ನಾಳೆಯಿಂದ ಮೈಸೂರಿನಲ್ಲಿ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ

ನಾಳೆ 9.30ಕ್ಕೆ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಮೈಸೂರಿಗೆ ಎರಡು ತಂಡಗಳು ಬಂದಿಳಿದಿವೆ. ನಾಳಿನ‌ ಪಂದ್ಯಕ್ಕೆ ಗಂಗೊತ್ರಿ ಗ್ಲೇಡ್ಸ್ ಸಜ್ಜಾಗಿದ್ದು ನಾಲ್ಕು ದಿನಗಳ ಕಾಲ ಪಂದ್ಯ ನಡೆಯಲಿದೆ.

G Hareeshkumar | news18
Updated:February 12, 2019, 7:25 PM IST
ನಾಳೆಯಿಂದ ಮೈಸೂರಿನಲ್ಲಿ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ
G Hareeshkumar | news18
Updated: February 12, 2019, 7:25 PM IST
ಮೈಸೂರು ( ಫೆ. 12) :  ಭಾರತ 'ಎ' ಮತ್ತು ಇಂಗ್ಲೆಂಡ್ 'ಲಯನ್ಸ್' ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಇದೇ 16 ವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ನಾಳೆ 9.30ಕ್ಕೆ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಮೈಸೂರಿಗೆ ಎರಡು ತಂಡಗಳು ಬಂದಿಳಿದಿವೆ. ನಾಳಿನ‌ ಪಂದ್ಯಕ್ಕೆ ಗಂಗೊತ್ರಿ ಗ್ಲೇಡ್ಸ್ ಸಜ್ಜಾಗಿದ್ದು ನಾಲ್ಕು ದಿನಗಳ ಕಾಲ ಪಂದ್ಯ ನಡೆಯಲಿದೆ. ಕೇರಳದಲ್ಲಿ ನಡೆದ ಒಂದನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯ ಗೊಂಡಿತ್ತು.ಕೆ ಎಲ್ ರಾಹುಲ್ ಭಾರತ 'ಎ' ತಂಡವನ್ನು ಮುನ್ನಡೆಸುವರು. 4-1 ರಿಂದ ಏಕದಿನ ಸರಣಿಯನ್ನು ಭಾರತ ಎ ತಂಡ ಗೆದ್ದುಗೊಂಡಿತ್ತು.

ಇದನ್ನೂ ಓದಿ : ಕೊಹ್ಲಿಯನ್ನು ನನಗೆ ಹೋಲಿಕೆ ಮಾಡಬೇಡಿ ಎಂದ ಪಾಕ್​ನ ಸ್ಟಾರ್ ಬ್ಯಾಟ್ಸ್​ಮನ್​​​​

ತಂಡಗಳು ಇಂತಿವೆ:

ಭಾರತ ‘ಎ’:  ಕೆ .ಎಲ್.ರಾಹುಲ್ ( ನಾಯಕ ), ಎ.ಆರ್​​. ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಅಂಕೀತ್ ಭಾವ್ನೆ, ಕರುಣ್ ನಾಯರ್, ರಿಕಿ ಭುಯಿ, ಸಿದ್ಧಾರ್ಥ್ ಲಾಡ್ , ಕೆ.ಎಸ್​. ಭರತ್ (ವಿಕೆಟ್ ಕೀಪರ್), ಶಹನಾಜ್ ನದೀಮ್, ಜಲಜ್ ಸಕ್ಸೇನಾ, ಮಯಂಕ್ ಮಾರ್ಕಂಡೆ, ಶರ್ದೂಲ್ ಠಾಕೂರ್, ನವದೀಪ್ ಸೈನಿ, ಆವೇಶ್ ಖಾನ್, ವರುಣ್ ಆ್ಯರನ್.

ಇಂಗ್ಲೆಂಡ್ ಲಯನ್ಸ್​ : ಸ್ಯಾಮ್ ಬಿಲ್ಲಿಂಗ್ಸ್​ ( ನಾಯಕ ), ಥಾಮಸ್​ ಬೈಲಿ, ಡೊಮಿನಿಕ್ ಬೆಸ್ಸ್, ಡ್ಯಾನಿ ಬ್ರಿಗ್ಸ್, ಮ್ಯಾಥ್ಯೂ ಕಾರ್ಟರ್​​, ಜಾನ್ ಚಾಪೆಲ್, ಅಲೆಕ್ಸಾಂಡರ್ ಡೇವಿಸ್, ಬೆನ್ ಡಕೆಟ್, ಲೆವಿಸ್ ಗ್ರೆಗೊರಿ, ಸ್ಯಾಮುಯೆಲ್ ಹೈನ್, ಮ್ಯಾಕ್ಸ್​ ಹೋಲ್ಡನ್, ಮಿಲಿಯಂ ಜಾಕ್ಸ್​, ಜೇಮಿ ಅವರ್ಟನ್, ಅಲಿವರ್ ಪೋಪ್, ಜೇಮ್ಸ್ ಪೋರ್ಟ್ ರ್​, ಸ್ಟೀವನ್ ಮುಲಾನೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...