• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ODI World Cup 2023: ಸಂಕಷ್ಟದಲ್ಲಿ BCCI, 2023 ಏಕದಿನ ವಿಶ್ವಕಪ್​ ಭಾರತದಲ್ಲಿ ನಡೆಯುವುದು ಡೌಟ್​?

ODI World Cup 2023: ಸಂಕಷ್ಟದಲ್ಲಿ BCCI, 2023 ಏಕದಿನ ವಿಶ್ವಕಪ್​ ಭಾರತದಲ್ಲಿ ನಡೆಯುವುದು ಡೌಟ್​?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ODI World Cup 2023: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಭಾರತದಲ್ಲಿ ನಡೆಯಲಿದೆ. ಆದರೆ ವಿಶ್ವಕಪ್‌ನ ಆತಿಥ್ಯವನ್ನು ಭಾರತದಿಂದ ಹಿಂಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

  • Share this:

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 (ODI World Cup 2023) ಭಾರತದಲ್ಲಿ ನಡೆಯಲಿದೆ. ಆದರೆ ICC ವಿಶ್ವಕಪ್‌ನ ಆತಿಥ್ಯವನ್ನು ಭಾರತದಿಂದ ಹಿಂಪಡೆಯುವ ಸಾಧ್ಯತೆ ಇದೆ. ಏಕೆಂದರೆ ಈ ಪ್ರಕರಣವು ತೆರಿಗೆಗೆ ಸಂಬಂಧಿಸಿದೆ. ಭಾರತ ಸರ್ಕಾರದೊಂದಿಗೆ  ಬಿಸಿಸಿಐ ತೆರಿಗೆ ವಿನಾಯತಿ ಪಡೆದುಕೊಳ್ಳದಿದ್ದರೆ ವಿಶ್ವಕಪ್​ ಭಾರತದಲ್ಲಿ ನಡೆಯಲು ಸಾಧ್ಯವಾಗದು. ODI ವಿಶ್ವಕಪ್ 2023 ಆತಿಥ್ಯಕ್ಕಾಗಿ ಭಾರತ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯುವ ಬಗ್ಗೆ ಚರ್ಚಿಸಲು ಐಸಿಸಿ ಯು BCCI ಯನ್ನು ಕೇಳಿದೆ. ICC ನಿಯಮಗಳ ಪ್ರಕಾರ ಆತಿಥೇಯ ರಾಷ್ಟ್ರವು ಪಂದ್ಯಾವಳಿಯನ್ನು ಆಯೋಜಿಸಲು ಸರ್ಕಾರದಿಂದ ತೆರಿಗೆ ವಿನಾಯಿತಿಗಳನ್ನು ಪಡೆಯಬೇಕು. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.


ತೆರೆಗೆ ವಿನಾಯತಿ ಸಂಕಷ್ಟದಲ್ಲಿ ಬಿಸಿಸಿಐ:


ಭಾರತದಲ್ಲಿ ಐಸಿಸಿ ಟಿ20 ವಿಶ್ವಕಪ್ 2016ರ ಆಯೋಜನೆಯ ಸಂದರ್ಭದಲ್ಲಿ ಭಾರತ ಸರ್ಕಾರವು ಐಸಿಸಿಗೆ ಯಾವುದೇ ತೆರಿಗೆ ವಿನಾಯಿತಿ ನೀಡಿರಲಿಲ್ಲ. ಈಗ ಮುಂಬರುವ ವಿಶ್ವಕಪ್‌ಗೆ ಭಾರತ ಸರ್ಕಾರ ತೆರಿಗೆ ವಿನಾಯತಿ ಕುರಿತು ಯಾವುದೇ ಸೂಚನೆಯನ್ನು ನೀಡಲಾಗಿಲ್ಲ. ಹಾಗಾಗಿ ಐಸಿಸಿ ಒಪ್ಪಿದರೆ ಭಾರತದ ಹೊರಗೆ ಟೂರ್ನಿ ಆಡಬಹುದು ಎಂದು ಬಿಸಿಸಿಐ ಕೂಡ ಹೇಳಿದೆ.


2016ರಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಭಾರತ ಸರ್ಕಾರ ತೆರಿಗೆ ವಿನಾಯಿತಿ ನೀಡದ ಕಾರಣ ಬಿಸಿಸಿಐ ಕೋಟಿಗಟ್ಟಲೆ ನಷ್ಟ ಅನುಭವಿಸಿತ್ತು. ಬಿಸಿಸಿಐ ಆದಾಯದಿಂದ ಐಸಿಸಿ 190 ಕೋಟಿ ರೂ.ಗಳನ್ನು ತೆರಿಗೆ ಹೆಚ್ಚುವರಿಯಾಗಿ ವಸೂಲಿ ಮಾಡಿತ್ತು. ಈ ಸಂಬಂಧ ಬಿಸಿಸಿಐ ಐಸಿಸಿ ಟ್ರಿಬ್ಯೂನಲ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.


ಬಿಸಿಸಿಐ ಗೆ 900 ಕೋಟಿ ನಷ್ಟ:


ಭಾರತ ಸರ್ಕಾರ ಮತ್ತೊಮ್ಮೆ ವಿಶ್ವಕಪ್ ಆತಿಥ್ಯಕ್ಕೆ ತೆರಿಗೆ ವಿನಾಯಿತಿ ನೀಡಲು ನಿರಾಕರಿಸಬಹುದು. ಇದರಿಂದಾಗಿ ಐಸಿಸಿ ಮತ್ತು ಬಿಸಿಸಿಐ ಮತ್ತೆ ಸಂಕಷ್ಟಕ್ಕೆ ಸಿಲುಕಬಹುದು. ICC ಈಗಾಗಲೇ ಪ್ರಸಾರ ಆದಾಯದ ಶೇ.21.84 (ಸುಮಾರು ರೂ. 900 ಕೋಟಿ) ತೆರಿಗೆ ಬಿಲ್ ಅನ್ನು ರಚಿಸಿದೆ.


ಇದನ್ನೂ ಓದಿ: ICC World Cup 2023: ಏಕದಿನ ವಿಶ್ವಕಪ್​ 2023 ಸಂಭಾವ್ಯ ವೇಳಾಪಟ್ಟಿ, ಭಾರತದ ಯಾವ ಸ್ಥಳಗಳಲ್ಲಿ ನಡೆಯಲಿದೆ ಮೆಗಾ ಟೂರ್ನಿ


ಐಸಿಸಿ ಮತ್ತು ಬಿಸಿಸಿಐ ವಿಶ್ವಕಪ್ ಮೊದಲು ಸಮಸ್ಯೆ ಬಗೆಹರಿಯದಿದ್ದರೆ ಇಬ್ಬರ ನಡುವೆ ಕಾನೂನು ಹೋರಾಟ ಖಚಿತ. ಹೀಗಾಗಿ ಏನಾದರೂ ಒಮ್ಮೆ ಭಾರತ ಸರ್ಕಾರ ವಿಶ್ವಕಪ್​ಗೆ ತೆರಿಗೆ ವಿನಾಯತಿ ನೀಡದಿದ್ದರೆ, ಬಿಸಿಸಿಐ ಗೆ ಬರೋಬ್ಬರಿ 900 ಕೋಟಿ ನಷ್ಟವಾಗುತ್ತದೆ. ಇದರಿಂದಾಗಿ ಬಿಸಿಸಿಐ ಈ ಬಾರಿಯ ವಿಶ್ವಕಪ್ ಆತಿಥ್ಯವನ್ನು ತಿರಸ್ಕರಿಸುವ ಅಥವಾ ಸ್ವತಃ ಐಸಿಸಿ ವಿಶ್ವಕಪ್​ ಆತಿಥ್ಯವನ್ನು ಭಾರತದಿಂದ ಹಿಂಪಡೆಯುವ ಸಾಧ್ಯತೆ ಹೆಚ್ಚಳವಾಗಿದೆ.


ಮುಂದಿನ ವರ್ಷ ಏಕದಿನ ವಿಶ್ವಕಪ್​:


ಏಕದಿನ ವಿಶ್ವಕಪ್ ಕ್ರಿಕೆಟ್ ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಮತ್ತು ಹಿಂದಿನ ODI ವಿಶ್ವಕಪ್‌ನಂತೆ ರೌಂಡ್-ರಾಬಿನ್ ಮತ್ತು ನಾಕ್-ಔಟ್ ಮಾದರಿಯಲ್ಲಿ ಆಡಲಾಗುತ್ತದೆ. 10 ತಂಡಗಳನ್ನು 2020-23ರ ಸೂಪರ್ ಲೀಗ್ ಟೂರ್ನಮೆಂಟ್ ಪಾಯಿಂಟ್‌ಗಳ ಪಟ್ಟಿಯ ಪ್ರಕಾರ ನಿರ್ಧರಿಸಲಾಗುತ್ತದೆ, ಅಲ್ಲಿ ಅಗ್ರ 7 ತಂಡಗಳು ಮತ್ತು ಆತಿಥೇಯ ಭಾರತ ನೇರವಾಗಿ ಅರ್ಹತೆ ಪಡೆಯುತ್ತದೆ. ಉಳಿದ ಎರಡು ಸ್ಥಾನಗಳನ್ನು ಜೂನ್-ಜುಲೈ 2023 ರಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿರುವ 2023 ರ ವಿಶ್ವಕಪ್ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ. ಸೂಪರ್ ಲೀಗ್ ಪಟ್ಟಿಯಲ್ಲಿರುವ ಉಳಿದ ಐದು ತಂಡಗಳು 2023ರ ODI ವಿಶ್ವಕಪ್‌ನಲ್ಲಿ 9 ಮತ್ತು 10 ನೇ ಸ್ಥಾನಗಳಿಗಾಗಿ ಹೋರಾಡಬೇಕಾಗುತ್ತದೆ.


ಮೂಲತಃ ಪಂದ್ಯಾವಳಿಯನ್ನು ಫೆಬ್ರವರಿ 9 ರಿಂದ ಮಾರ್ಚ್ 26, 2023ರ ವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೆಲ ಕಾರಣದಿಂದ ಪಂದ್ಯಾವಳಿಯನ್ನು ಅಕ್ಟೋಬರ್-ನವೆಂಬರ್ ಗೆ ಮುಂದೂಡಲಾಗಿದೆ ಎಂದು ಘೋಷಿಸಲಾಗಿದೆ. ಅಕ್ಟೋಬರ್‌ನಲ್ಲಿ ಆರಂಭವಾಗಲಿರುವ ಈ ಟೂರ್ನಿಯ ಫೈನಲ್ ನವೆಂಬರ್ 26ರಂದು ನಡೆಯಲಿದೆ.

Published by:shrikrishna bhat
First published: