ಸಿರಾಜ್ ದಾಳಿಗೆ ಆಫ್ರಿಕನ್ನರ ಪೆವಿಲಿಯನ್ ನಡೆ; ಮೊದಲ ಟೆಸ್ಟ್​ನಲ್ಲಿ ಭಾರತ ಎ ತಂಡಕ್ಕೆ ಜಯ

news18
Updated:August 7, 2018, 5:50 PM IST
ಸಿರಾಜ್ ದಾಳಿಗೆ ಆಫ್ರಿಕನ್ನರ ಪೆವಿಲಿಯನ್ ನಡೆ; ಮೊದಲ ಟೆಸ್ಟ್​ನಲ್ಲಿ ಭಾರತ ಎ ತಂಡಕ್ಕೆ ಜಯ
news18
Updated: August 7, 2018, 5:50 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ. 07): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಣ ಮೊದಲ ಅನಧಿಕೃತ ಟೆಸ್ಟ್​​ಪಂದ್ಯದಲ್ಲಿ ಭಾರತ ಎ ತಂಡ ಇನ್ನಿಂಗ್ಸ್​​ನೊಂದಿಗೆ 30 ರನ್​ಗಳ ಜಯ ಸಾಧಿಸಿದೆ.

ಮೊದಲ ಇನ್ನಿಂಗ್ಸ್​​ನಲ್ಲಿ ಆಫ್ರಿಕನ್ನರನ್ನು 246 ರನ್​ಗೆ ಆಲೌಟ್ ಮಾಡಿ ಬ್ಯಾಟಿಂಗ್ ಮಾಡಿದ ಭಾರತ ಭಾರತಕ್ಕೆ ಪೃಥ್ವಿ ಷಾ ಅವರ ಶತಕ ಹಾಗೂ ಮಯಾಂಕ್ ಅಗರ್ವಾಲ್ ಅವರ ದ್ವಿಶತಕದ ನೆರವಿನಿಂದ 587 ರನ್​ಗೆ ಟಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ದ. ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 99 ರನ್​​ ಗಳಿಸಿ 239 ರನ್​ಗಳ ಹಿನ್ನಡೆ ಅನುಭವಿಸಿತ್ತು. ಕೊನೆಯ ದಿನವಾದ ಇಂದು ಬ್ಯಾಟಿಂಗ್ ಮುಂದುವರೆಸಿದ ಆಫ್ರಿಕನ್ನಪರ ರೂಡಿ ಸೆಕಂಡ್ 94, ಹಂಜಾ 63 ಹಾಗೂ ವನ್ ಬೆರ್ಗ್ 50 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಸಿರಾಜ್ ದಾಳಿಗೆ ಪೆವಿಲಿಯನ್ ಹಾದಿ ಹಿಡಿದರು. ಅಂತಿಮವಾಗಿ ಎರಡನೇ ಇನ್ನಿಂಗ್ಸ್​ನಲ್ಲಿ 308 ರನ್​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಈ ಮೂಲಕ ಭಾರತ ಎ ಇನ್ನಿಂಗ್ಸ್ ಹಾಗೂ 30 ರನ್​ಗಳ ಗೆಲುವಿನೊಂದಿಗೆ ಎರಡು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಭಾರತ ಎ ಪರ ಮೊಹಮ್ಮದ್ ಸಿರಾಜ್ 5 ವಿಕೆಟ್ ಕಿತ್ತು ಮಿಂಚಿದರೆ ರಜ್ನೀಶ್ ಗುರ್ಬಾನಿ 2, ಸೈನಿ, ಅಕ್ಷರ್ ಪಟೇಲ್ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದರು.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ