ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ (Team India Women) ತಂಡ ಐತಿಹಾಸಿಕ ಗೆಲುವು (Historic Win) ಪಡೆದುಕೊಂಡಿದೆ. ಆಸ್ಟ್ರೇಲಿಯಾ ಮಹಿಳಾ ತಂಡದ (Australia Women Team) ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿ (T20 Series) ಭಾಗವಾಗಿ ಭಾನುವಾರ ಮುಂಬೈನಲ್ಲಿ ಎರಡನೇ ಟಿ20 ಪಂದ್ಯ ನಡೆಯಿತು. ಹರ್ಮನ್ ಪ್ರೀತ್ ಕೌರ್ (Harmanpreet Kaur) ಸಾರಥ್ಯದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ರೋಚಕ ಹಣಾಹಣಿಯಲ್ಲಿ ಎರಡು ತಂಡಗಳು ನಿಗದಿತ 20 ಓವರ್ಗಳಲ್ಲಿ ಸಮವಾಗಿ ಸ್ಕೋರ್ ಮಾಡಿದ್ದ ಕಾರಣ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಬೇಕಾಯಿತು.
ಸ್ಮೃತಿ ಮಂದಾನ ಸ್ಫೋಟಕ ಬ್ಯಾಟಿಂಗ್
ಸೂಪರ್ ಓವರ್ನಲ್ಲಿ ರಿಚಾ ಘೋಷ್, ಸ್ಮೃತಿ ಮಂದಾನ ಸ್ಫೋಟಕ ಬ್ಯಾಟಿಂಗ್ನೊಂದಿಗೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟದೊಂದಿಗೆ 20 ರನ್ ಗಳಿಸಿತು. ಆ ಬಳಿಕ ಬ್ಯಾಟಿಂಗ್ ಮಾಡಿದ ಆಸೀಸ್ ತಂಡ, ರೇಣುಕಾ ಸಿಂಗ್ ಬೌಲಿಂಗ್ನಲ್ಲಿ 16 ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮಹಿಳಾ ತಂಡ 20 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 187 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಮೊದಲ ಟಿ20ಯಲ್ಲಿ ಮಿಂಚಿದ್ದ ಬೆತ್ ಮೂನಿ (54 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 82 ರನ್), ತಹ್ಲಿಯಾ ಮೆಗ್ರಾತ್ (51 ಎಸೆತಗಳಲ್ಲಿ 10 ಬೌಂಡರಿ, ಒಂದು ಸಿಕ್ಸರ್ ನೊಂದಿಗೆ 70 ರನ್) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ ಒಂದು ವಿಕೆಟ್ ಗಳಿಸಿದ್ದರು.
A victory lap to honour the crowd who were in attendance to support the women in blue
Over 47,000 in attendance for the second T20I who witnessed a thriller here at the DY Patil Stadium 👏 👏
Keep cheering for Women in Blue 👍 👍#TeamIndia | #INDvAUS | @mastercardindia pic.twitter.com/CtzdsyhxZu
— BCCI Women (@BCCIWomen) December 11, 2022
ಬಿಗ್ ಟಾರ್ಗೆಟ್ ಚೇಸಿಂಗ್ಗೆ ಇಳಿದ ಟೀಂ ಇಂಡಿಯಾ ಮಹಿಳಾ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದ ಕಾರಣ ಪಂದ್ಯ ಟೈ ಆಗಿತ್ತು. ಟೀಂ ಇಂಡಿಯಾ ಪರ ಸ್ಮೃತಿ ಮಂದಾನ 49 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ಗಳೊಂದಿಗೆ 79 ರನ್ ಸಿಡಿಸಿದ್ದರು. ಇನ್ನಿಂಗ್ಸ್ ಕೊನೆಯಲ್ಲಿ ರಿಚಾ ಘೋಷ್ 13 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ಗಳೊಂದಿಗೆ 26 ರನ್ ಸಿಡಿಸಿ ಅಜೇಯರಾಗಿ ಉಳಿದರು.
ಸ್ಮೃತಿ ಮಂದಾನ ಸೂಪರ್ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಪಂದ್ಯವನ್ನ ಸುಲಭವಾಗಿ ಗೆಲ್ಲಲಿದೆ ಎಂದೇ ಭಾಗಿಸಲಾಗಿತ್ತು. ಆದರೆ ಇದಕ್ಕೆ ಆಸ್ಟ್ರೇಲಿಯಾ ಮಹಿಳಾ ತಂಡದ ಬೌಲರ್ಗಳು ಅವಕಾಶ ನೀಡಲಿಲ್ಲ. 12 ಎಸೆತಗಳಲ್ಲಿ ಟೀಂ ಇಂಡಿಯಾ ಗೆಲುವಿಗೆ ಕೇವಲ 18 ರನ್ಗಳು ಬೇಕಿದ್ದ ಸಮಯದಲ್ಲಿ 19 ಓವರ್ ಬೌಲ್ ಮಾಡಿದ ಹಿಥಾರ್ ಗ್ರಹಮ್, ಒಂದು ವಿಕೆಟ್ ಉರುಳಿಸಿ ಪಂದ್ಯಕ್ಕೆ ತಿರುವು ನೀಡಿದರು.
ಇನ್ನಿಂಗ್ಸ್ ಕೊನೆ ಎಸೆತದಲ್ಲಿ ಬೌಂಡರಿ ಸಿಡಿಸಿದ ದೇವಿಕಾ
ಅಲ್ಲದೇ ಓವರ್ನಲ್ಲಿ 4 ರನ್ಗಳು ಮಾತ್ರ ಬಿಟ್ಟುಕೊಟ್ಟ ಕಾರಣ ಅಂತಿಮ ಓವರ್ನಲ್ಲಿ ಟೀಂ ಇಂಡಿಯಾ ಗೆಲುವಿಗೆ 13 ರನ್ಗಳು ಬೇಕಿತ್ತು. ಈ ವೇಳೆ ಹಿಟ್ಟರ್ ರಿಚಾ ಘೋಷ್ ಸಿಂಗಲ್ ತೆಗೆದುಕೊಂಡು ದೇವಿಕಾ ವೈದ್ಯಾ ಸ್ಟ್ರೈಕ್ ಪಡೆದುಕೊಂಡ ಕಾರಣ ಟೀಂ ಇಂಡಿಯಾ ಸೋಲುತ್ತಾ ಎಂಬ ಅನುಮಾನ ಅಭಿಮಾನಿಗಳನ್ನು ಕಾಡಿತ್ತು.
ಆದರೆ, ದೇವಿಕಾ ಅಂತಿಕ ಎಸೆತದಲ್ಲಿ ಬೌಂಡರಿ ಸಿಡಿಸಿ ಸ್ಕೋರ್ ಸಮವಾಗುವಂತೆ ಮಾಡಿದ್ದರು. ಇದರೊಂದಿಗೆ ಫಲಿತಾಂಶಕ್ಕಾಗಿ ಅಂಪೈರ್ಗಳು ಸೂಪರ್ ಓವರ್ಗೆ ಮೊರೆ ಹೋದರು. ಸೂಪರ್ ಓವರ್ನಲ್ಲಿ ಆಸೀಸ್ ತಂಡ ಮಾಡಿದ ಫೀಲ್ಡಿಂಗ್ ತಪ್ಪು ಟೀಂ ಇಂಡಿಯಾಗೆ ವರವಾಯ್ತು.
Of thrilling chase & Super Over finish, cracking maximums & brilliant crowd support 👌😎🙌
𝗦𝗣𝗘𝗖𝗜𝗔𝗟: Batting stars @mandhana_smriti & @13richaghosh sum up #TeamIndia's stunning win at the DY Patil Stadium 👍 👍 - By @ameyatilak
Watch 🔽 #INDvAUS https://t.co/9sDTzu19II pic.twitter.com/IKCqBTUjLl
— BCCI Women (@BCCIWomen) December 12, 2022
ಈ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ಐದು ಪಂದ್ಯಗಳ ಸರಣಿಯನ್ನು 1-1ರೊಂದಿಗೆ ಸಮಬಲ ಸಾಧಿಸಿದ್ದು, ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಪಾತ್ರವಹಿಸಿದ ಸ್ಮೃತಿ ಮಂದಾನ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಇನ್ನು, ಸರಣಿಯ ಮೂರನೇ ಪಂದ್ಯ ಬುಧವಾರ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ