• Home
  • »
  • News
  • »
  • sports
  • »
  • T20 World Cup 2022: ಬ್ಲಾಕ್‌ಬಸ್ಟರ್ ಸಂಡೇ, ಒಂದೇ ದಿನ ಮೂರು ಪಂದ್ಯಗಳು; ಇಲ್ಲಿದೆ ವೇಳಾಪಟ್ಟಿ

T20 World Cup 2022: ಬ್ಲಾಕ್‌ಬಸ್ಟರ್ ಸಂಡೇ, ಒಂದೇ ದಿನ ಮೂರು ಪಂದ್ಯಗಳು; ಇಲ್ಲಿದೆ ವೇಳಾಪಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 World Cup 2022: ಟಿ20 ವಿಶ್ವಕಪ್ 2022 ರಲ್ಲಿ, ನವೆಂಬರ್ 6 ರ ದಿನವು ಎಲ್ಲಾ ತಂಡಗಳಿಗೆ ಬಹಳ ಮುಖ್ಯವಾಗಿದೆ. ಭಾನುವಾರ ಒಟ್ಟು ಮೂರು ಪಂದ್ಯಗಳು ನಡೆಯಲಿವೆ.

  • Share this:

 ಟಿ20 ವಿಶ್ವಕಪ್ 2022 ರಲ್ಲಿ (T20 World Cup 2022) ನವೆಂಬರ್ 6 ರ ದಿನವು ಎಲ್ಲಾ ತಂಡಗಳಿಗೆ ಬಹಳ ಮುಖ್ಯವಾಗಿದೆ. ಭಾನುವಾರ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ (SA vs NL) ತಂಡವನ್ನು ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶಕ್ಕೆ (BAN vs PAK) ಸವಾಲೊಡ್ಡಲಿದೆ. ದಿನದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆಯನ್ನು (IND vs ZIM) ಎದುರಿಸಲಿದೆ. ಈ ಮೂರು ಪಂದ್ಯಗಳು ಎಲ್ಲ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ.


ನಾಳೆ ನಿರ್ಧಾರವಾಗಲಿದೆ ಸೆಮೀಸ್​ ಫಲಿತಾಂಶ:


ನೆದರ್ಲೆಂಡ್ಸ್ ವಿರುದ್ಧ ಆಫ್ರಿಕಾ ಗೆದ್ದರೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ಆಫ್ರಿಕಾ ಸೋಲನುಭವಿಸಿದರೆ, ಪಾಕಿಸ್ತಾನಕ್ಕೆ ಇದು ಸುವರ್ಣಾವಕಾಶವಾಗಿದ್ದು, ಪಾಕ್ ತಂಡವು ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಬಹುದು. ಮತ್ತೊಂದೆಡೆ, ಸೂಪರ್-12 ಸುತ್ತಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವು ಜಿಂಬಾಬ್ವೆಯನ್ನು ಸೋಲಿಸುವ ಮೂಲಕ ಸೂಪರ್ 12 ಹಂತದ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.


ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲ್ಯಾಂಡ್ಸ್:


ದಿನದ ಮೊದಲ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ನಡುವೆ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ನಾಯಕರು ಬೆಳಗ್ಗೆ ಐದು ಗಂಟೆಗೆ ಟಾಸ್‌ಗಾಗಿ ಮೈದಾನಕ್ಕೆ ಬರಲಿದ್ದಾರೆ. ಅದೇ ಹೊತ್ತಿಗೆ ಅರ್ಧ ಗಂಟೆಯ ನಂತರ ಅಂದರೆ 5.30ಕ್ಕೆ ಪಂದ್ಯದ ನಿಜವಾದ ರೋಚಕತೆ ಶುರುವಾಗಲಿದೆ.


ಇದನ್ನೂ ಓದಿ: IND vs ZIM: ಟೀಂ ಇಂಡಿಯಾ ಸೆಮಿಫೈನಲ್ ಹಾದಿಗೆ ಮಳೆಯೇ ವಿಲನ್, ಇಲ್ಲಿದೆ ಮೆಲ್ಬೋರ್ನ್ ವೆದರ್ ರಿಪೋರ್ಟ್


ಪಾಕಿಸ್ತಾನ vs ಬಾಂಗ್ಲಾದೇಶ:


ದಿನದ ಎರಡನೇ ಪಂದ್ಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟಾಸ್‌ಗಾಗಿ ಉಭಯ ತಂಡಗಳ ನಾಯಕರು ಬೆಳಗ್ಗೆ ಒಂಬತ್ತಕ್ಕೆ ಮೈದಾನಕ್ಕೆ ಬರಲಿದ್ದಾರೆ. ಅದೇ ವೇಳೆಗೆ ಪಂದ್ಯದ ನಿಜವಾದ ರೋಚಕತೆ ಅರ್ಧ ಗಂಟೆ ನಂತರ 9.30ಕ್ಕೆ ಆರಂಭವಾಗಲಿದೆ. ಪಾಕಿಸ್ತಾನ ತಂಡ ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು.


ಭಾರತ ವಿರುದ್ಧ ಜಿಂಬಾಬ್ವೆ:


ದಿನದ ಮೂರನೇ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆಗೆ ಸವಾಲೊಡ್ಡಲಿದೆ. ಈ ಪಂದ್ಯವು ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಮಧ್ಯಾಹ್ನ ಒಂದು ಗಂಟೆಗೆ ಟಾಸ್‌ಗಾಗಿ ಉಭಯ ತಂಡಗಳ ನಾಯಕರು ಮೈದಾನಕ್ಕೆ ಬರಲಿದ್ದಾರೆ. ಅದೇ ವೇಳೆಗೆ ಪಂದ್ಯದ ನಿಜವಾದ ರೋಚಕತೆ ಅರ್ಧ ಗಂಟೆ ಬಳಿಕ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ.


ಇದನ್ನೂ ಓದಿ: T20 World Cup 2022: ಫೇಕ್ ಫೀಲ್ಡಿಂಗ್ ನಿಯಮ ಏನು ಹೇಳುತ್ತೆ? ಕೊಹ್ಲಿ ನಿಜವಾಗಿಯೂ ತಪ್ಪು ಮಾಡಿದ್ದಾರಾ?


ಮೆಲ್ಬೋರ್ನ್​ನಲ್ಲಿ ಮಳೆ ಸಾಧ್ಯತೆ:


ನವೆಂಬರ್ 6 ಭಾನುವಾರದಂದು ಟೀಂ ಇಂಡಿಯಾ ಸೂಪರ್-12 ಹಂತದ ಕೊನೆಯ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆಸ್ಟ್ರೇಲಿಯನ್ ಬ್ಯೂರೋ ಆಫ್ ಮೆಟಿಯರಾಲಜಿ ವೆಬ್‌ಸೈಟ್‌ನಲ್ಲಿನ ಮಾಹಿತಿ ಪ್ರಕಾರ, ಮೆಲ್ಬೋರ್ನ್‌ನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ. 20ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಎಂದು ತಿಳಿಸಿದೆ.


ಜಿಂಬಾಬ್ವೆ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ 11:


ಕೆಎಲ್ ರಾಹುಲ್, ರೋಹಿತ್ ಶರ್ಮಾ (C), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಹೂಡಾ, ರಿಷಭ್ ಪಂತ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್

Published by:shrikrishna bhat
First published: