ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಪುತ್ರಿಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಕಾಮೆಂಟ್ಗಳಿಗೆ ಸಂಬಂಧಿಸಿದಂತೆ ಎಫ್ಐಆರ್ (FIR) ದಾಖಲಿಸುವಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ (Swati Maliwal) ಪೊಲೀಸರನ್ನು ಒತ್ತಾಯಿಸಿದ್ದಾರೆ. ವಿರಾಟ್ ಕೊಹ್ಲಿ ಮಗಳು ನಿನ್ನೆ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Anushka Sharma) ತಮ್ಮ ಮಗಳ ಜೊತೆಗಿನ ಫೋಟೋಗಳನ್ನು ಹಂಚಿಕೊಂಡರು ಮತ್ತು ಆಕೆಯ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕಾರಣಕ್ಕೆ ವಿರಾಟ್ ಮಗಳ ಹೆಸರೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿತ್ತು. ನಂತರ ಕೆಲವು ಬಳಕೆದಾರರು ವಿರಾಟ್ ಕೊಹ್ಲಿ ಮಗಳ ಬಗ್ಗೆ ಮಾತ್ರವಲ್ಲದೆ ಮಹೇಂದ್ರ ಸಿಂಗ್ ಧೋನಿ ಮಗಳ ಬಗ್ಗೆಯೂ ಅಸಭ್ಯ ಕಾಮೆಂಟ್ಗಳನ್ನು ಮಾಡಿದ್ದರು.
ಕೊಹ್ಲಿ-ಧೋನಿ ಮಗಳ ಬಗ್ಗೆ ಅಸಭ್ಯ ಕಾಮೆಂಟ್:
ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿಇಬ್ಬರಿಗೂ ಮುದ್ದಾದ ಪುತ್ರಿಯರಿದ್ದಾರೆ. ಆದರೆ ಇದೀಗ ಈ ಮಕ್ಕಳಬಗ್ಗೆ ಕೆಲ ಸಾಮಾಜಿಕ ಜಾಲತಾಣದ ಬಳಕೆದಾರರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಈ ಕುರಿತು ಇದೀಗ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಈ ಬಳಕೆದಾರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಸ್ವಾತಿ ಮಲಿವಾಲ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿದ್ದು, ‘ಕೆಲ ಸಾಮಾಜಿಕ ಬಳಕೆದಾರರು ದೇಶದ ಇಬ್ಬರು ದೊಡ್ಡ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಧೋನಿ ಅವರ ಪುತ್ರಿಯರ ಚಿತ್ರಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ಅಸಭ್ಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. 2 ವರ್ಷ ಮತ್ತು 7 ವರ್ಷದ ಹುಡುಗಿಯ ಬಗ್ಗೆ ಅಂತಹ ಅಸಹ್ಯ ಸಂಗತಿಗಳು? ನೀವು ಆಟಗಾರನನ್ನು ಇಷ್ಟಪಡದಿದ್ದರೆ, ನೀವು ಅವರ ಮಗಳನ್ನು ನಿಂದಿಸುತ್ತೀರಾ? ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ‘ ಎಂದು ಬರೆದುಕೊಂಡಿದ್ದಾರೆ.
देश के 2 बड़े खिलाड़ी विराट कोहली और धोनी की बच्चियों की तस्वीरें ट्विटर पर डालकर कुछ एकाउंट्स भद्दी टिप्पणी कर रहे हैं। 2 साल & 7 साल की बच्ची के बारे में ऐसी घटिया बातें? कोई खिलाड़ी नहीं पसंद तो क्या उसकी बच्ची को गाली दोगे? पुलिस को FIR दर्ज करने के लिए नोटिस जारी कर रहे हैं। pic.twitter.com/9ybadS659r
— Swati Maliwal (@SwatiJaiHind) January 11, 2023
ಈ ಹಿಂದೆಯೂ ಇದೇ ರೀತಿ ನಡೆದಿತ್ತು:
ಇನ್ನು, 2020 ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ ತಂಡವು ಸೋತಾಗ ಚೆನ್ನೈ ಅಭಿಮಾನಿಯೊಬ್ಬ 16 ವರ್ಷದ ಬಾಲಕ ಧೋನಿ ಮಗಳಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದನು. ಈ ಸಂಬಂಧ ಧೋನಿ ಪತ್ನಿ ಸಾಕ್ಷಿ ರಾಂಚಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಆ ಹುಡುಗನನ್ನು ಅರೆಸ್ಟ್ ಮಾಡಿದ್ದರು. ಇದೀಗ ಅದೇ ರೀತಿಯಲ್ಲಿ ಮತ್ತೆ ಘಟನೆಯೊಂದು ನಡೆದಿದೆ.
ಇದನ್ನೂ ಓದಿ: Naomi Osaka: ಮದುವೆ ಆಗದೇ ಗರ್ಭಿಣಿಯಾಗ್ತಿದ್ದಾರೆ 25ರ ಹರೆಯದ ಆಟಗಾರ್ತಿ, ಸಂತಸದ ಸುದ್ದಿ ಕೇಳಿ ಫ್ಯಾನ್ಸ್ ಶಾಕ್!
ಭಾರತೀಯ ಕ್ರಿಕೆಟಿಗರು ತಮ್ಮ ಪ್ರದರ್ಶನದಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಟ್ರೋಲ್ಗಳಿಗೆ ಗುರಿಯಾಗುತ್ತಾರೆ, ಇದರ ಪರಿಣಾಮವಾಗಿ ಅವರಿಗೆ ಬೆದರಿಕೆಗಳು ಸಹ ಬಂದಿವೆ. ಕ್ರಿಕೆಟಿಗನೊಬ್ಬ ತಂಡಕ್ಕೆ ಸರಿಯಾಗಿ ಪ್ರದರ್ಶನ ನೀಡಲು ಸಾಧ್ಯವಾಗದಿದ್ದಾಗ ಅಥವಾ ತಪ್ಪು ಮಾಡಿದಾಗ ಅವರ ಮೇಲೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಈ ಟ್ರೋಲರ್ಗಳು ಆಟಗಾರರ ಮೇಲೆ ಮಾತ್ರ ಕಾಮೆಂಟ್ ಮಾಡುವುದಿಲ್ಲ, ಅವರ ಕುಟುಂಬಗಳನ್ನು ಗುರಿಯಾಗಿಸುತ್ತಾರೆ, ಇದು ಸಂಪೂರ್ಣವಾಗಿ ತಪ್ಪಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ