ಏರ್​​ ಶೋ ಹಿನ್ನಲೆ: ಬೆಂಗಳೂರಿನಲ್ಲಿ ನಡೆಯುತ್ತಿಲ್ಲ ಇಂಡೋ-ಆಸೀಸ್ ಮೊದಲ ಟಿ-20

ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಎರಡು ಟಿ-20 ಪಂದ್ಯಗಳ ಹಾಗೂ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಮೊದಲ ಟಿ-20 ಪಂದ್ಯ ಫೆಬ್ರವರಿ 24ಕ್ಕೆ ನಿಯೋಜಿಸಲಾಗಿದ್ದು. ಆದರೆ, ಸದ್ಯ ಈ ಪಂದ್ಯ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ.

Vinay Bhat | news18
Updated:February 2, 2019, 1:03 PM IST
ಏರ್​​ ಶೋ ಹಿನ್ನಲೆ: ಬೆಂಗಳೂರಿನಲ್ಲಿ ನಡೆಯುತ್ತಿಲ್ಲ ಇಂಡೋ-ಆಸೀಸ್ ಮೊದಲ ಟಿ-20
ಭಾರತ vs ಆಸ್ಟ್ರೇಲಿಯಾ
  • News18
  • Last Updated: February 2, 2019, 1:03 PM IST
  • Share this:
ಬೆಂಗಳೂರು (ಫೆ. 02): ಇದೇ ತಿಂಗಳ 24 ರಂದು ಬೆಂಗಳೂರಿನ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ-20 ಪಂದ್ಯವನ್ನು ಫೆ. 27ಕ್ಕೆ ಮುಂದೂಡಲಾಗಿದೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆ. 20 ರಿಂದ 24 ರವರೆಗೆ ಏರ್​​ ಶೋ ನಡೆಯುವ ಕಾರಣ ಕ್ರಿಕೆಟ್ ಪಂದ್ಯಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಲು ಅಸಾಧ್ಯ. ಅಲ್ಲದೆ ಏರ್​​ಶೋ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಕೂಡ ಆಗಮಿಸುತ್ತಿರುವುದರಿಂದ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಕೆಎಸ್​​ಸಿಎಗೆ ಬೆಂಗಳೂರು ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದರು.

ಸದ್ಯ ಈ ಮನವಿಯನ್ನು ಸ್ವೀಕರಿಸಿರುವ ಬಿಸಿಸಿಐ ಫೆ. 24 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಅಂತೆಯೆ 27 ರಂದು ವಿಶಾಖಪಟ್ಟಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್: ಅಂತಿಮ ಏಕದಿನಕ್ಕೆ ಧೋನಿ ಫಿಟ್

ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಎರಡು ಟಿ-20 ಪಂದ್ಯಗಳ ಹಾಗೂ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಮೊದಲ ಟಿ-20 ಪಂದ್ಯ ಫೆಬ್ರವರಿ 24ಕ್ಕೆ ನಿಯೋಜಿಸಲಾಗಿದ್ದು. ಆದರೆ, ಸದ್ಯ ಈ ಪಂದ್ಯ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ.

ಇನ್ನು ಎರಡನೇ ಟಿ-20 ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಫೆ. 27 ರಂದು ನಡೆಯಲಿದೆ. ಎರಡೂ ಟಿ-20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ ಎಂದು ತಿಳಿಸಿದೆ.

ಅಂತೆಯೆ ಐದು ಪಂದ್ಯಗಳ ಏಕದಿನ ಸರಣಿ ಪೈಕಿ ಮೊದಲ ಪಂದ್ಯ ಮಾ. 2 ರಂದು ಹೈದರಾಬಾದ್, 2ನೇ ಏಕದಿನ ಪಂದ್ಯ ಮಾ. 5 ನಾಗ್ಪುರ್, 3ನೇ ಏಕದಿನ ಪಂದ್ಯ ಮಾ. 8 ರಂದು ರಾಂಚಿ, 4ನೇ ಏಕದಿನ ಪಂದ್ಯ ಮಾ. 10 ರಂದು ಮೊಹಾಲಿಯಲ್ಲಿ ಹಾಗೂ ಕೊನೆಯ ಐದನೇ ಏಕದಿನ ಪಂದ್ಯ ಮಾ. 13 ರಂದು ಡೆಲ್ಲಿಯಲ್ಲಿ ನಡೆಯಲಿದೆ.
First published: February 2, 2019, 12:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading