ಆಂಗ್ಲರನ್ನು ಹೆಡೆಮುರಿ ಕಟ್ಟಿದ ರಾಹುಲ್ ಪಡೆ; ಭಾರತ ಎ ತಂಡಕ್ಕೆ ಸರಣಿ ಜಯ

ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 24 ರನ್ ಬಾರಿಸಿತ್ತು. ಅಂತೆಯೆ ಇಂದು ತನ್ನ ಇನ್ನಿಂಗ್ಸ್​ ಮುಂದುವರಿಸಲು ಬಂದ ಇಂಗ್ಲೆಂಡ್ ಲಯನ್ಸ್​ ಮತ್ತದೆ ಕಳಪೆ ಬ್ಯಾಟಿಂಗ್​​ಗೆ ಬಲಿಯಾಯಿತು.

Vinay Bhat | news18
Updated:February 15, 2019, 4:36 PM IST
ಆಂಗ್ಲರನ್ನು ಹೆಡೆಮುರಿ ಕಟ್ಟಿದ ರಾಹುಲ್ ಪಡೆ; ಭಾರತ ಎ ತಂಡಕ್ಕೆ ಸರಣಿ ಜಯ
Image: Twitter
Vinay Bhat | news18
Updated: February 15, 2019, 4:36 PM IST
ಮೈಸೂರು (ಫೆ. 15): ಭಾರತ ಎ ತಂಡದ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಲಯನ್ಸ್​ ತಂಡ ತನ್ನ ಎರಡನೇ ಇನ್ನಿಂಗ್ಸ್​​ನಲ್ಲೂ 180 ರನ್​​ಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ.

ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಅನಧಿಕೃತ ಟೆಸ್ಟ್​ನಲ್ಲಿ ಕೆ ಎಲ್ ರಾಹುಲ್ ಪಡೆ 68 ರನ್​ಗಳ ಇನ್ನಿಂಗ್ಸ್​ ಜಯದೊಂದಿಗೆ 1-0 ಯಿಂದ ಸರಣಿ ಕೈವಶ ಮಾಡಿಕೊಂಡಿದೆ.

ಭಾರತ ಎ ಮೊದಲ ಇನ್ನಿಂಗ್ಸ್​ನಲ್ಲಿ ನಾಯಕ ಕೆ ಎಲ್ ರಾಹುಲ್ ಅವರ ಅರ್ಧಶತಕ ಹಾಗೂ ಅಭಿಮನ್ಯು ಈಶ್ವರನ್​​ರ ಶತಕದ ನೆರವಿನಿಂದ 392 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಲಯನ್ಸ್​ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲೇ 252 ರನ್​ಗಳ ಬೃಹತ್ ಹಿನ್ನಡೆಯೊಂದಿಗೆ ಕೇವಲ 144 ರನ್​ಗೆ ಸರ್ವಪತನ ಕಂಡಿತು.

ಇದನ್ನೂ ಓದಿ: ರಕ್ತಪಾತಕ್ಕೆ ರಕ್ತದಿಂದಲೇ ಉತ್ತರ; ವಿಶ್ವಕಪ್​​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಡೌಟ್

ಬಳಿಕ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 24 ರನ್ ಬಾರಿಸಿತ್ತು. ಅಂತೆಯೆ ಇಂದು ತನ್ನ ಇನ್ನಿಂಗ್ಸ್​ ಮುಂದುವರಿಸಲು ಬಂದ ಇಂಗ್ಲೆಂಡ್ ಲಯನ್ಸ್​ ಮತ್ತದೆ ಕಳಪೆ ಬ್ಯಾಟಿಂಗ್​​ಗೆ ಬಲಿಯಾಯಿತು. ಮಯಾಂಕ್ ಮಾರ್ಕಂಡೆ ದಾಳಿಗೆ ಮಕಾಡೆ ಮಲಗಿದ ಲಯನ್ಸ್​​​​ 180 ರನ್​ಗೆ ಆಲೌಟ್ ಆಯಿತು. ತಂಡದ ಪರ ಬೆನ್ ಡಕ್ಕೆಟ್ 50 ಹಾಗೂ ಲೆವಿಸ್ ಜಾರ್ಜ್​ 44 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಸ್ಕೋರ್ 20ರ ಗಡಿ ದಾಟಲಿಲ್ಲ.

ಭಾರತ ಎ ಪರ ಮಯಾಂಕ್ ಮಾರ್ಕಂಡೆ 5 ವಿಕೆಟ್ ಕಿತ್ತರೆ, ಜಲಜ್ ಸೆಕ್ಸೇನಾ 2 ವಿಕೆಟ್ ಪಡೆದರು. ಈ ಮೂಲಕ ಭಾರತ ಎ ತಂಡ 68 ರನ್​ಗಳ ಜಯ ಸಾಧಿಸಿದೆ. ಜೊತೆಗೆ ಎರಡು ಅನಧಿಕೃತ ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಕಂಡರೆ, ಎರಡನೇ ಪಂದ್ಯ ರಾಹುಲ್ ಪಡೆ ಗೆದ್ದು 1-0 ಮುನ್ನಡೆಯೊಂದಿಗೆ ಸರಣಿ ತನ್ನದಾಗಿಸಿದೆ.
Loading...

First published:February 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626