ವಿಂಡೀಸ್ ವಿರುದ್ಧ ಅಭ್ಯಾಸ ಪಂದ್ಯ: ಮಿಂಚಿದ ಅಗರ್ವಾಲ್-ಭಾವ್ನೆ: ಭಾರತ ಇಲೆವೆನ್: 360/6 ಡಿಕ್ಲೇರ್

news18
Updated:September 30, 2018, 5:04 PM IST
ವಿಂಡೀಸ್ ವಿರುದ್ಧ ಅಭ್ಯಾಸ ಪಂದ್ಯ: ಮಿಂಚಿದ ಅಗರ್ವಾಲ್-ಭಾವ್ನೆ: ಭಾರತ ಇಲೆವೆನ್: 360/6 ಡಿಕ್ಲೇರ್
  • Advertorial
  • Last Updated: September 30, 2018, 5:04 PM IST
  • Share this:
ನ್ಯೂಸ್ 18 ಕನ್ನಡ

ಭಾರತ ಪ್ರವಾಸದಲ್ಲಿರುವ ವೆಸ್ಟ್​ ಇಂಡೀಸ್ ಕ್ರಿಕೆಟ್ ತಂಡ, ಇಂದು ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನ ಆರಂಭಿಸಿದ್ದು ಭಾರತ ಭರ್ಜರಿ ರನ್ ಕಲೆಹಾಕಿದೆ. ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನವಾದ ಇಂದು ಭಾರತ ತಂಡ ಮಯಾಂಕ್ ಅಗರ್ವಾಲ್ ಹಾಗೂ ಅಂಕಿತ್ ಭಾವ್ನೆ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 360 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಪೃಥ್ವಿ ಷಾ ಕೇವಲ 8 ರನ್​​ಗೆ ಔಟ್ ಆದರೆ, ಬಂದ ಬೆನ್ನಲ್ಲೆ ವಿಹಾರಿ ಕೂಡ 3 ರನ್​​ಗೆ ನಿರ್ಗಮಿಸಿದರು. ಬಳಿಕ 3ನೇ ವಿಕೆಟ್​ಗೆ ಜೊತೆಯಾದ ನಾಯಕ ಕರುಣ್ ನಾಯರ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟವಾಡಿದರು. ಅದರಲ್ಲು ಭರವಸೆಯ ಆಟಗಾರ ಅಗರ್ವಾಲ್ ತಮ್ಮ ಆಯ್ಕೆಯನ್ನು ಸಮರ್ಥಿಸುವಂತಹ ಪ್ರದರ್ಶನ ನೀಡಿದರು. 111 ಎಸೆತಗಳನ್ನು ಎದುರಿಸಿದ ಮಯಾಂಕ್ 14 ಬೌಂಡರಿ ಹಾಗೂ 2 ಸಿಕ್ಸ್​ನೊಂದಿಗೆ 90 ರನ್​​ ಗಳಿಸಿ ಔಟ್ ಆಗುವ ಮೂಲಕ ಶತಕ ವಂಚಿತರಾದರು. ಅಗರವಾಲ್ ಔಟ್ ಆದ ಬೆನ್ನಲ್ಲೆ ನಾಯರ್ ಕೂಡ 29 ರನ್​ಗೆ ನಿರ್ಗಮಿಸಿದರು. ಬಳಿಕ ಶ್ರೇಯಸ್ ಅಯ್ಯರ್ ಹಾಗೂ ಅಂಕಿತ್ ಭಾವ್ನೆ ಭರ್ಜರಿ ಆಟ ಪ್ರದರ್ಶಿಸಿದರು. 5ನೇ ವಿಕೆಟ್​ಗೆ ಈ ಜೋಡಿ 158 ರನ್​ಗಳ ಕಾಣಿಕೆ ನೀಡಿದರು. ಅಯ್ಯರ್ 61 ರನ್​ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಆದರೆ ಭಾವ್ನೆ ಭರ್ಜರಿ ಶತಕ ಸಿಡಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು. ಭಾವೇ 191 ಎಸೆತಗಳಲ್ಲಿ 116 ರನ್​ ಸಿಡಿಸಿ ಅಜೇಯರಾಗಿ ಉಳಿದರು.

ಅಂತಿಮವಾಗಿ ಭಾರತದ ಅಧ್ಯಕ್ಷರ ಇಲೆವೆನ್ ತಂಡ 90 ಓವರ್​ಗೆ 360 ರನ್​​ ಗಳಿಸಿರುವಾಗ ಡಿಕ್ಲೇರ್ ಮಾಡಿಕೊಂಡಿತು. 2ನೇ ಹಾಗೂ ಕೊನೆಯ ದಿನವಾದ ನಾಳೆ ವೆಸ್ಟ್​ ಇಂಡೀಸ್ ಬ್ಯಾಟಿಂಗ್ ಆರಂಭಿಸಲಿದೆ. ವಿಂಡೀಸ್ ಪರ ಬಿಶೂ 3 ವಿಕೆಟ್ ಕಿತ್ತರೆ ಗೇಬ್ರಿಯಲ್ 2 ವಿಕೆಟ್ ಪಡೆದರು.
First published:September 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...