ಚತುಷ್ಕೋನ ಸರಣಿ: 3ನೇ ಸ್ಥಾನ ಉಳಿಸಿಕೊಂಡ 'ಭಾರತ ಎ'; ದ. ಆಫ್ರಿಕಾ 151ಕ್ಕೆ ಆಲೌಟ್

news18
Updated:August 29, 2018, 5:03 PM IST
ಚತುಷ್ಕೋನ ಸರಣಿ: 3ನೇ ಸ್ಥಾನ ಉಳಿಸಿಕೊಂಡ 'ಭಾರತ ಎ'; ದ. ಆಫ್ರಿಕಾ 151ಕ್ಕೆ ಆಲೌಟ್
news18
Updated: August 29, 2018, 5:03 PM IST
ನ್ಯೂಸ್ 18 ಕನ್ನಡ

ಬೆಂಗಳೂರಿನ ಹೊರವಲಯದ ಆಲೂರಿನ ಕೆಎಸ್​​ಸಿಎ ಕ್ರೀಡಾಂಗಣದಲ್ಲಿ ನಡೆದ ಚತುಷ್ಕೋನ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ಎ ತಂಡ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ 124 ರನ್​​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಎ ತಂಡ ಗೆದ್ದಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಎ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲವಾದರು 3ನೇ ವಿಕೆಟ್​ಗೆ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಅಂಬಾಟಿ ರಾಯುಡು ಭರ್ಜರಿ ಆಟ ಪ್ರದರ್ಶಿಸಿದರು. ಆಫ್ರಿಕನ್ನರನ್ನು ಕಾಡಿದ ಈ ಜೋಡಿ 130 ರನ್​​ಗಳ ಕಾಣಿಕೆ ನೀಡಿದರು. ಆದರೆ 66 ರನ್​​ ಗಳಿಸಿ ರಾಯುಡು ಔಟ್ ಆದರೆ 67 ರನ್​ಗೆ ಅಯ್ಯರ್ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಬ್ಯಾಟ್ಸ್​ಮನ್​​ಗಳ ಪೈಕಿ ಸಂಜು ಸ್ಯಾಮ್ಸನ್ 26, ನಿತೀಶ್ ರಾಣ 30, ಕ್ರುನಾಲ್ ಪಾಂಡ್ಯ ಅಜೇಯ 24 ರನ್ ಕಲೆಹಾಕಿದ ಪರಿಣಾಮ 50 ಓವರ್​ಗೆ 7 ವಿಕೆಟ್ ಕಳೆದುಕೊಂಡು 275 ರನ್ ಬಾರಿಸಿತು. ಆಫ್ರಿಕಾ ಪರ ಹೆನ್​ಡ್ರಿಕ್ಸ್​ 3 ವಿಕೆಟ್ ಕಿತ್ತರೆ, ರಾಬರ್ಟ್​ 2 ವಿಕೆಟ್ ಪಡೆದರು.

276 ರನ್​​ಗಳ ಗುರಿ ಬೆನ್ನಟ್ಟಿದ ದ. ಆಫ್ರಿಕಾ ಎ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡೆ ಸಾಗಿತು. ಪೀಟರ್ ಮಲನ್ 30, ಸೆನೂರನ್ ಮುತುಸಾಮಿ 40 ಹಾಗೂ ಬೆಹ್ರಾಡಿನ್ 38 ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 20ರ ಗಡಿ ದಾಟಲಿಲ್ಲ. ಪರಿಣಾಮ 37.1 ಓವರ್​​ನಲ್ಲಿ 151 ರನ್​ಗೆ ಆಲೌಟ್ ಆಗುವ ಮೂಲಕ ಭಾರತ ಎದುರು ಸೋಲೊಪ್ಪಿಕೊಂಡಿತು.

ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್​​ ಪಂದ್ಯದಲ್ಲಿ ಭಾರತ ಬಿ ಜಯ ಸಾಧಿಸಿದರೆ, ಮೂರನೇ ಸ್ಥಾನಕ್ಕಾಗಿ ದ. ಆಫ್ರಿಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ಗೆಲುವು ಕಂಡಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ