ಭಾರತ-ಆಸ್ಟ್ರೇಲಿಯಾ 'ಎ' ತಂಡಗಳ ಅನಧಿಕೃತ ಟೆಸ್ಟ್​: ಭಾರತಕ್ಕೆ ಅಂಕಿತ್ ಬಾವ್ನೆ ಆಸರೆ

news18
Updated:September 3, 2018, 8:19 PM IST
ಭಾರತ-ಆಸ್ಟ್ರೇಲಿಯಾ 'ಎ' ತಂಡಗಳ ಅನಧಿಕೃತ ಟೆಸ್ಟ್​: ಭಾರತಕ್ಕೆ ಅಂಕಿತ್ ಬಾವ್ನೆ ಆಸರೆ
news18
Updated: September 3, 2018, 8:19 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ. 03): ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಎ ತಂಡ ಭಾರತ ಎ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲನೇ ಅನಧಿಕೃತ ಟೆಸ್ಟ್​ ಪಂದ್ಯವನ್ನಾಡುತ್ತಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸೀಸ್ ಮೊದಲ ಇನ್ನಿಂಗ್ಸ್​ನಲ್ಲಿ ಉಸ್ಮನ್ ಖವಜಾ 127 ಹಾಗೂ ಮರ್ನಸ್ ಅವರ 60 ರನ್​ಗಳ ನೆರವಿನಿಂದ 243 ರನ್​​ಗೆ ಆಲೌಟ್ ಆಗಿತ್ತು. ಭಾರತ ಎ ಪರ ಮೊಹಮ್ಮದ್ ಸಿರಾಜ್ 19.3 ಓವರ್​ಗೆ 59 ರನ್ ನೀಡಿ 8 ವಿಕೆಟ್ ಕಿತ್ತು ದಾಖಲೆ ಬರೆದರು. ಬಳಿಕ ಬ್ಯಾಟಿಂಗ್ ಮಾಡಿದ ಭಾರತ ಅಂಕಿತ್ ಬಾವ್ನೆ ಅವರ ಅಜೇಯ 91 ರನ್ ಹಾಗೂ ಮಯಾಂಕ್ ಅಗರ್ವಾಲ್ ಅವರ 47 ರನ್​ಗಳ ಫಲವಾಗಿ 274 ರನ್ ಪೇರಿಸಿತು. ಭಾರತ ಎ ಪರ ಇವರಿಬ್ಬರನ್ನ ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ಇದಕ್ಕುತ್ತರವಾಗಿ ಸದ್ಯ 2ನೇ ಇನ್ನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯ ಎ 2ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 42 ರನ್ ಕಲೆಹಾಕಿ, 11 ರನ್​ಗಳ ಮುನ್ನಡೆಯಲ್ಲಿದೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ