ಭಾರತ-ದ. ಆಫ್ರಿಕಾ 'ಎ' ತಂಡಗಳ 2ನೇ ಟೆಸ್ಟ್ ಡ್ರಾದಲ್ಲಿ ಅಂತ್ಯ; ಭಾರತಕ್ಕೆ ಸರಣಿ ಜಯ

news18
Updated:August 13, 2018, 6:08 PM IST
ಭಾರತ-ದ. ಆಫ್ರಿಕಾ 'ಎ' ತಂಡಗಳ 2ನೇ ಟೆಸ್ಟ್ ಡ್ರಾದಲ್ಲಿ ಅಂತ್ಯ; ಭಾರತಕ್ಕೆ ಸರಣಿ ಜಯ
news18
Updated: August 13, 2018, 6:08 PM IST
ನ್ಯೂಸ್ 18 ಕನ್ನಡ

ಬೆಂಗಳೂರಿನ ಹೊರವಲಯದ ಆಲೂರಿನಲ್ಲಿ ನಡೆದ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಣ 2ನೇ ಅನಧಿಕೃತ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಪಂದ್ಯದಲ್ಲಿ ಭಾರತ 30 ರನ್​​ಗಳ ಜಯ ಸಾಧಿಸಿದ್ದು, ಸರಣಿಯನ್ನು ಕೈ ವಶಮಾಡಿಕೊಂಡಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಎ ಹನುಮನ್ ವಿಹಾರಿ ಅವರ 148 ರನ್ ಹಾಗೂ ಅಂಕಿತ್ ಬಾವೆ ಅವರ 80 ರನ್​ಗಳ ಫಲವಾಗಿ 345 ರನ್​ಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಫ್ರಿಕನ್ನರ ಮೇಲೆ ಮೊಹಮ್ಮದ್ ಸಿರಾಜ್ ಹಾಗೂ ಅಂಕಿತ್ ರಜ್​ಪೂತ್ ಬೌಲಿಂಗ್ ದಾಳಿ ನಡೆಸಿದರು. ಹಂಜ್ಹ 93, ಎರವೇ 58 ರನ್​​​ ಹಾಗೂ ಸೆಕೆಂಡ್ 47 ರನ್ ಭಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಬೇಗನೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ 4ನೇ ದಿನವಾದ ಇಂದು 319 ರನ್​ಗೆ ದ. ಆಫ್ರಿಕಾ ಎ ಸರ್ವಪತನ ಕಂಡು 26 ರನ್​ಗಳ ಹಿನ್ನಡೆ ಅನುಭವಿಸಿತು.

ಬಳಿಕ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತೀಯರು 4 ವಿಕೆಟ್ ಕಳೆದುಕೊಂಡು 181 ರನ್​ ಗಳಿಸಿದ ಹೊತ್ತಿಗೆ ಮಳೆ ಶುರುವಾಗಿದ್ದರಿಂದ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಲಾಯಿತು. ಭಾರತ ಪರ ನಾಯಕ ಶ್ರೇಯಸ್ ಅಯ್ಯರ್ 65 ಬಾರಿಸಿದರೆ ಅಂಕಿತ್ ಬಾವೇ ಅಜೇಯ 64 ರನ್ ಸಿಡಿಸಿದರು.

ಈ ಮೂಲಕ ಭಾರತ ಎ ಹಾಗೂ ದ. ಆಫ್ರಿಕಾ ಎ ತಂಡಗಳ ನಡುವಣ ಎರಡು ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಪಂದ್ಯ ಗೆದ್ದಿದ್ದು ಸರಣಿ ತನ್ನದಾಗಿಸಿಕೊಂಡಿದೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626