ಬಾಂಗ್ಲಾದೇಶದ ಸಿಲ್ಹೆಟ್ನಲ್ಲಿ ಭಾರತ ಮತ್ತು ಶ್ರೀಲಂಕಾ (IND W vs SL W) ನಡುವೆ ಮಹಿಳಾ ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಭಾರತ ತಂಡ 8ನೇ ಬಾರಿಗೆ ಏಷ್ಯಾಕಪ್ (Asia Cup 2022) ಟೈಟಲ್ ಅನ್ನು ಮುಡಿಗೇರಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ನಾಯಕಿ ಚಾಮರಿ ಅಟಪಟ್ಟು ಅವರ ಈ ನಿರ್ಧಾರ ಶ್ರೀಲಂಕಾಕ್ಕೆ ವಿರುದ್ಧವಾಯಿತು. ಲಂಕಾ ನಿಗದಿತ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತು. ಈ ಸುಲಭ ಮೊತ್ತ ಬೆನ್ನಟ್ಟಿದ ಭಾರತ ತಂಡದ (Team India) ವನಿತೆಯರು ಕೇವಲ 8.3 ಓವರ್ ಗಳಿಗೆ 2 ವಿಕೆಟ್ ನಷ್ಟಕ್ಕೆ 71 ರನ್ ಗಳಿಸುವ ಮೂಲಕ ಏಷ್ಯಾ ಕಪ್ ಗೆದ್ದು ಬೀಗಿದೆ.
ಲಂಕನ್ನರ ಪೆವಿಲಿಯನ್ ಪರೇಡ್:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡದ ಬ್ಯಾಟ್ಸ್ ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಶ್ರೀಲಂಕಾ ನಿಗದಿತ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತು. ಚಾಮರಿ ಅಟಪಟ್ಟು 6 ರನ್, ನೀಲಾಕ್ಷಿ ಡಿ ಸಿಲ್ವಾ 6 ರನ್, ಹರ್ಷಿತಾ ಸಮರವಿಕ್ರಮ 1 ರನ್, ಓಡಾಡಿ ರಣಸಿಂಘೆ 13 ರನ್, ಅನೌಷ್ಕಾ ಸಂಜೀವನಿ 2 ರನ್, ಹಾಸಿನಿ ಪೆರೇರಾ ಶೂನ್ಯ, ಕವಿಶಾ ದಿಲ್ಹಾರಿ 1 ರನ್, ಮಲ್ಶಾ ಸ್ನೇಹಾನಿ ಶೂನ್ಯ, ಸುಂಗಧಿಕಾ ಕುಮಾರಿ 6 ರನ್, ಇನೋಕಾ ರಣವೀರ 18 ರನ್, ಅಚಿನಿ ಕುಲಶೇಕರಿ 6 ರನ್ ಗಳಿಸಿ ಅಲ್ಪ ಮೊತ್ತಕ್ಕೆ ಕುಸಿದರು.
ಭರ್ಜರಿ ಬೌಲಿಂಗ್ ದಾಳಿ ಮಾಡಿದ ಭಾರತ:
ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಆರಂಭಿಸಿದ ಟೀಂ ಇಂಡಿಯಾ ವನಿತೆಯರು ಭರ್ಜರಿ ಬೌಲಿಂಗ್ ದಾಳಿ ಮಾಡಿದರು. ಭಾರತದ ಪರ ರಿಂಕು ಸಿಂಗ್ 3 ಓವರ್ಗೆ 5 ರನ್ ನೀಡಿ 1 ಓವರ್ ಮೇಡಿನ್ ಮಾಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ ಮತ್ತು ಸ್ನೇಹ ರಾಣಾ ತಲಾ 2 ವಿಕೆಟ್ ಪಡೆದು ಮಿಂಚಿದರು.
CHAMPIONS 🏆
Congratulations to India on their 7th Women's Asia Cup triumph 👏#WomensAsiaCup2022 | Scorecard: https://t.co/KKwY2tz2Pb | 📸 @ACCMedia1 pic.twitter.com/7U15d7ibT3
— ICC (@ICC) October 15, 2022
ಈ ಸುಲಭ ಮೊತ್ತ ಬೆನ್ನಟ್ಟಿದ ಭಾರತ ತಂಡದ (Team India) ವನಿತೆಯರು ಕೇವಲ 8.3 ಓವರ್ ಗಳಿಗೆ 2 ವಿಕೆಟ್ ನಷ್ಟಕ್ಕೆ 71 ರನ್ ಗಳಿಸುವ ಮೂಲಕ ಏಷ್ಯಾ ಕಪ್ ಗೆದ್ದು ಬೀಗಿದೆ. ಭಾರತದ ಪರ ಸ್ಮೃತಿ ಮಂದನಾ 25 ಬೌಲ್ಗೆ 3 ಸಿಕ್ಸ್ ಮತ್ತು 6 ಪೋರ್ ಸಿಡಿಸುವ ಮೂಲಕ ಆಕರ್ಷಕ 51 ರನ್ ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಉಳಿದಂತೆ ನಾಯಕಿ ಹರ್ಂಪ್ರೀತ್ ಕೌರ್ 11 ರನ್ಶೇಫಾಲಿ ವರ್ಮಾ 5 ರನ್, ಜೆಮಮಿಮಾ ರೊರ್ಡಿಗ್ರಸ್ 2 ರನ್ ಗಳಿಸಿದರು.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಬಂಧನಕ್ಕೆ ಆಗ್ರಹಿಸಿ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್, ಇಲ್ಲಿದೆ ಕಾರಣ
8ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ ಮಹಿಳಾ ತಂಡ:
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಎಸ್ ಮೇಘನಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ಡಬ್ಲ್ಯುಕೆ), ಡೇಲನ್ ಹೇಮಲತಾ, ಸ್ನೇಹ ರಾಣಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕೂರ್, ಮೇಘನಾ ಸಿಂಗ್ ಮತ್ತು ಕಿರಣ್, ಕಿರಣ್ ಪೂಜಾ ವಸ್ತ್ರಕರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ