ಬ್ಯಾಟಿಂಗ್-ಬೌಲಿಂಗ್​​ನಲ್ಲಿ ಮಿಂಚಿದ ರಾಹುಲ್​ ಪಡೆ; ಇಂಗ್ಲೆಂಡ್​ಗೆ 228 ರನ್​ಗಳ ಹಿನ್ನಡೆ

ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡೇ ಸಾಗಿತು. ತಂಡದ ಗರಿಷ್ಠ ರನ್ ಬಂದಿದ್ದೆಂದರೆ ಓಲಿ ಪೋಪ್ 25 ರನ್ ಬಾರಿಸಿದ್ದು.

Vinay Bhat | news18
Updated:February 14, 2019, 6:40 PM IST
ಬ್ಯಾಟಿಂಗ್-ಬೌಲಿಂಗ್​​ನಲ್ಲಿ ಮಿಂಚಿದ ರಾಹುಲ್​ ಪಡೆ; ಇಂಗ್ಲೆಂಡ್​ಗೆ 228 ರನ್​ಗಳ ಹಿನ್ನಡೆ
2014 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡುವ ಮೂಲಕ ರಾಹುಲ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
  • News18
  • Last Updated: February 14, 2019, 6:40 PM IST
  • Share this:
ಮೈಸೂರು (ಫೆ. 14): ಭಾರತ ಎ ತಂಡದ ಮಾರಕ ಬೌಲಿಂಗ್ ದಾಳಿ ಹಾಗೂ ಬ್ಯಾಟಿಂಗ್ ಬಲಕ್ಕೆ ಮಂಕಾದ ಇಂಗ್ಲೆಂಡ್ ಲಯನ್ಸ್​ ತಂಡ ಕುಸಿದು ಬಿದ್ದಿದ್ದು ಬೃಹತ್ ಮೊತ್ತದ ಹಿನ್ನಡೆಯಲ್ಲಿದೆ.

ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್​ ಪಂದ್ಯದಲ್ಲಿ ಕೆ ಎಲ್ ರಾಹುಲ್ ಪಡೆ ಭರ್ಜರಿ ಪ್ರದರ್ಶನ ತೋರುತ್ತಿದೆ. ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಎ ನಾಯಕ ಕೆ ಎಲ್ ರಾಹುಲ್ ಅವರ ಅರ್ಧಶತಕ ಹಾಗೂ ಅಭಿಮನ್ಯು ಈಶ್ವರನ್​​ರ ಶತಕದ ನೆರವಿನಿಂದ 3 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿತ್ತು.

ಎರಡನೇ ದಿನವಾದ ಇಂದು ಕರುಣ್ ನಾಯರ್ ಜೊತೆ ಇನ್ನಿಂಗ್ಸ್​ ಆರಂಭಿಸಿದ ಶ್ರೀಕರ್ ಭರತ್ ಉತ್ತಮ ಆಟವಾಡಿದರು. ಆದರೆ ನಾಯರ್ ಬೇಗ 14 ರನ್​​ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​​​ಗಳು ಒಂದಿಷ್ಟು ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಇವರ ಪೈಕಿ ಶ್ರೀಕರ್ ಬಿರುಸಿನ ಆಟ ಪ್ರದರ್ಶಿಸಿ 53 ಎಸೆತಗಳಲ್ಲಿ 46 ರನ್ ಬಾರಿಸಿದರು. ಪರಿಣಾಮ ಭಾರತ ಎ ಮೊದಲ ಇನ್ನಿಂಗ್ಸ್​ನಲ್ಲಿ 392 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್ ಲಯನ್ಸ್​ ಪರ ಜ್ಯಾಕ್ ಚಾಪೆಲ್ 4 ಹಾಗೂ ಡ್ಯಾನಿ ಬ್ರಿಂಗ್ಸ್​ ಪ್ರಮುಖ 3 ವಿಕೆಟ್ ಕಿತ್ತು ಮಿಂಚಿದರು.

ಇದನ್ನೂ ಓದಿ: ರಿಷಭ್ ಪಂತ್ ವಿಶ್ವಕಪ್​​ನಲ್ಲಿ ಆಡಬೇಕು: ನೆಹ್ರಾ ಕೊಟ್ಟ 5 ಕಾರಣಗಳು ಏನು ಗೊತ್ತಾ?

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡೇ ಸಾಗಿತು. ತಂಡದ ಗರಿಷ್ಠ ರನ್ ಬಂದಿದ್ದೆಂದರೆ ಓಲಿ ಪೋಪ್ 25 ರನ್ ಬಾರಿಸಿದ್ದು. ಉಳಿದಂತೆ ನವ್​ದೀಪ್​​ ಸೈನಿ ಹಾಗೂ ಶಹ್ಬಾಜ್ ನದೀಮ್ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಲಯನ್ಸ್​​ ತಂಡದ ಆಟಗಾರರು ಕೇವಲ 140 ರನ್​ಗೆ ಸರ್ವಪತನ ಕಂಡಿತು. ಭಾರತ ಎ ಪರ ನವ್​ದೀಪ್​​ ಸೈನಿ ಹಾಗೂ ಶಹ್ಬಾಜ್ ನದೀಮ್ ತಲಾ 3 ವಿಕೆಟ್ ಕಿತ್ತರೆ, ವರುಣ್ ಆರುನ್ ಹಾಗೂ ಜಲಜ್ ಸಕ್ಸೇನಾ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ: ಆಸೀಸ್ ಸರಣಿಗೆ ಕೊಹ್ಲಿ ಬಳಗ: ವಿಶ್ವಕಪ್​​ಗೂ ಮುನ್ನ ಬಿಸಿಸಿಐಯಿಂದ ಕೊನೆಯ ಪ್ರಯೋಗ

ಸದ್ಯ 252 ರನ್​ಗಳ ಬೃಹತ್ ಹಿನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಇಂಗ್ಲೆಂಡ್ ಲಯನ್ಸ್​ ತಂಡ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 24 ರನ್ ಕಲೆಹಾಕಿದೆ. ಮ್ಯಾಕ್ಸ್​​ ಹೋಲ್ಡನ್​​ 5 ಹಾಗೂ ಬೆನ್ ಡಕ್ಕೆಟ್ 13 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಇನ್ನೂ 228 ರನ್​ಗಳ ಹಿನ್ನಡೆಯಲ್ಲಿದೆ.
First published: February 14, 2019, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading