನೋಡಬೇಕಿದೆ.

ಈ ವರೆಗೆ ಏಷ್ಯನ್ ಗೇಮ್ಸ್​​ನಲ್ಲಿ ಭಾರತ ಪಡೆದ ಪದಕಗಳ ಪಟ್ಟಿ:

First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...