IND vs ZIM: ನಾಳೆಯಿಂದ ಭಾರತ-ಜಿಂಬಾಬ್ವೆ ಸರಣಿ ಆರಂಭ, ಯಾವ ಚಾನೆಲ್​ನಲ್ಲಿ ಪ್ರಸಾರ? ಎಷ್ಟು ಗಂಟೆಗೆ? ಇಲ್ಲಿದೆ ವಿವರ

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ನಾಳೆಯಿಂದ ಆರಂಭವಾಗಲಿದೆ. ಜಿಂಬಾಬ್ವೆಯ ಹರಾರೆಯ ಮೈದಾನದಲ್ಲಿ 3 ಏಕದಿನ ಪಂದ್ಯಗಳು ಜರುಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟೀಂ ಇಂಡಿಯಾ ಮತ್ತು ಜಿಂಬಾಬ್ವೆ ಪ್ರವಾಸದಲ್ಲಿದೆ. ಈಗಾಗಲೇ ಬಿಸಿಸಿಐ (BCCI) ಟಿಂ ಇಂಡಿಯಾವನ್ನು (Team India) ಪ್ರಕಟಿಸಿದೆ. ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಜಿಂಬಾಬ್ವೆಗೆ ತೆರಳಿದೆ.  ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರನ್ನು ಜಿಂಬಾಬ್ವೆ ಸರಣಿಗೆ ನಾಯಕರನ್ನಾಗಿ BCCI ಆಯ್ಕೆ ಮಾಡಿದ್ದು,  ಶಿಖರ್ ಧವನ್ (Shikhara Dhawan) ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಲಾಗಿದೆ. ನಾಳೆಯಿಂದ ಆರಂಭವಾಗಲಿರುವ ಜಿಂಬಾಬ್ವೆ ನಡುವಿನ ಪಂದ್ಯವು  ಯಾವ ಚಾನಲ್​ನಲ್ಲಿ ಪ್ರಸಾರವಾಗಲಿದೆ? ಎಷ್ಟು ಗಂಟೆಯಿಂದ ಪಂದ್ಯ ಆರಂಭವಾಗಲಿದೆ? ಸೇರಿದಂತೆ ಸರಣಿಯ ಸಂಪೂರ್ಣ ವಿವರ ಈ ಕೆಳಗಿನಂತಿದೆ.

IND vs ZIM ಪಂದ್ಯದ ವಿವರ:

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ನಾಳೆಯಿಂದ ಆರಂಭವಾಗಲಿದೆ. ಜಿಂಬಾಬ್ವೆಯ ಹರಾರೆಯ ಮೈದಾನದಲ್ಲಿ 3 ಏಕದಿನ ಪಂದ್ಯಗಳು ಜರುಗಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ. ಇನ್ನು, ಭಾರತ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿಯು ಸೋನಿ ಚಾನೆಲ್​ ನೇರೆ ಪ್ರಸಾರ ಮಾಡಲಿದೆ.  ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

IND vs ZIM ಏಕದಿನ ಸರಣಿಯ ವೇಳಾಪಟ್ಟಿ:

ಭಾರತ-ಜಿಂಬಾಬ್ವೆ ಮೊದಲ ಏಕದಿನ ಪಂದ್ಯ - 18 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 2ನೇ ಏಕದಿನ ಪಂದ್ಯ - 20 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 3ನೇ ಏಕದಿನ ಪಂದ್ಯ - 22 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್

ಜಿಂಬಾಬ್ವೆ ಸರಣಿಗೆ ಆರ್​ಸಿಬಿ ಆಟಗಾರ ಆಯ್ಕೆ:

ವಾಷಿಂಗ್ಟನ್ ಸುಂದರ್ ಗಾಯಗೊಂಡ ನಂತರ, ಬಿಸಿಸಿಐ ಅವರ ಬದಲಿಗೆ ಆಲ್ ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಕೊಂಡಿದ್ದಾರೆ. ಬಂಗಾಳದ ಶಹಬಾಜ್ ಅಹ್ಮದ್ ಪ್ರಥಮ ದರ್ಜೆ ಮತ್ತು ಲೀಸ್ಟ್ ಎ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 16 ಪಂದ್ಯಗಳನ್ನು ಆಡುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಶಹಬಾಜ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: IND vs ZIM: ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ RCB ಆಟಗಾರ, ಜಿಂಬಾಬ್ವೆ ಸರಣಿಯಿಂದ ಸುಂದರ್​ ಔಟ್​

ಜಿಂಬಾಬ್ವೆ - ಭಾರತ ತಂಡಗಳು:

ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್.

ಇದನ್ನೂ ಓದಿ: IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯಕ್ಕೆ ದಿನಗಣನೆ, ಟಿಕೆಟ್​ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್​ ಫ್ಯಾನ್ಸ್!

ಜಿಂಬಾಬ್ವೆ ತಂಡ:  ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಾಂಗಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನೊಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾರ್ವಾ, ರಿಚರ್ಡ್‌ ನ್ಗಾರ್ವಾ, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ
Published by:shrikrishna bhat
First published: