• Home
  • »
  • News
  • »
  • sports
  • »
  • IND vs BAN Asia Cup 2022: ಬಾಂಗ್ಲಾ ಎದುರು ಟೀಂ ಇಂಡಿಯಾ ವನಿತೆಯರಿಗೆ ಜಯ, ಏಷ್ಯಾ ಕಪ್​ ಸೆಮಿಫೈನಲ್‌ಗೆ ಎಂಟ್ರಿ

IND vs BAN Asia Cup 2022: ಬಾಂಗ್ಲಾ ಎದುರು ಟೀಂ ಇಂಡಿಯಾ ವನಿತೆಯರಿಗೆ ಜಯ, ಏಷ್ಯಾ ಕಪ್​ ಸೆಮಿಫೈನಲ್‌ಗೆ ಎಂಟ್ರಿ

ಭಾರತಕ್ಕೆ ಜಯ

ಭಾರತಕ್ಕೆ ಜಯ

IND vs BAN Asia Cup 2022: ಮಹಿಳೆಯರ ಏಷ್ಯಾ ಕಪ್ 2022 ಪಂದ್ಯಾವಳಿಯಲ್ಲಿ, ಭಾರತೀಯ ಮಹಿಳಾ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ಶನಿವಾರ ನಡೆದ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 60 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

  • Share this:

ಮಹಿಳಾ ಏಷ್ಯಾಕಪ್‌ನಲ್ಲಿ (Womens Asia Cup 2022) ಪಾಕಿಸ್ತಾನದ ಸೋಲಿನ ನಂತರ ಭಾರತವು ಬಾಂಗ್ಲಾದೇಶದ (IND vs BAN )ವಿರುದ್ಧ ಗೆದ್ದು ಬೀಗಿದೆ. ಸಿಲ್ಹೆಟ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಸ್ಮೃತಿ ಮಂಧಾನ (Smriti Mandhana ) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್, ಡಿ ಹೇಮಲತಾ, ರಾಧಾ ಯಾದವ್ ಬದಲಿಗೆ ಶೆಫಾಲಿ ವರ್ಮಾ, ಸ್ನೇಹ ರಾಣಾ ಮತ್ತು ಕಿರಣ್ ನವಗಿರೆ ಪ್ಲೇಯಿಂಗ್​ 11ನಲ್ಲಿ ಕಾಣಿಸಿಕೊಂಡರು. ಆರಂಭಿಕ ಜೋಡಿ ಸ್ಮೃತಿ ಮತ್ತು ಶೆಫಾಲಿ ವರ್ಮಾ ಭಾರತದ ಪರ ಅಬ್ಬರಿಸಿದರು. ಪವರ್‌ಪ್ಲೇನಲ್ಲಿಯೇ ವೇಗವಾಗಿ ಬ್ಯಾಟಿಂಗ್ ಮಾಡಿದ ಇಬ್ಬರೂ 6 ಓವರ್‌ಗಳಲ್ಲಿ 59 ರನ್ ಗಳಿಸಿದರು. ಇದರಲ್ಲಿ 26 ರನ್‌ಗಳು ಶೆಫಾಲಿ ಬ್ಯಾಟ್‌ನಿಂದ ಬಂದವು ಮತ್ತು 31 ರನ್‌ಗಳನ್ನು ನಾಯಕ ಮಂಧಾನ ಗಳಿಸಿದರು.


ಉತ್ತಮ ಬ್ಯಾಟಿಂಗ್ ಮಾಡಿದ ಭಾರತ:


ಆರಂಭಿಕ ಜೋಡಿ ಸ್ಮೃತಿ ಮತ್ತು ಶೆಫಾಲಿ ಮೊದಲ ಎರಡು ಓವರ್‌ಗಳಲ್ಲಿ 15 ರನ್ ಸೇರಿಸಿದರು. ಇದಾದ ಬಳಿಕ ಇಬ್ಬರೂ ಬ್ಯಾಟಿಂಗ್ ಶೈಲಿ ಬದಲಿಸಿ ಶಾಟ್ ಹೊಡೆಯಲು ಆರಂಭಿಸಿದರು. ನಾಲ್ಕನೇ ಓವರ್‌ನಲ್ಲಿ ಶೆಫಾಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು. ಇದರ ನಂತರ, ಆರನೇ ಓವರ್‌ನಲ್ಲೂ, ಶೆಫಾಲಿ ಮತ್ತು ಸ್ಮೃತಿ ಬಾಂಗ್ಲಾದೇಶದ ಬೌಲರ್‌ಗಳ ಬೆವರಿಳಿಸಿದರು.ಈ ಓವರ್‌ನಲ್ಲಿ ಇಬ್ಬರೂ ಸೇರಿ ನಾಲ್ಕು ಬೌಂಡರಿ ಬಾರಿಸಿದರು. ಇದರಲ್ಲಿ ಮೂರು ಸ್ಮೃತಿ ಬ್ಯಾಟ್‌ನಿಂದ ಹೊರಬಂದವು. 96 ರನ್ ಗಳಿಸಿದ್ದ ಭಾರತಕ್ಕೆ ಮೊದಲ ಪೆಟ್ಟು ಬಿದ್ದಿತು. ಸ್ಮೃತಿ ಅರ್ಧಶತಕ ವಂಚಿತರಾದರು. 47 ರನ್ ಗಳಿಸಿ ರನ್ ಔಟ್ ಆದರು. ಅವರು 6 ಬೌಂಡರಿಗಳನ್ನು ಬಾರಿಸಿದರು.  ಬಳಿಕ ಶೆಫಾಲಿ ಅರ್ಧಶತಕ ಪೂರೈಸಿದರು. ಇದಕ್ಕಾಗಿ ಅವರು 40 ಎಸೆತಗಳನ್ನು ಆಡಿದ್ದರು. ಶೆಫಾಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.


ಅವರು ಮಾರ್ಚ್ 2021 ರಲ್ಲಿ ಕೊನೆಯ T20 ಅರ್ಧಶತಕವನ್ನು ಪೂರೈಸಿದ್ದರು. ಶೆಫಾಲಿ ಕೂಡ ಅರ್ಧಶತಕ ಪೂರೈಸಿದ ನಂತರ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ ಮತ್ತು 55 ರನ್ ಗಳಿಸಿ ಔಟಾದರು. ಅವರನ್ನು ರುಮಾನಾ ಅಹಮದ್ ಕ್ಲೀನ್ ಬೌಲ್ಡ್ ಮಾಡಿದರು. ಭಾರತ 17ನೇ ಓವರ್‌ನಲ್ಲಿ ಸತತ ಎರಡು ವಿಕೆಟ್ ಕಳೆದುಕೊಂಡಿತು. ಮೊದಲು ರಿಚಾ ಘೋಷ್ 4 ಮತ್ತು ನಂತರ ಕೆಪಿ ನವಗಿರೆ ಖಾತೆ ತೆರೆಯದೆ ಔಟಾದರು. ಆದರೆ, ಜೆಮಿಮಾ ರಾಡ್ರಿಗಸ್ ಇನ್ನೊಂದು ತುದಿಯಲ್ಲಿ ನಿಂತು ಭಾರತವನ್ನು 159 ರನ್‌ಗಳ ಸ್ಕೋರ್‌ಗೆ ಕೊಂಡೊಯ್ದರು. ಜೆಮಿಮಾ 24 ಎಸೆತಗಳಲ್ಲಿ 35 ರನ್ ಗಳಿಸಿ ಅಜೇಯರಾಗಿ ಉಳಿದರು.


ಇದನ್ನೂ ಓದಿ: IND vs SA ODI: ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಚಹಾರ್​ ಔಟ್​, ಯುವ ಆಲ್​ರೌಂಡರ್​ಗೆ ಅವಕಾಶ


ಸೆಮಿಫೈನಲ್​ ತಲುಪಿದ ಭಾರತ:


ಇನ್ನು, 160 ರನ್ ಗಳ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 100 ರನ್ ಮಾತ್ರ ಗಳಿಸಿತು. ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ತಲಾ ಎರಡು ವಿಕೆಟ್ ಪಡೆದರು. ಈ ಗೆಲುವಿನ ಮೂಲಕ ಮಹಿಳಾ ಏಷ್ಯಾ ಕಪ್​ 2022ರಲ್ಲಿ ಭಾರತ ವನಿತೆಯರು ಮೊದಲ ತಂಡವಾಗಿ ಸೆಮಿಫೈನಲ್​ ಹಂತಕ್ಕೆ ಲಗ್ಗೆ ಇಟ್ಟಿದೆ. ಇಂದಿನ ಗೆಲುವಿನ ಮೂಲಕ ಟೀಂ ಇಂಡಿಯಾ ತಂಡ ನೇರವಾಗಿ ಸೇಮಿಫೈನಲ್ ಹಂತಕ್ಕೇರಿದೆ. 

Published by:shrikrishna bhat
First published: