• Home
  • »
  • News
  • »
  • sports
  • »
  • IND vs ZIM: ಟೀಂ ಇಂಡಿಯಾ ಸೆಮಿಫೈನಲ್ ಹಾದಿಗೆ ಮಳೆಯೇ ವಿಲನ್, ಇಲ್ಲಿದೆ  ಮೆಲ್ಬೋರ್ನ್ ವೆದರ್ ರಿಪೋರ್ಟ್

IND vs ZIM: ಟೀಂ ಇಂಡಿಯಾ ಸೆಮಿಫೈನಲ್ ಹಾದಿಗೆ ಮಳೆಯೇ ವಿಲನ್, ಇಲ್ಲಿದೆ  ಮೆಲ್ಬೋರ್ನ್ ವೆದರ್ ರಿಪೋರ್ಟ್

IND vs ZIM

IND vs ZIM

IND vs ZIM: ಸೂಪರ್ 12 ರಲ್ಲಿ ಟೀಂ ಇಂಡಿಯಾದ ಕೊನೆಯ ಪಂದ್ಯ ಜಿಂಬಾಬ್ವೆ ವಿರುದ್ಧ ನಡೆಯಲಿದೆ. ಭಾರತ ತಂಡದ ಸೆಮಿಫೈನಲ್ ಟಿಕೆಟ್ ಈ ಪಂದ್ಯದ ಮೇಲೆ ಅವಲಂಬಿತವಾಗಿದೆ.

  • Share this:

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್​ ಸೆಮಿಫೈನಲ್ ಪ್ರವೇಶದ ಸಮೀಕರಣಗಳು ಕುತೂಹಲಕಾರಿಯಾಗಿವೆ. ಸೂಪರ್-12 ಲೀಗ್ ಪಂದ್ಯಗಳು ಬಹುತೇಕ ಮುಗಿದಿದ್ದರೂ, ಸೆಮಿಫೈನಲ್ ತಲುಪುವ ನಾಲ್ಕು ತಂಡಗಳು ಸ್ಪಷ್ಟವಾಗಿಲ್ಲ. ಇಂತಹ ಪರಿಸ್ಥಿತಿ ನಡುವೆ ಆಸ್ಟ್ರೇಲಿಯಾದ ಹವಾಮಾನ ಪ್ರಮುಖ ಪಾತ್ರ ವಹಿಸಿದೆ. ಹಲವು ಪ್ರಮುಖ ಪಂದ್ಯಗಳಲ್ಲಿ ಮಳೆ ವಿಲನ್ ಆಗಿದೆ. ಹೀಗಾಗಿ ಉಳಿದ ಪ್ರಮುಖ ಪಂದ್ಯಗಳಿಗೆ ಮಳೆ ಅಡ್ಡಿಯಾಗದಿರಲಿ ಎಂದು ಸಂಕಷ್ಟದಲ್ಲಿರುವ ತಂಡಗಳು ಪ್ರಾರ್ಥಿಸುತ್ತಿವೆ. ಆಸ್ಟ್ರೇಲಿಯಾದಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆಗೆ ಅನುಕೂಲಕರ ವಾತಾವರಣವಿದೆ. ಈ ಮಳೆಯಿಂದಾಗಿ ಟಿ20 ವಿಶ್ವಕಪ್ ಟೂರ್ನಿ ಮೇಲೆ ಭಾರಿ ಪರಿಣಾಮ ಬೀರಿದೆ. ಬುಧವಾರ (ನವೆಂಬರ್ 2) ನಡೆದ ಭಾರತ-ಬಾಂಗ್ಲಾದೇಶ ಪಂದ್ಯದ ವೇಳೆ ಮಳೆ 'ಗೇಮ್ ಚೇಂಜರ್' ಆಗಿ ಹೊರಹೊಮ್ಮಿತು.


ಮಳೆಗೂ ಮುನ್ನ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಮಳೆಯ ನಂತರ ಟೀಂ ಇಂಡಿಯಾದ ಬೌಲರ್‌ಗಳು ಸಾಕಷ್ಟು ನೆರವು ಪಡೆದರು. ಅಂತೆಯೇ ಗುರುವಾರ (ನವೆಂಬರ್ 3) ನಡೆದ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹತ್ವದ ಪಂದ್ಯಕ್ಕೂ ಮಳೆ ಆಗಮಿಸಿತ್ತು. ಇದರಿಂದ ಪಾಕ್ ತಂಡಕ್ಕೆ ಲಾಭವಾಯಿತು.


ಟೀಂ ಇಂಡಿಯಾದ ಪಂದ್ಯದಲ್ಲಿ ಏನಾಗಲಿದೆ?:


ನವೆಂಬರ್ 6 ಭಾನುವಾರದಂದು ಟೀಂ ಇಂಡಿಯಾ ಸೂಪರ್-12 ಹಂತದ ಕೊನೆಯ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆಸ್ಟ್ರೇಲಿಯನ್ ಬ್ಯೂರೋ ಆಫ್ ಮೆಟಿಯರಾಲಜಿ ವೆಬ್‌ಸೈಟ್‌ನಲ್ಲಿನ ಮಾಹಿತಿ ಪ್ರಕಾರ ತಂಡಗಳು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಸಮಾನವಾಗಿ ಸಂತೋಷವನ್ನು ನೀಡುತ್ತಿದೆ. ಹವಾಮಾನ ಬ್ಯೂರೋ ಪ್ರಕಾರ, ಭಾನುವಾರ ಮೆಲ್ಬೋರ್ನ್‌ನಲ್ಲಿ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ.


ಇದನ್ನೂ ಓದಿ: T20 World Cup 2022: ಸೆಮೀಸ್​ಗೆ ಎಂಟ್ರಿಕೊಟ್ಟ ಕಿವೀಸ್​, 3 ಸ್ಥಾನಗಳಿಗೆ 7 ತಂಡಗಳ ನಡುವೆ ಬಿಗ್​ ಫೈಟ್​


ಮೆಲ್ಬೋರ್ನ್‌ನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ. 20ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಎಂದು ತಿಳಿಸಿದೆ. ಈ ಹಿಂದೆ ಮಳೆಯಿಂದಾಗಿ ಇಂಗ್ಲೆಂಡ್ ಐರ್ಲೆಂಡ್ ವಿರುದ್ಧ ಸೋತಿತ್ತು. ಜಿಂಬಾಬ್ವೆ ವಿರುದ್ಧದ ದಕ್ಷಿಣ ಆಫ್ರಿಕಾದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಅಫ್ಘಾನಿಸ್ತಾನ ತಂಡ ಮಳೆಯಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ. ಭಾರೀ ಮಳೆಯಿಂದಾಗಿ ಅವರ ಎರಡು ಪಂದ್ಯಗಳನ್ನು ರದ್ದುಗೊಳಿಸಲಾಯಿತು.


ಮಳೆ ಬಂದರೆ ಸೆಮೀಸ್​ ಕಥೆ ಏನು?:



ಇದೇ ವೇಳೆ ಭಾರತ ವಿಶ್ವಕಪ್ ಅಭಿಯಾನವನ್ನು ಇದೇ ಮೈದಾನದಲ್ಲಿ ಆರಂಭಿಸಿತು. ಅಕ್ಟೋಬರ್ 23 ರಂದು ನಡೆದ ವರ್ಣರಂಜಿತ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತು. ಆ ಪಂದ್ಯಕ್ಕೂ ಮುನ್ನ ಮೆಲ್ಬೋರ್ನ್‌ನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇತ್ತು. ಆದರೆ, ಅದೃಷ್ಟವಶಾತ್ ಅಂದು ಪಂದ್ಯದ ವೇಳೆ ಒಮ್ಮೆಯೂ ಮಳೆ ಸುರಿಯಲಿಲ್ಲ. ಭಾನುವಾರ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲೂ ಮಳೆ ಬಾರದೇ ಇರಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳೂ ಇದ್ದಾರೆ. ಅಲ್ಲದೇ ಈ ಪಂದ್ಯಕ್ಕೆ ಮಳೆ ಅಡ್ಡಿ ಆದಲ್ಲಿ ಭಾರತಕ್ಕೆ ಸೆಮೀಸ್​ ಹಾದಿ ಕೊಂಚ ಕಷ್ಟವಾಗಲಿದೆ.


ಇದನ್ನೂ ಓದಿ: T20 WC 2022 PAK vs SA: ಆಫ್ರಿಕಾ ವಿರುದ್ಧ ಪಾಕ್​ ತಂಡಕ್ಕೆ ಭರ್ಜರಿ ಜಯ, ಟೀಂ ಇಂಡಿಯಾಗೆ ಹೆಚ್ಚಿದ ಟೆನ್ಷನ್


ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಭಾರತ ತಂಡ:


ಕೆಎಲ್ ರಾಹುಲ್, ರೋಹಿತ್ ಶರ್ಮಾ (C), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್​ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಹೂಡಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್


Published by:shrikrishna bhat
First published: