ಚತುಷ್ಕೋನ ಸರಣಿ: ಭಾರತ ಎ ಶುಭಾರಂಭ; ಆಸೀಸ್ ಎ ವಿರುದ್ಧ 5 ವಿಕೆಟ್​ಗಳ ಜಯ

news18
Updated:August 23, 2018, 6:22 PM IST
ಚತುಷ್ಕೋನ ಸರಣಿ: ಭಾರತ ಎ ಶುಭಾರಂಭ; ಆಸೀಸ್ ಎ ವಿರುದ್ಧ 5 ವಿಕೆಟ್​ಗಳ ಜಯ
news18
Updated: August 23, 2018, 6:22 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ. 23): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ‘ಎ’ ತಂಡಗಳ ನಡುವಣ ಚತುಷ್ಕೋನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಎ 5 ವಿಕೆಟ್​​ಗಳ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್​​ ಭಾರತೀಯ ಬೌಲರ್​ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ಆಸ್ಟ್ರೇಲಿಯಾ ಎ 31.4 ಓವರ್​​ನಲ್ಲಿ 151 ರನ್​​ ಗಳಿಸಿ ಆಲೌಟ್ ಆಯಿತು. ಅಸ್ಟೋನ್ ಅಗರ್ 34 ಹಾಗೂ ನಾಯಕ ಟ್ರಾವಿಸ್ ಹೆಡ್ 28 ರನ್​ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​​ಗಳ ರನ್ 20ರ ಗಡಿ ದಾಟಲಿಲ್ಲ. ಭಾರತ ಎ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಕಿತ್ತು ಮಿಂಚಿದರೆ, ಕೃಷ್ಣಪ್ಪ ಗೌತಮ್ 3, ದೀಪಕ್ ಚಾಹರ್, ಖಲೀಲ್ ಅಹಮ್ಮದ್ ಹಾಗೂ ಕ್ರುನಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

152 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಭಾರತೀಯರಿಗೆ ಉತ್ತಮ ಆರಂಭ ಸಿಗಲಿಲ್ಲವಾದರು ಅಂಬಾಟಿ ರಾಯುಡು ಹಾಗೂ ಕ್ರುನಾಲ್ ಪಾಂಡ್ಯ ಅವರ 109 ರನ್​ಗಳ ಜೊತೆಯಾಟ ತಂಡಕ್ಕೆ ಗೆಲುವು ತಂದು ಕಟ್ಟಿತು. 38.3 ಓವರ್​​ನಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್​ ಬಾರಿಸಿ ಭಾರತ 1-0ಯ ಮುನ್ನಡೆ ಸಾಧಿಸಿದೆ. ಭಾರತ ಎ ಪರ ರಾಯುಡು ಅಜೇಯ 62 ರನ್ ಸಿಡಿಸಿದರೆ, ಕ್ರುನಾಲ್ 49 ರನ್​ಗೆ ಔಟ್ ಆದರು.

ಪಂದ್ಯ ಶ್ರೇಷ್ಠ: ಅಂಬಾಟಿ ರಾಯುಡು

ಸಂಕ್ಷಿಪ್ತ ಸ್ಕೋರ್:
Loading...

ಆಸ್ಟ್ರೇಲಿಯಾ ಎ: 151/10(31.4 ಓವರ್​​)

(ಅಸ್ಟೋನ್ ಅಗರ್ 34, ಟ್ರಾವಿಸ್ ಹೆಡ್ 28, ಮೊಹಮ್ಮದ್ ಸಿರಾಜ್ 68/4, ಕೃಷ್ಣಪ್ಪ ಗೌತಮ್ 31/3)

ಭಾರತ ಎ: 152/5(38.3 ಓವರ್​​)

(ಅಂಬಾಟಿ ರಾಯುಡು 62*, ಕ್ರುನಾಲ್ ಪಾಂಡ್ಯ 49, ರಿಚರ್ಡಸನ್ 27/3 )
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626