ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಒಂದು ವರ್ಷದ ಬಳಿಕ ಭಾರತ-ಪಾಕ್ ಮುಖಾಮುಖಿ

news18
Updated:July 25, 2018, 3:44 PM IST
ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಒಂದು ವರ್ಷದ ಬಳಿಕ ಭಾರತ-ಪಾಕ್ ಮುಖಾಮುಖಿ
news18
Updated: July 25, 2018, 3:44 PM IST
ನ್ಯೂಸ್ 18 ಕನ್ನಡ

2018ರ ಏಷ್ಯಾಕಪ್​ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಲಿದೆ. ವಿಶೇಷ ಎಂದರೆ ಸೆಪ್ಟಂಬರ್ 19ರಂದು ಭಾರತದ ಬದ್ಧವೈರಿ ಪಾಕಿಸ್ತಾನ ತಂಡ ಮುಖಾಮುಖಿ ಆಗಲಿದೆ. ಒಂದು ವರ್ಷದ ಬಳಿಕ ಭಾರತ ಹಾಗೂ ಪಾಕ್ ತಂಡಗಳು ಮುಖಾಮುಖಿ ಆಗುತ್ತಿದ್ದು ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮನೆಮಾಡಿದೆ. ಇದಕ್ಕೂ ಒಂದು ದಿನ ಮಿಂಚಿತವಾಗಿ ಟೀಂ ಇಂಡಿಯಾ ಅರ್ಹತಾ ಪಂದ್ಯವಾಡಲಿದೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಏಷ್ಯಾಕಪ್​​ನಲ್ಲಿ ಆಡುವುದು ಖಚಿತವಾಗಿದ್ದು, ಯುಎಇ, ಸಿಂಗಾಪುರ, ಓಮನ್, ನೇಪಾಳ, ಮಲೇಷ್ಯಾ ಹಾಗೂ ಹಾಂಗ್​​ ಕಂಗ್ ಇವಿಷ್ಟರಲ್ಲಿ ಯಾವ ತಂಡ ಅರ್ಹತೆ ಪಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಾರಿಯ ಏಷ್ಯಾಕಪ್​ನಲ್ಲಿ ತಂಡಗಳನ್ನು ಒಟ್ಟು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿದ್ದು, ಕ್ವಾಲಿಫೈಯರ್​​ನಲ್ಲಿ ಜಯ ಗಳಿಸಿದ ತಂಡ ಈ ಗುಂಪು ಸೇರಲಿದೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳಿವೆ.

ಏಷ್ಯಾಕಪ್ ಪಂದ್ಯಾವಳಿಯ ವೇಳಾ ಪಟ್ಟಿ:

ಗ್ರೂಪ್ ಹಂತ:

15 ಸೆ. - ಬಾಂಗ್ಲಾದೇಶ vs ಶ್ರೀಲಂಕಾ

16 ಸೆ. - ಪಾಕಿಸ್ತಾನ vs ಕ್ವಾಲಿಫೈಯರ್
Loading...

17 ಸೆ. - ಶ್ರೀಲಂಕಾ vs ಅಫ್ಘಾನಿಸ್ತಾನ

18 ಸೆ. - ಭಾರತ vs ಕ್ವಾಲಿಫೈಯರ್

19 ಸೆ. - ಭಾರತ vs ಪಾಕಿಸ್ತಾನ

20 ಸೆ. - ಬಾಂಗ್ಲಾದೇಶ vs ಅಫ್ಘಾನಿಸ್ತಾನ

ಸೂಪರ್ ಫೋರ್:

21 ಸೆ. - ಗ್ರೂಪ್ ಎ ವಿನ್ನರ್ vs ಗ್ರೂಪ್ ಬಿ ರನ್ನರ್​​​​​ ಅಪ್

21 ಸೆ. - ಗ್ರೂಪ್ ಬಿ ವಿನ್ನರ್ vs ಗ್ರೂಪ್ ಎ ರನ್ನರ್​​​​​ ಅಪ್

23 ಸೆ. - ಗ್ರೂಪ್ ಎ ವಿನ್ನರ್ vs ಗ್ರೂಪ್ ಎ ರನ್ನರ್​​​​​ ಅಪ್

23 ಸೆ. - ಗ್ರೂಪ್ ಬಿ ವಿನ್ನರ್ vs ಗ್ರೂಪ್ ಬಿ ರನ್ನರ್​​​​​ ಅಪ್

25 ಸೆ. - ಗ್ರೂಪ್ ಎ ವಿನ್ನರ್ vs ಗ್ರೂಪ್ ಬಿ ರನ್ನರ್​​​​​

26 ಸೆ. - ಗ್ರೂಪ್ ಎ ವಿನ್ನರ್ ಅಪ್ vs ಗ್ರೂಪ್ ಬಿ ರನ್ನರ್​​​​​ ಅಪ್

ಫೈನಲ್:

28 ಸೆ. - ಏಷ್ಯಾಕಪ್ ಫೈನಲ್
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ