Asia Cup 2022: ಏಷ್ಯಾಕಪ್ ಇತಿಹಾಸದಲ್ಲಿ ಈ ರೀತಿ ಆಗಿಲ್ವಂತೆ, ಫೈನಲ್​ನಲ್ಲಿ ಮುಖಾಮುಖಿ ಆಗ್ತಾರಾ ಇಂಡೋ-ಪಾಕ್​?

ಏಷ್ಯಾಕಪ್ ನಲ್ಲಿ​ ಇದೊಂದು ಪಂದ್ಯ ನಡೆದರೆ ಇತಿಹಾಸವಾಗಲಿದೆ. ಹೌದು, ಕಳೆದ 14 ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ್ ಫೈನಲ್​ನಲ್ಲಿ ಮುಖಾಮುಖಿಯಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯನ್ನು ಈ ಬಾರಿ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದ್ದು, ಈಗಾಗಲೇ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಭಾರತ ತಂಡವನ್ನು ರೋಹಿತ್​ ಶರ್ಮಾ (Rohit Sharma) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದರೆ, ಕನ್ನಡಿಗ ಕೆಎಲ್​ ರಾಹುಲ್ (KL Rahul)​ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದೆ. ಆದರೆ ಈ ಏಷ್ಯಾಕಪ್​ ಇತಿಹಾಸದಲ್ಲಿ ಈವರೆಗೂ ಈ ಎರಡು ತಂಡಗಳು ಫೈನಲ್​ ನಲ್ಲಿ ಮುಖಾಮುಖಿ ಆಗಲಿಲ್ಲವಂತೆ. ಹೀಗಾಗಿ ಈ ಬಾರಿ ಆದರೂ ಈ 2 ತಂಡಗಳು ಫೈನಲ್​ ಫೈಟ್​ನಲ್ಲಿ ಸೆಣಸಾಡಲಿದೆಯೇ ಎಂದು ಕಾದು ನೋಡಬೇಕಿದೆ.  ಆ ಮೂಲಕ ಇತಿಹಾಸ ಬದಲಾಗುತ್ತದೆಯೇ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. 

ಫೈನಲ್​ನಲ್ಲಿ ಮುಖಾಮುಖಿ ಆಗದ ಇಂಡೋ-ಪಾಕ್​:

ಏಷ್ಯಾಕಪ್​ 2022 ಇದೇ ತಿಂಗಳ 27ರಿಂದ ಆರಂಭವಾಗಲಿದೆ. ಅಲ್ಲದೇ ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ಎದುರು ಆಡಲಿದೆ. ಆಗಸ್ಟ್ 28 ರಂದು ಭಾರತ ಮತ್ತು ಪಾಕ್ ಮುಖಾಮುಖಿ ಆಗಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಇದರ ನಡುವೆ ಈ ಬಾರಿ ಕ್ರಿಕೆಟ್​ ಅಭಿಮಾನಿಗಳಿಗೆ ಡಬಲ್ ಧಮಾಕ ಎಂದರೂ ತಪ್ಪಾಗಲಾರದು. ಏಕೆಂದರೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಬಲಿಷ್ಠವಾಗಿದ್ದು, 2 ತಂಡಗಳೂ ಸೂಪರ್​ 4  ಹಂತಕ್ಕೆ ತಲುಪುವುದು ಬಹುತೇಕ ಖಚಿತ ಎನ್ನಬಹುದು. ಹೀಗಾಗಿ ಸೂಪರ್ 4 ಹಂತದಲ್ಲಿ ಈ 2 ತಂಡಗಳು ಮತ್ತೆ ಮುಖಾಮುಖಿ ಆಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಏನದರೂ 2 ತಂಡಗಳು ಫೈನಲ್ ಪ್ರವೇಶಿಸಿದರೆ ಅಲ್ಲಿಯೂ ಮತ್ತೆ ಎದುರಾಗಲಿದೆ.

ಆದರೆ ಇದೊಂದು ಪಂದ್ಯ ನಡೆದರೆ ಇತಿಹಾಸವಾಗಲಿದೆ. ಹೌದು, ಕಳೆದ 14 ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಫೈನಲ್​ನಲ್ಲಿ ಮುಖಾಮುಖಿಯಾಗಿಲ್ಲ. ಅಚ್ಚರಿ ಆದರೂ ಇದು ಸತ್ಯ. ಈವರೆಗೂ ಭಾರತ ಮತ್ತು ಪಾಕ್​ ಫೈನಲ್​ನಲ್ಲಿ ಮುಖಾಮುಖಿ ಆಗಲಿಲ್ಲ. ಏನಾದರೂ ಈ ಬಾರಿ 2 ತಂಡಗಳು ಫೈನಲ್​ ನಲ್ಲಿ ಎದುರಾದರೆ, ಕ್ರಿಕೆಟ್​ ಪ್ರೇಮಿಗಳ ನಿರೀಕ್ಷೆಗೆ ಮಿತಿ ಇಲ್ಲದಂತಾಗುತ್ತದೆ. ಭಾರತ ಈವರೆಗೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳನ್ನು ಫೈನಲ್​ ಪಂದ್ಯದಲ್ಲಿ ಎದುರಿಸಿದೆ.

ಇದನ್ನೂ ಓದಿ: IND vs ZIM: ಜಿಂಬಾಬ್ವೆ ಆಟಗಾರರು ಆಟೋದಲ್ಲಿ ಬರ್ತಿದ್ರಂತೆ, ಇವರ ವೇತನ ಕೇಳಿದ್ರೆ ಶಾಕ್ ಆಗ್ತೀರಾ!

ಭಾರತ-ಪಾಕ್ ಭರ್ಜರಿ ಪೈಟ್​:

ಈಗಾಗಲೇ ಭಾರತ ತಂಡವನ್ನು ಏಷ್ಯಾ ಕಪ್​ಗಾಗಿ ಪ್ರಕಟಿಸಲಾಗಿದೆ. ಇದರ ನಡುವೆ ಇದೀಗ ಪಾಕ್ ತಂಡವನ್ನೂ ಪ್ರಕಟಿಸಲಾಗಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಣ ಬಿಗ್​ ಪೈಟ್​ ನಡೆಯುವುದಂತೂ ಪಕ್ಕಾ ಎನ್ನಲಾಗುತ್ತಿದೆ. ಉಭಯ ತಂಡಗಳೆರಡೂ ಸಖತ್​ ಬಲಿಷ್ಠವಾಗಿದ್ದು, ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ಮೊದಲ ಪಂದ್ಯವು ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾತುರರಾಗಿ ಕುಳಿತಿದ್ದಾರೆ. ಈಗಾಗಲೇ ಎಲ್ಲಡೆ ಏಷ್ಯಾ ಕಪ್​ 2022ರ ಮೇಲೆ ನಿರೀಕ್ಷೆ ಹೆಚ್ಚಿದೆ. ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಉಪ ನಾಯಕರನ್ನಾಗಿ ಬಿಸಿಸಿಐ ಆಯ್ಕೆ ಮಾಡಿದೆ.

ಇದನ್ನೂ ಓದಿ: Asia Cup 2022: ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಕಟ, ಹೇಗಿರಲಿದೆ ಹೈವೋಲ್ಟೇಜ್ ಕದನ?

ಏಷ್ಯಾ ಕಪ್​ಗೆ ಟೀಂ ಇಂಡಿಯಾ: 

ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್,  ದೀಪಕ್ ಚಹರ್.
Published by:shrikrishna bhat
First published: