HOME » NEWS » Sports » INDIA A VS ENGLAND LIONS 2ND UNOFFICIAL TEST

ರಾಹುಲ್-ಅಭಿಮನ್ಯು ಭರ್ಜರಿ ಆಟ: ಉತ್ತಮಮೊತ್ತದತ್ತ ಭಾರತ ಎ

ಬ್ಯಾಟಿಂಗ್ ಆಯ್ದುಕೊಂಡ ಭಾರತ ಪರ ಓಪನರ್​ಗಳಾದ ನಾಯಕ ಕೆ ಎಲ್ ರಾಹುಲ್ ಹಾಗೂ ಅಭಿಮನ್ಯು ಈಶ್ವರನ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಎಚ್ಚರಿಕೆಯಿಂದ ಇನ್ನಿಂಗ್ಸ್​ ಆರಂಭಿಸಿದ ಈ ಜೋಡಿ ಮೊದಲ ವಿಕೆಟ್​​ಗೆ 178 ರನ್​ಗಳ ಕಾಣಿಕೆ ನೀಡಿದರು.

Vinay Bhat | news18
Updated:February 13, 2019, 5:43 PM IST
ರಾಹುಲ್-ಅಭಿಮನ್ಯು ಭರ್ಜರಿ ಆಟ: ಉತ್ತಮಮೊತ್ತದತ್ತ ಭಾರತ ಎ
ಕೆ ಎಲ್ ರಾಹುಲ್ (ಭಾರತ ಎ ತಂಡದ ನಾಯಕ)
  • News18
  • Last Updated: February 13, 2019, 5:43 PM IST
  • Share this:
ಮೈಸೂರು (ಫೆ. 13):: ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಇಂಗ್ಲೆಂಡ್ ಲಯನ್ಸ್​ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್​ ಪಂದ್ಯದಲ್ಲಿ ಭಾರತ ಎ ತಂಡ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ.

ಫಾರ್ಮ್​​ಗೆ ಮರಳಿರುವ ನಾಯಕ ಕೆ ಎಲ್ ರಾಹುಲ್ ಅವರ ಅರ್ಧಶತಕ ಹಾಗೂ ಅಭಿಮನ್ಯು ಈಶ್ವರನ್​​ರ ಶತಕದ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿದೆ.

ಬ್ಯಾಟಿಂಗ್ ಆಯ್ದುಕೊಂಡ ಭಾರತ ಪರ ಓಪನರ್​ಗಳಾದ ನಾಯಕ ಕೆ ಎಲ್ ರಾಹುಲ್ ಹಾಗೂ ಅಭಿಮನ್ಯು ಈಶ್ವರನ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಎಚ್ಚರಿಕೆಯಿಂದ ಇನ್ನಿಂಗ್ಸ್​ ಆರಂಭಿಸಿದ ಈ ಜೋಡಿ ಮೊದಲ ವಿಕೆಟ್​​ಗೆ 178 ರನ್​ಗಳ ಕಾಣಿಕೆ ನೀಡಿದರು. ನಾಯಕನಾಗಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿದ್ದ ರಾಹುಲ್ 166 ಎಸೆತಗಳಲ್ಲಿ 81 ರನ್ ಬಾರಿಸಿ ಔಟ್ ಆದರು.

ಇದನ್ನೂ ಓದಿ: 2019ರ ವಿಶ್ವಕಪ್​​ನಲ್ಲಿಲ್ಲ 2011 ವಿಶ್ವಕಪ್​ನ ಹೀರೋಗಳು

ಬಳಿಕ ಈಶ್ವರನ್ ಜೊತೆಯಾದ ಪ್ರಿಯಾಂಕ್ ಪಂಚಲ್ ಕಡೆಯಿಂದಲು ತಂಡಕ್ಕೆ ಉತ್ತಮ ಜೊತೆಯಾಟ ಸಿಕ್ಕಿತು. ಭರ್ಜರಿ ಆಟ ಪ್ರದರ್ಶಿಸಿದ ಅಭಿಮನ್ಯು ಶತಕ ಸಿಡಿಸಿ ಮಿಂಚಿದರು. ಆದರೆ, ಸೆಂಚುರಿ ಬಳಿಕ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದ ಅಭಿಮನ್ಯು 117 ರನ್​ಗೆ ಬ್ಯಾಟ್ ಕೆಳಗಿಟ್ಟರು.

ನಂತರದಲ್ಲಿ ಕರುಣ್ ನಾಯರ್ ಹಾಗೂ ಪ್ರಿಯಾಣಕ್ ತಂಡದ ರನ್ ಗತಿಯನ್ನು ಏರಿಸುವ ಹೊತ್ತಿಗೆ ಅರ್ಧಶತಕ ಗಳಿಸಿದ್ದ ಪ್ರಿಯಾಂಕ್ ಔಟ್ ಆಗಿ ನಿರಾಸೆ ಮೂಡಿಸಿದರು. ಈವೇಳೆಗೆ ಮೊದಲ ದಿನದಾಟವನ್ನು ಅಂತ್ಯಗೊಳಿಸಲಾಯಿತು.

ಇದನ್ನೂ ಓದಿ: ಬೇಬಿ ಸಿಟ್ಟಿಂಗ್ ಜಾಹೀರಾತು; ಸೆಹ್ವಾಗ್​​​ಗೆ ಖಡಕ್ ಎಚ್ಚರಿಕೆ ನೀಡಿದ ಹೇಡನ್​​​ಗೆ ಪಂತ್​ನಿಂದ ಪಂಚ್ಪರಿಣಾಮ 84.5 ಓವರ್​​ನಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 282 ರನ್ ಕಲೆಹಾಕಿದೆ. ಕರುಣ್ ನಾಯರ್ 14 ರನ್ ಗಳಿಸಿ ಕ್ರೀಸ್​ನಲ್ಲಿದ್ದು ಶ್ರೀಕರ್ ಭರತ್ ಜೊತೆ ನಾಳೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಇಂಗ್ಲೆಂಡ್ ಪರ ಟಾಮ್ ಬೆಲ್ಲಿ, ಜ್ಯಾಕ್ ಚಾಪೆಲ್ ಹಾಗೂ ಡೊಮಿನಿಕ್ ಬೆಸ್ ತಲಾ 1 ವಿಕೆಟ್ ಪಡೆದರು.

First published: February 13, 2019, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading