ಕಬಡ್ಡಿ ಮಾಸ್ಟರ್ಸ್ 2018​: ಇರಾನ್ ತಂಡವನ್ನು ಮಣಿಸಿ ಚಾಂಪಿಯನ್ ಆದ ಭಾರತ

  • News18
  • 3-MIN READ
  • Last Updated :
  • Share this:

    ನ್ಯೂಸ್ 18 ಕನ್ನಡ

    ದುಬೈ (ಜೂ. 30): ಕಬಡ್ಡಿ ಮಾಸ್ಟರ್ಸ್​​ ದುಬೈ ಟೂರ್ನಿಯ ಇಂದಿನ ಫೈನಲ್ ಕಾದಾಟದಲ್ಲಿ ಇರಾನ್ ತಂಡವನ್ನು ಭಾರತ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

    44-26 ಅಂಕಗಳ ಅಂತರದಿಂದ ಗೆಲುವು ಸಾಧಿಸಿರುವ ಭಾರತ, ಮೊದಲಾರ್ಧದ ಆರಂಭದಲ್ಲೇ ಮುನ್ನಡೆ ಸಾಧಿಸಿತು. ಮೊದಲ ರೈಡ್​ನಿಂದಲೇ ಅದ್ಭುತ ಪ್ರದರ್ಶನ ತೋರಿದ ಭಾರತೀಯ ಆಟಗಾರರು 4-0 ಅಂತರದ ಮುನ್ನಡೆ ಸಾಧಿಸಿತು. ಇದಕ್ಕೆ ಪ್ರತಿಯಾಗಿ ಇರಾನ್ ತಂಡಕೂಡ ಎದುರೇಟು ನೀಡಲು ಹರಸಾಹಸ ಪಟ್ಟಿತಾದರು ಯಶಸ್ವಿಯಾಗಿಲ್ಲ. ರೈಡಿಂಗ್ ಹಾಗೂ ಕ್ಯಾಚಿಂಗ್​ನಿಂದ ಪ್ರಾಬಲ್ಯ ಸಾಧಿಸಿದ ಭಾರತ ಮೊದಲಾರ್ಧದಲ್ಲಿ 18-11 ಅಂತರದ ಮುನ್ನಡೆ ಸಾಧಿಸಿತು.

    ದ್ವಿತೀಯಾರ್ಧದಲ್ಲು ಇದೇ ದಾಳಿಯನ್ನು ಮುಂದುವರೆಸಿದ ಭಾರತ ಅಜಯ್ ಠಾಕೂರ್, ಮೋನು ಗೋಯತ್ ಅವರು ಉತ್ತಮ ರೈಡ್​ ನಡೆಸಿದರು. ಈ ಮೂಲಕ ಚೊಚ್ಚಲ ಮಾಸ್ಟರ್ ಕಬಡ್ಡಿ ಟೂರ್ನಿಯಲ್ಲಿ ಭಾರತ 44-26 ಅಂಕಗಳ ಅಂತರದಲ್ಲಿ ಇರಾನ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

     


    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು