• Home
  • »
  • News
  • »
  • sports
  • »
  • T20 WC 2022 IND vs ZIM: ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ, ಸೆಮೀಸ್​ಗೆ ಗ್ರ್ಯಾಂಡ್​ ಎಂಟ್ರಿ ಕೊಟ್ಟ ರೋಹಿತ್ ಪಡೆ

T20 WC 2022 IND vs ZIM: ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ, ಸೆಮೀಸ್​ಗೆ ಗ್ರ್ಯಾಂಡ್​ ಎಂಟ್ರಿ ಕೊಟ್ಟ ರೋಹಿತ್ ಪಡೆ

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

T20 WC 2022 IND vs ZIM: ಟಿ20 ವಿಶ್ವಕಪ್ 2022ರ (T20 WC 2022) ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆ (IND vs ZIM) ವಿರುದ್ಧ ಭರ್ಜರಿಯಾಗಿ ಗೆದ್ದಿದೆ. ಈ ಮೂಲಕ ಗ್ರೂಪ್ 2ರ ಪಟ್ಟಿಯಲ್ಲಿ ಅಗ್ರಸ್ಥಾನದಿಮದ ಸೆಮೀಸ್​ಗೆ ಎಂಟ್ರಿ ಕೊಟ್ಟಿದೆ.

  • Share this:

ಟಿ20 ವಿಶ್ವಕಪ್ 2022ರ (T20 WC 2022) ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆ (IND vs ZIM) ವಿರುದ್ಧ ಭರ್ಜರಿಯಾಗಿ ಗೆದ್ದಿದೆ. ಈ ಮೂಲಕ ಗ್ರೂಪ್ 2ರ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಸೆಮೀಸ್​ಗೆ ಎಂಟ್ರಿ ಕೊಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ ತಂಡವು 17.2 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 115 ರನ್ ಗೆ ಕುಸಿತಕಂಡಿತು. ಈ ಮೂಲಕ ಭಾರತ 71 ರನ್ ಗಳಿಂದ ಜಯ ದಾಖಲಿಸಿತು. ಇದರಿಂದ ಭಾರತ ಗ್ರ್ಯಾಂಡ್​ ಆಗಿ ಸೆಮಿ ಫೈನಲ್​ಗೆ ಎಂಟ್ರಿ ನೀಡಿದೆ. ಇತ್ತ ಜಿಂಬಾಬ್ವೆ ಪರ ಕೇವಲ ಸಿಕಂಧರ್ ರಾಜಾ 34 ರನ್ ಮತ್ತು ರಾಯನ್ 35 ರನ್ ಗಳಿಸಿದರು.


ಸಂಘಟಿತ ಬೌಲಿಂಗ್ ದಾಳಿ ಮಾಡಿದ ಟೀಂ ಇಂಡಿಯಾ:


ಇನ್ನು, ಜಿಂಬಾಬ್ವೆ ಆಟಗಾರರಿಗೆ ಯಾವುದೇ ಹಂತದಲ್ಲಿಯೂ ಟಾರ್ಗೆಟ್​ ಕಡೆ ಮುನ್ನುಗ್ಗಲು ಭಾರತದ ಬೌಲರ್​ಗಳು ಅವಕಾಶವನ್ನೇ ನೀಡಲಿಲ್ಲ. ಭಾರತದ ಪರ ಅಶ್ವಿನ್​ 3 ವಿಕೆಟ ಪಡೆದರೆ, ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಹಾಗೂ ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖರಾದರು.ಭರ್ಜರಿ ಬ್ಯಾಟಿಂಗ್ ಮಾಡಿದ ಭಾರತ:


ಭಾರತದ ಪರ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕ ಸಿಡಿಸಿದರು. ಕೆಎಲ್ ರಾಹುಲ್ 35 ಎಸೆತದಲ್ಲಿ 3-3 ಪೋರ್ ಮತ್ತು ಸಿಕ್ಸ್ ಸಿಡಿಸಿ 51 ರನ ಗಳಿಸಿದರೆ, ಸೂರ್ಯಕುಮಾರ್ ಯಾದವ್ 25 ಎಸೆತದಲ್ಲಿ 4 ಸಿಕ್ಸ್ 6 ಬೌಂಡರಿಗಳ ನೆರವಿನಿಂದ ಅಜೇಯರಾಗಿ 61 ರನ್ ಗಳಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 15 ರನ್, ವಿರಾಟ್ ಕೊಹ್ಲಿ 26 ರನ್, ರಿಷಭ್ ಪಂತ್ 3 ರನ್ ಮತ್ತು ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ಮಿಂಚಿದರು.


ಇದನ್ನೂ ಓದಿ: Danushka Gunathilaka: ಅತ್ಯಾಚಾರ ಆರೋಪ, ಶ್ರೀಲಂಕಾದ ಸ್ಟಾರ್​ ಬ್ಯಾಟ್ಸ್​ಮನ್ ಧನುಷ್ಕಾ ಗುಣತಿಲಕ​ ಬಂಧನ


ಸೆಮೀಸ್​ನಲ್ಲಿ ಇಂಗ್ಲೆಂಡ್​ ಎದುರಾಳಿ:


ಇನ್ನು, ಜಿಂಬಾಬ್ವೆ ವಿರುದ್ಧ ಗೆದ್ದ ಭಾರತ ಗ್ರೂಪ್ 2ರಲ್ಲಿ ಅಗ್ರಸ್ಥಾನದ ಮೂಲಕ ಸೆಮೀಸ್​ಗೆ ಎಂಟ್ರಿ ನೀಡಿದೆ. ಇದರಿಂದಾಗಿ ಗ್ರೂಪ್ 1ರಲ್ಲಿ 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್​ ತಂಡವನ್ನು ಭಾರತ ಸೆಮೀಸ್​ನಲ್ಲಿ ನವೆಂಬರ್ 10ರಂದು ಎದುರಿಸಲಿದೆ. ಅದರಂತೆ ಅಂತಿಮವಾಗಿ ಸೆಮೀಸ್​ ಪಟ್ಟಿ ಸಿದ್ಧವಾಗಿದ್ದು, ನವೆಂಬರ್ 9ರಂದು ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್​ ತಂಡವನ್ನು ಎದುರಿಸಲಿದೆ.


ಇದನ್ನೂ ಓದಿ: T20 World Cup 2022: ಫೇಕ್ ಫೀಲ್ಡಿಂಗ್ ನಿಯಮ ಏನು ಹೇಳುತ್ತೆ? ಕೊಹ್ಲಿ ನಿಜವಾಗಿಯೂ ತಪ್ಪು ಮಾಡಿದ್ದಾರಾ?


ರೋಹಿತ್-ಪಂತ್​ ವಿಫಲ:


ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಪದೇ ಪದೇ ವಿಫಲವಾಗುತ್ತಿರುವುದು ತಂಡದ ದೊಡ್ಡ ಸಮಸ್ಯೆಯಾಗಿದೆ. ಅಲ್ಲದೇ ಸೆಮೀಸ್​ ಪಂದ್ಯದಲ್ಲಾದರೂ ರೋಹಿತ್ ಫಾರ್ಮ್​ಗೆ ಮರಳಬೇಕಾಗಿರುವುದು ತಂಡಕ್ಕೆ ಬಹಳ ಮುಖ್ಯವಾಗಿದೆ. ಅಲ್ಲದೇ ಸಿಕ್ಕ ಒಂದು ಅವಕಾಶವನ್ನು ಇಂದು ರಿಷಭ್ ಪಂತ್ ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದು, ಕೇವಲ 3 ರನ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.

Published by:shrikrishna bhat
First published: