ಡ್ರಾದಲ್ಲಿ ಅಂತ್ಯಕಂಡ ಭಾರತ ಇಲೆವೆನ್ vs ವೆಸ್ಟ್​ ಇಂಡೀಸ್ ಅಭ್ಯಾಸ ಪಂದ್ಯ

news18
Updated:September 30, 2018, 5:30 PM IST
ಡ್ರಾದಲ್ಲಿ ಅಂತ್ಯಕಂಡ ಭಾರತ ಇಲೆವೆನ್ vs ವೆಸ್ಟ್​ ಇಂಡೀಸ್ ಅಭ್ಯಾಸ ಪಂದ್ಯ
  • Advertorial
  • Last Updated: September 30, 2018, 5:30 PM IST
  • Share this:
ನ್ಯೂಸ್ 18 ಕನ್ನಡ

ಭಾರತ ಪ್ರವಾಸದಲ್ಲಿರುವ ವೆಸ್ಟ್​ ಇಂಡೀಸ್ ಕ್ರಿಕೆಟ್ ತಂಡ ಭಾರತ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧ ಆಡಿದ 2 ದಿನದ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ಮೊದಲ ದಿನವಾದ ನಿನ್ನೆ ಬ್ಯಾಟಿಂಗ್ ಮಾಡಿದ ಭಾರತ ಮಯಾಂಕ್ ಅಗರ್ವಾಲ್ ಅವರ 90 ಹಾಗೂ ಅಂಕಿತ್ ಭಾವ್ನೆ ಅವರ ಅಜೇಯ 116 ರನ್​ಗಳ ನೆರವಿನಿಂದ 360 ರನ್​ಗೆ ಡಿಕ್ಲೇರ್ ಮಾಡಿಕೊಂಡಿತ್ತು.

ಎರಡನೇ ಹಾಗೂ ಕೊನೆಯ ದಿನವಾದ ಇಂದು ಬ್ಯಾಟಿಂಗ್ ಮಾಡಿದ ವೆಸ್ಟ್​ ಇಂಡೀಸ್​ಗೆ ಆರಂಭಿಕರಾದ ಬ್ರಾಥ್​ವೈಟ್ ಹಾಗೂ ಪೊವೆಲ್ ಶತಕದ ಜೊತೆಯಾಟ ನೀಡಿದರು. ಆದರೆ ಭ್ರಾಥ್​ವೈಟ್ 52 ರನ್​ ಬಾರಿಸಿದ್ದಾಗ ಹಾಗೂ ಪೊವೆಲ್ 44 ರನ್ ಗಳಿಸಿದ್ದಾಗ ಗಾಯದಿಂದ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಬ್ಯಾಟ್ಸ್​ಮನ್​​ಗಳ ಪೈಕಿ ಡೌರಿಚ್ 65 ರನ್ ಗಳಿಸಿದರೆ, ಅಂಬ್ರಿಸ್ 114 ರನ್ ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ವೆಸ್ಟ್​ ಇಂಡೀಸ್ 366 ರನ್​​ ಗಳಿಸಿ 7 ವಿಕೆಟ್ ಕಳೆದುಕೊಂಡು 6 ರನ್​​ಗಳ ಮುನ್ನಡೆ ಸಾಧಿಸಿತ್ತು. ಆದರೆ ಎರಡೇ ದಿನದ ಅಭ್ಯಾಸ ಪಂದ್ಯವಾಗಿದ್ದರಿಂದ ಟೆಸ್ಟ್​ ಡ್ರಾದಲ್ಲಿ ಕೊನೆಗೊಂಡಿದೆ. ಭಾರತ ಪರ ಆವೇಶ್ ಖಾನ್ 4 ವಿಕೆಟ್ ಕಿತ್ತರೆ, ಸೌರಭ್ ಕುಮಾರ್ 2 ವಿಕೆಟ್ ಪಡೆದರು.

ಇನ್ನು ಅಕ್ಟೋಬರ್ 4ರಿಂದ ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವೆ 2 ಟೆಸ್ಟ್​ ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ಈಗಾಗಲೇ ಟೀಂ ಇಂಡಿಯಾ ಕೂಡ ಪ್ರಕಟಗೊಂಡಿದ್ದು, ಕನ್ನಡಿಗ ಮಯಾಂಕ್ ಅಗರ್ವಾಲ್​ಗೆ ಸ್ಥಾನ ನೀಡಲಾಗಿದೆ.

ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್ ರಾಹುಲ್​​​​ಮಯಾಂಕ್ ಅಗರ್ವಾಲ್ ಪೃಥ್ವಿ ಶಾಚೇತೇಶ್ವರ ಪೂಜಾರ , ಅಜಿಂಕ್ಯ ರಹಾನೆಹನುಮ ವಿಹಾರಿರಿಷಭ್ ಪಂತ್, ರವಿಚಂದ್ರನ್​​ ಅಶ್ವಿನ್,  ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್,ಮೊಹಮ್ಮದ್ಶಮಿ, ಉಮೇಶ್ ಯಾದವ್​​ಮೊಹಮ್ಮದ್ ಸಿರಾಜ್ಶಾರ್ದೂಲ್ ಠಾಕೂರ್​​​.
First published:September 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...