ಕುತೂಹಲದತ್ತ ಭಾರತ-ಆಸ್ಟ್ರೇಲಿಯಾ 'ಎ' ತಂಡಗಳ ಟೆಸ್ಟ್​: ಭಾರತ ಗೆಲುವಿಗೆ ಬೇಕು 199 ರನ್

news18
Updated:September 4, 2018, 6:44 PM IST
ಕುತೂಹಲದತ್ತ ಭಾರತ-ಆಸ್ಟ್ರೇಲಿಯಾ 'ಎ' ತಂಡಗಳ ಟೆಸ್ಟ್​: ಭಾರತ ಗೆಲುವಿಗೆ ಬೇಕು 199 ರನ್
news18
Updated: September 4, 2018, 6:44 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಸೆ. 04): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ‘ಎ’ ತಂಡಗಳ ನಡುವಣ ಮೊದಲ ಅನಧಿಕೃತ ಟೆಸ್ಟ್ ಪಂದ್ಯ ಕುತೂಹಲಘಟ್ಟ ತಲುಪಿದೆ. ಆಸೀಸ್ 2ನೇ ಇನ್ನಿಂಗ್ಸ್​​ನಲ್ಲಿ 292 ರನ್​ಗೆ ಆಲೌಟ್ ಆಗಿದ್ದು, ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಎ 3ನೇ ದಿನದಾಟದ ಅಂತ್ಯಕ್ಕೆ 62 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಭಾರತಕ್ಕೆ ಗೆಲ್ಲಲು ಇನ್ನು 199 ರನ್​​ಗಳು ಬೇಕಾಗಿದೆ.

ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 42 ರನ್ ಕಲೆಹಾಕಿದ್ದ ಆಸೀಸ್, ಮೂರನೇ ದಿನವಾದ ಇಂದು ತ್ರಾವಿಸ್ ಹೆಡ್ 87 ಹಾಗೂ ಉಸ್ಮನ್ ಖವಜಾ 40  ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಬೇಗನೆ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಪರಿಣಾಮ ಆಸ್ಟ್ರೇಲಿಯಾ ಎ 2ನೇ ಇನ್ನಿಂಗ್ಸ್​ನಲ್ಲಿ 292 ರನ್​ಗೆ ​ ಸರ್ವಪತನ ಕಂಡು ಭಾರತಕ್ಕೆ ಗೆಲ್ಲಲು 262 ರನ್​ಗಳ ಟಾರ್ಗೆಟ್ ನೀಡಿತು. ಭಾರತ ಎ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಿತ್ತರೆ, ಕೃಷ್ಣಪ್ಪ ಗೌತಮ್ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.

ಬಳಿಕ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ಅಭಿಮನ್ಯು(0) ಹಾಗೂ ನಾಯಕ ಶ್ರೇಯಸ್ ಅಯ್ಯರ್(28) ವಿಕೆಟ್ ಕಳೆದುಕೊಂಡಿದ್ದು, ದಿನದಾಟದ ಅಂತ್ಯಕ್ಕೆ 62 ರನ್ ಬಾರಿಸಿ 2 ವಿಕೆಟ್ ಕಳೆದುಕೊಂಡಿದೆ. ಇನ್ನು ಒಂದು ದಿನದ ಆಟ ಬಾಕಿ ಉಳಿದಿದ್ದು ಭಾರತ ಎ ತಂಡಕ್ಕೆ ಗೆಲ್ಲಲು 199 ರನ್​ಗಳ ಅವಶ್ಯಕತೆ ಇದೆ. ಮಯಾಂಕ್ ಅಗರ್ವಾಲ್ 25 ಹಾಗೂ ಅಂಕಿತ್ ಬಾವ್ನೆ 6 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ